ಅಮೆರಿಕ ನಾಗರಿಕನಿಗೆ ಸೌದಿಯಲ್ಲಿ ಜೈಲು: ಅಮೆರಿಕ ಕೆಂಡ
Team Udayavani, Oct 19, 2022, 7:19 PM IST
ವಾಷಿಂಗ್ಟನ್: ತನ್ನ ನಾಗರಿಕನನ್ನು ಸೌದಿ ಅರೇಬಿಯದಲ್ಲಿ 16 ವರ್ಷ ಜೈಲಿಗೆ ತಳ್ಳಿರುವುದರ ವಿರುದ್ಧ ಅಮೆರಿಕ ಕಿಡಿಕಾರಿದೆ.
ಕೇವಲ ಸೌದಿ ರಾಜ ಮನೆತನವನ್ನು ಟೀಕಿಸಿದ್ದಕ್ಕೆ, 16 ವರ್ಷ ಜೈಲುಶಿಕ್ಷೆ ವಿಧಿಸಿದ್ದು ಅಮೆರಿಕವನ್ನು ಕೆರಳಿಸಿದೆ.
ಎರಡೂ ದೇಶಗಳ ನಡುವೆ ಮತ್ತೆ ಸಂಬಂಧ ಹಳಸುವ ಸಾಧ್ಯತೆಗಳು ಹೆಚ್ಚಾಗಿವೆ. ಸೌದಿ ಮೂಲದ ಅಮೆರಿಕ ನಾಗರಿಕ ಸಾದ್ ಅಲ್ಮಾದಿ ತಮ್ಮ ಕುಟುಂಬಸ್ಥರನ್ನು ಭೇಟಿ ಮಾಡಲೆಂದು ಕಳೆದ ನವೆಂಬರ್‌ನಲ್ಲಿ ಸೌದಿಗೆ ತೆರಳಿದ್ದರು. ಆಗ ವಿಮಾನ ನಿಲ್ದಾಣದಲ್ಲೇ ಅವರನ್ನು ಬಂಧಿಸಲಾಗಿತ್ತು.
ಹಿಂದಿನ ಏಳು ವರ್ಷಗಳಲ್ಲಿ ಅವರು ಸೌದಿ ರಾಜ ಮನೆತನದ ವಿರುದ್ಧ 14 ಟ್ವೀಟ್ ಮಾಡಿದ್ದರು ಎನ್ನುವುದೇ ಇಂತಹ ಉಗ್ರಕ್ರಮಕ್ಕೆ ಕಾರಣ! ಅವರಿಗೆ ಇತ್ತೀಚೆಗೆ ಅ.3ರಂದು 16 ವರ್ಷ ಜೈಲುಶಿಕ್ಷೆ ಹೇರಿದ್ದಲ್ಲದೇ, 16 ವರ್ಷ ಪ್ರಯಾಣಕ್ಕೂ ನಿರ್ಬಂಧ ವಿಧಿಸಲಾಗಿದೆ.
ಸೌದಿ ಆಡಳಿತದ ಭ್ರಷ್ಟಾಚಾರ ಮತ್ತು ಪತ್ರಕರ್ತ ಜಮಾಲ್ ಖಶೊಗ್ಗಿ ಹತ್ಯೆಯನ್ನು ವಿರೋಧಿಸಿ ಸಾದ್ ಟ್ವೀಟ್ ಮಾಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕದನ ವಿರಾಮ: 3 ಒತ್ತೆಯಾಳುಗಳ ಬಿಡುಗಡೆ ಬೆನ್ನಲ್ಲೇ 90 ಕೈದಿಗಳನ್ನು ಬಿಡುಗಡೆ ಮಾಡಿದ ಇಸ್ರೇಲ್
Israel-Hamas;ಅಂತೂ ಕದನ ವಿರಾಮ ಜಾರಿ: ಮೂವರು ಇಸ್ರೇಲಿಗರ ಬಿಡುಗಡೆ
Davos; ಇಂದು ವಿಶ್ವ ಆರ್ಥಿಕ ವೇದಿಕೆ ವಾರ್ಷಿಕ ಸಭೆ ಆರಂಭ
Donald Trump ಪ್ರಮಾಣವಚನ: ಭೋಜನಕೂಟದಲ್ಲಿ ಮುಖೇಶ್ ಮತ್ತು ನೀತಾ ಅಂಬಾನಿ
America: ಟ್ರಂಪ್ ಪ್ರಮಾಣದ ಬೆನ್ನಲ್ಲೇ ಅಕ್ರಮ ವಲಸಿಗರು ಹೊರಕ್ಕೆ?
MUST WATCH
ಹೊಸ ಸೇರ್ಪಡೆ
Padubidri: ಸ್ಕೂಟಿಗೆ ಈಚರ್ ವಾಹನ ಢಿಕ್ಕಿ; ಸವಾರನಿಗೆ ಗಾಯ
BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ
R-Day parade; ಗಣರಾಜ್ಯೋತ್ಸವ ಪರೇಡ್ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು
ಅಖಿಲ ಭಾರತ ಅಂತರ್ ವಿ.ವಿ.ವೇಟ್ಲಿಫ್ಟಿಂಗ್:ಮಂಗಳೂರು ವಿವಿ ರನ್ನರ್ ಅಪ್
Farmers; ಕಬ್ಬು ಹಾನಿಗೆ ಪರಿಹಾರ ನಿಧಿ,ತೊಗರಿಗೆ ಬೆಂಬಲ ಬೆಲೆ: ಸಚಿವ ಶಿವಾನಂದ ಪಾಟೀಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.