ನಿಲುವು ಬದಲು: ಬಿಕಿನಿ ಧರಿಸಲಿರುವ ಸೌದಿ ಸ್ತ್ರೀಯರು!
Team Udayavani, Aug 4, 2017, 8:40 AM IST
ಹೊಸದಿಲ್ಲಿ: ಸಂಪ್ರದಾಯವಾದಿಗಳ ನಾಡಿನಲ್ಲಿ ‘ಕರಿ ಪರದೆ’ಯ ಹಿಂದೆ ಅವಿತೇ ಬದುಕುತ್ತಿದ್ದ ಮಹಿಳೆಗೀಗ ಸ್ವಾತಂತ್ರ್ಯದ ಅನುಭವ. ಮೈ ಚರ್ಮ ಚೂರು ಕೂಡ ಕಾಣದಂತೆ ಬಟ್ಟೆ ತೊಟ್ಟು, ಅಸ್ತಿತ್ವದಲ್ಲಿದ್ದೂ ಅಜ್ಞಾತದಲ್ಲಿ ದಿನ ದೂಡುತ್ತಿದ್ದ ಸ್ತ್ರೀಯರಿನ್ನು ಬಿಕಿನಿ ಧರಿಸಿ ಬೀಚ್‌ನಲ್ಲಿ ಸುತ್ತಾಡಬಹುದು! ಇಂಥ ಅಚ್ಚರಿ ಬೆಳವಣಿಗೆಗೆ ಕಾರಣ ‘ರೆಡ್ ಸೀ ರೆಸಾರ್ಟ್’.
ಇದು ಸೌದಿ ಅರೇಬಿಯಾದ ಮಹಿಳೆಯರಿಗೆ ಸಿಕ್ಕಿದ ‘ಅರೆಕಾಲಿಕ ಸ್ವಾತಂತ್ರ್ಯ’. ಹಾಗೇ ಸೌದಿಯಂಥ ಸೌದಿಯಲ್ಲೇ ಇಷ್ಟೊಂದು ಮುಕ್ತಾ ಮುಕ್ತ ಅವಕಾಶ ನೀಡುವುದರ ಹಿಂದೆ ವಾಣಿಜ್ಯ ಉದ್ದೇಶ ಅಡಗಿದೆ ಎಂದು ಬಿಡಿಸಿ ಹೇಳಬೇಕಿಲ್ಲ. ಸಂಪ್ರದಾಯದ ಬಟ್ಟೆಯನ್ನು ಕಳಚಿ ಕೊಂಚ ಪಕ್ಕಕ್ಕಿರಿಸಿದ ದುಬೈ, ಪ್ರವಾಸೋದ್ಯಮ ಅಭಿವೃದ್ಧಿಗೆ ಆದ್ಯತೆ ನೀಡಿ, ಅಗಾಧವಾಗಿ ಬೆಳೆದದ್ದನ್ನು ಕಣ್ಣಾರೆ ಕಂಡ ಸೌದಿ ದೊರೆ ಮಹಮ್ಮದ್ ಬಿನ್ ಸಲ್ಮಾನ್, ಸೌದಿಯ ವಾಯವ್ಯ ಕರಾವಳಿಯಲ್ಲಿನ ಬೀಚ್‌ನಲ್ಲಿ ಐಷಾರಾಮಿ ರೆಡ್ ಸೀ ರೆಸಾರ್ಟ್ ಆರಂಭಿಸುವುದಾಗಿ ಘೋಷಿಸಿದ್ದಾರೆ. ಈ ಬೀಚ್ ರೆಸಾರ್ಟ್‌ಗೆ ಭೇಟಿ ನೀಡುವ ಮುಸ್ಲಿಂ ಮಹಿಳೆಯರು ಬುರ್ಖಾ ಬದಲಿಗೆ ತಮ್ಮಿಷ್ಟದ ಉಡುಗೆ ಧರಿಸಬಹುದು. ಬೇಕಿದ್ದರೆ ತುಂಡುಡುಗೆ (ಬಿಕಿನಿ) ತೊಟ್ಟು ಸಮುದ್ರ ತಟದಲ್ಲಿ ಸುತ್ತಾಡಬಹುದು ಎಂದು ದೊರೆ ಹೇಳಿದ್ದಾರೆ.
ಈ ರೆಸಾರ್ಟ್ ಅನ್ನು ಮಧ್ಯಪ್ರಾಚ್ಯದ ಪ್ರಮುಖ ಪ್ರವಾಸಿ ಕೇಂದ್ರವಾಗಿಸುವ ಉದ್ದೇಶ ಹೊಂದಿರುವ ಸಲ್ಮಾನ್, ಅದಕ್ಕಾಗಿ, ಮಹಿಳೆಯರಿಗೆ ತುಂಡುಡುಗೆ ತೊಡಲುವಕಾಶ ನೀಡಿದ್ದಾರೆ. ಈ ಮೂಲಕ ಅಂತಾರಾಷ್ಟ್ರೀಯ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಮಹಿಳೆಯರನ್ನು ದಾಳವಾಗಿ ಬಳಸುತ್ತಿದ್ದಾರೆ ಎಂಬ ಟೀಕೆ ಕೇಳಿಬರುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್ ಪರೀಕ್ಷೆ
Iran: ಹಿಜಾಬ್ ನಿರಾಕರಿಸಿದರೆ ವಿಶೇಷ ಕ್ಲಿನಿಕ್: ಇರಾನ್ ತೀರ್ಮಾನಕ್ಕೆ ಆಕ್ರೋಶ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
MUST WATCH
ಹೊಸ ಸೇರ್ಪಡೆ
Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ
IPL Auction: ಸಂಪೂರ್ಣ ಐಪಿಎಲ್ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.