ಪಾದೂರಿನಲ್ಲಿ ತೈಲ ಶೇಖರಣೆಗೆ ಮುಂದಾದ ಸೌದಿ ಅರಾಮ್ಕೋ
Team Udayavani, Oct 30, 2019, 4:03 PM IST
ರಿಯಾಧ್: ದೇಶದಲ್ಲೇ ಅತಿ ದೊಡ್ಡ ಪೆಟ್ರೋಲಿಯಂ ದಾಸ್ತಾನು ಕೇಂದ್ರ, ಉಡುಪಿ ಜಿಲ್ಲೆಯ ಪಾದೂರಿನ ಸಂಗ್ರಹಾಗಾರದಲ್ಲಿ ಸೌದಿ ಅರೇಬಿಯಾದ ಪೆಟ್ರೋಲಿಯಂ ತಯಾರಿಕೆ ಕಂಪೆನಿ ಸೌದಿ ಅರಾಮ್ಕೋ ಪೆಟ್ರೋಲಿಯಂ ದಾಸ್ತಾನು ಮಾಡಲಿದೆ.
ಸುಮಾರು 46 ಲಕ್ಷ ಬ್ಯಾರೆಲ್ನಷ್ಟು ತೈಲವನ್ನು ಅದು ಪಾದೂರಿನಲ್ಲಿ ಶೇಖರಣೆ ಮಾಡಲಿದೆ. ಇದರಿಂದ ವ್ಯೂಹಾತ್ಮಕವಾಗಿ ಮತ್ತು ತುರ್ತು ಸಂದರ್ಭಗಳಲ್ಲಿಯೂ ಭಾರತಕ್ಕೆ ಪೆಟ್ರೋಲಿಯಂ ಉತ್ಪನ್ನಗಳು ಅಡೆತಡೆ ಇಲ್ಲದೆ ಲಭ್ಯವಾಗಲಿದೆ.
ಪಾದೂರು ತೈಲ ಶೇಖರಣೆ ಘಟಕದಲ್ಲಿ ಒಂದು ಕಂಪಾರ್ಟ್ಮೆಂಟ್ನಲ್ಲಿ ತೈಲ ಶೇಖರಣೆಗೆ ಸೌದಿ ಅರಾಮ್ಕೋ ಒಪ್ಪಂದ ಮಾಡಿಕೊಂಡಿದೆ. ಪಾದೂರಿನಲ್ಲಿ ಸುಮಾರು 3.6 ಕೋಟಿ ಬ್ಯಾರೆಲ್ ತೈಲ ಶೇಖರಣೆ ಮಾಡಬಹುದು. ಹೆಚ್ಚುವರಿ ತೈಲವನ್ನು ಸೌದಿ ಅರಾಮ್ಕೋ ಅಲ್ಲಿ ಶೇಖರಣೆ ಮಾಡಿದರೂ, ಅವುಗಳನ್ನು ಭಾರತೀಯ ತೈಲ ಕಂಪೆನಿಗಳಿಗೆ ಮಾರಾಟ ಮಾಡಲಿದೆ. ತನ್ನ ಬೇಡಿಕೆಯ ಶೇ.80ರಷ್ಟು ತೈಲವನ್ನು ಭಾರತ ಹೊರದೇಶಗಳಿಂದ ಆಮದು ಮಾಡಿಕೊಳ್ಳುತ್ತಿದೆ. ಪಾದೂರಿನಲ್ಲಿ ತೈಲ ಶೇಖರಣೆಗೆ ಮೊದಲ ಒಪ್ಪಂದ ಮಾಡಿದ ಕಂಪೆನಿ ಸೌದಿಯ ಸೌದಿ ಅರಾಮ್ಕೋ ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Beirut ಮೇಲೆ ದಾಳಿ…ಇಸ್ರೇಲ್ ಮೇಲೆ 250 ರಾಕೆಟ್ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
Elon Musk: ಭಾರತದಲ್ಲಿ 1 ದಿನದಲ್ಲಿ 6.4 ಕೋಟಿ ಮತ ಎಣಿಕೆ: ಉದ್ಯಮಿ ಮಸ್ಕ್ ಮೆಚ್ಚುಗೆ!
Sheikh Hasina, ಅದಾನಿ ನಡುವಿನ ಒಪ್ಪಂದದ ಪರಿಶೀಲನೆಗೆ ಸಮಿತಿ ರಚಿಸಿದ ಬಾಂಗ್ಲಾದೇಶ!
Nijjar ಹ*ತ್ಯೆಗೆ ಮೋದಿ ನಂಟು ವರದಿ: “ಗುಪ್ತಚರರ’ ವಿರುದ್ಧ ಟ್ರಾಡೊ ಗರಂ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ
Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ
ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು
Gurupura: ನಾಡಕಚೇರಿ ಕಟ್ಟಡ ಉದ್ಘಾಟನೆಗೆ ಸಿದ್ಧ
Health Card: ಮಣಿಪಾಲ ಆರೋಗ್ಯಕಾರ್ಡ್ ನೋಂದಾವಣೆಗೆ ಐದು ದಿನ ಬಾಕಿ: ನ.30 ಕೊನೆಯ ದಿನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.