ಸೂರ್ಯನಿಗಿಂತ 70 ಪಟ್ಟು ದೈತ್ಯ ಕಪ್ಪುರಂಧ್ರ ಪತ್ತೆ
Team Udayavani, Nov 29, 2019, 5:23 AM IST
ಬೀಜಿಂಗ್: ಸೂರ್ಯನಿಗಿಂತ ಬರೋಬ್ಬರಿ 70 ಪಟ್ಟು ದೈತ್ಯವಾದ ಯಾರೂ ಊಹಿಸಿರದಂಥ ಕಪ್ಪು ರಂಧ್ರವೊಂದು ಕ್ಷೀರಪಥದ ತಾರಾಗಣದಲ್ಲಿ ಪತ್ತೆಯಾಗಿದೆ. ನಕ್ಷತ್ರಗಳ ವಿಕಸನದ ಕುರಿತು ಸದ್ಯಕ್ಕಿರುವ ಮಾದರಿಗಳಿಗೇ ಇದು ಸವಾಲೆಸೆಯುವಂತಿದೆ ಎಂದು ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ.
ಕ್ಷೀರಪಥದಲ್ಲಿ ಸುಮಾರು 100 ದಶಲಕ್ಷ ಕಪ್ಪು ರಂಧ್ರಗಳಿವೆ (ಬೃಹತ್ ನಕ್ಷತ್ರಗಳ ಪತನದಿಂದ ಸೃಷ್ಟಿಯಾಗು ವಂಥದ್ದು). ಈವರೆಗೆ ಕಂಡುಕೊಂಡಂತೆ ನಮ್ಮ ತಾರಾಪುಂಜ ದಲ್ಲಿರುವ ಒಂದು ಕಪ್ಪುರಂಧ್ರದ ದ್ರವ್ಯರಾಶಿಯು ಸೂರ್ಯನಿಗಿಂತ ಗರಿಷ್ಠ 20 ಪಟ್ಟು ಬೃಹತ್ ಆಗಿದೆಯೇ ಹೊರತು, ಅದಕ್ಕಿಂತ ದೈತ್ಯ ವಾದದ್ದು ಎಂದೂ ಪತ್ತೆಯಾಗಿರಲಿಲ್ಲ. ಆದರೆ, ಈಗ ಚೈನೀಸ್ ಅಕಾಡೆಮಿ ಆಫ್ ಸೈನ್ಸಸ್‌ನ ರಾಷ್ಟ್ರೀಯ ಖಗೋಳ ವೀಕ್ಷಣಾಲಯದ ವಿಜ್ಞಾನಿಗಳ ನೇತೃತ್ವದ ಅಂತಾರಾಷ್ಟ್ರೀಯ ತಂಡವು ಎಲ್ಲ ಊಹೆ ಗಳನ್ನೂ ಸುಳ್ಳಾಗಿಸಿ ಈ ದೈತ್ಯ ಕಪ್ಪುರಂಧ್ರವನ್ನು ಪತ್ತೆ ಮಾಡಿದೆ. ಇದಕ್ಕೆ ಎಲ್‌ಬಿ-1 ಎಂದು ಹೆಸರಿಡಲಾಗಿದ್ದು, ಇದು ಭೂಮಿಯಿಂದ 15 ಸಾವಿರ ಜ್ಯೋತಿರ್ವರ್ಷಗಳಷ್ಟು ದೂರ ದಲ್ಲಿದೆ. ಅಲ್ಲದೆ ಸೂರ್ಯನಿಗಿಂತ 70 ಪಟ್ಟು ದೈತ್ಯಾಕಾರದ್ದಾಗಿದೆ. ಇಂಥದ್ದೊಂದು ಅಭೂತಪೂರ್ವ ಕಪ್ಪುರಂಧ್ರ ಜನ್ಮತಾಳಿದ್ದಾದರೂ ಹೇಗೆ ಎಂಬ ಬಗ್ಗೆ ಅಧ್ಯಯನ ನಡೆಯಬೇಕಾಗಿದೆ ಎಂದಿದ್ದಾರೆ ಪ್ರೊಫೆಸರ್ ಲಿಯು ಜಿಫೆಂಗ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
America: ಬೋಯಿಂಗ್ ಸಂಸ್ಥೆಯ 17,000 ಉದ್ಯೋಗಿಗಳು ಶೀಘ್ರವೇ ವಜಾ
MUST WATCH
ಹೊಸ ಸೇರ್ಪಡೆ
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
ಬೆಳಗಾವಿ: ಮಾನವ ಕಳ್ಳ ಸಾಗಾಣಿಕೆ-ಜೀತ ಪದ್ಧತಿ ದೊಡ್ಡ ಸಮಸ್ಯೆ
Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ
Shimoga; ವಿಜಯೇಂದ್ರರನ್ನು ಕಟ್ಟಿ ಹಾಕಲು ಕಾಂಗ್ರೆಸ್ ನಿಂದ ಸುಳ್ಳು ಆರೋಪ: ರಾಘವೇಂದ್ರ
Anandapura: ಸಾಲ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.