ಮಂಗಳನ ಮೇಲೆ ಜೀವದ ಹುಡುಕಾಟ!
ಏಳು ತಿಂಗಳ ಬಳಿಕ ಯಶಸ್ವಿಯಾಗಿ ಇಳಿದ ನಾಸಾದ ಪರ್ಸಿವಿಯರೆನ್ಸ್
Team Udayavani, Feb 20, 2021, 6:50 AM IST
ವಾಷಿಂಗ್ಟನ್: ಏಳು ತಿಂಗಳುಗಳ ಹಿಂದೆ ಭೂಮಿಯಿಂದ ಹೊರಟಿದ್ದ ನಾಸಾದ ಪರ್ಸಿವಿಯರೆನ್ಸ್ ರೋವರ್ ಮಂಗಳನಲ್ಲಿ ಇಳಿದಿದೆ. ಭಾರತೀಯ ಕಾಲಮಾನದ ಪ್ರಕಾರ ಶುಕ್ರವಾರ ಬೆಳಗ್ಗೆ ಮಂಗಳನ ಜೆಝೋರೋ ಎಂಬ ಕುಳಿ ಪ್ರದೇಶದಲ್ಲಿ ಇದು ಇಳಿದಿದೆ. ರೋವರ್‌ನ ನಿಯಂತ್ರಣದ ಹೊಣೆ ಹೊತ್ತಿದ್ದ ಬೆಂಗಳೂರು ಮೂಲದ ನಾಸಾ ವಿಜ್ಞಾನಿ ಡಾ| ಸ್ವಾತಿ ಮೋಹನ್ ಅವರು ಈ ಘೋಷಣೆ ಮಾಡಿದ್ದಾರೆ.
ಮಂಗಳನಲ್ಲೂ ಜೀವಿಗಳಿವೆಯೇ ಎಂಬ ಅಧ್ಯಯನಕ್ಕಾಗಿ ಈ ಯಾನ ಕೈಗೊಳ್ಳಲಾಗಿದೆ. ಅಲ್ಲಿಂದ ಕೆಲವು ಮಾದರಿಗಳನ್ನು ಅದು ಭೂಮಿಗೆ ತರಲಿದೆ. ಅಲ್ಲಿರುವ ಪ್ರಾಚೀನ ಸರೋವರದ ದಂಡೆ ಮತ್ತು ನದಿ ಮುಖಜ ಭೂಮಿಯ ಶಿಲೆ, ಅವಶೇಷಗಳನ್ನು ಶೋಧಿಸಲಿದೆ. ಭೂಗರ್ಭ ಶಾಸ್ತ್ರ, ಮಂಗಳನ ಹಿಂದಿನ ಹವಾಮಾನದ ಬಗ್ಗೆಯೂ ಅಧ್ಯಯನ ನಡೆಸಲಿದೆ.
ಮಂಗಳನ ಅಧ್ಯಯನ :
2030ರ ವರೆಗೆ ಮಂಗಳನ ಮೇಲೆ ಅಧ್ಯಯನ ಮಾಡಲಿದೆ. ಪ್ರಾಚೀನ ಸೂಕ್ಷ್ಮಾಣುಜೀವಿಗಳಿಗಾಗಿ ಕಲ್ಲು ಕೊರೆದು, ಗುಂಡಿ ತೋಡಿ ಶೋಧ ನಡೆಸಲಿದೆ. ಅಲ್ಲಿಂದ ಮಾದರಿಗಳನ್ನು ಸಂಗ್ರಹಿಸಿ ತರಲಿದೆ, ಚಿತ್ರಗಳನ್ನು ಕಳುಹಿಸಲಿದೆ.
ಇದು ಐದನೆಯದು :
ಮಂಗಳನ ಮೇಲಿಳಿದ ರೋವರ್‌ಗಳ ಪೈಕಿ ಇದು 5ನೆಯದು. ಎಲ್ಲವೂ ಅಮೆರಿಕದವು. ಇತ್ತೀಚೆಗಷ್ಟೇ ಚೀನದ ಉಪಗ್ರಹವೊಂದು ಮಂಗಳನ ಪರಿಧಿಯೊಳಗೆ ಪ್ರವೇಶಿಸಿದ್ದು, ಸದ್ಯದಲ್ಲೇ ಅಲ್ಲಿ ಇಳಿಯಬಹುದು!
ಸ್ವಾತಿ ಕೈಯಲ್ಲಿ ಯಾನದ ಸೂತ್ರ :
ಪರ್ಸಿವಿಯರೆನ್ಸ್ ಮಂಗಳನ ಅಂಗಳ ಮುಟ್ಟುವಲ್ಲಿ ಬೆಂಗಳೂರು ಮೂಲದ ಸ್ವಾತಿ ಮೋಹನ್ ಅವರ ಶ್ರಮ ಅಪಾರ. ಅದು ಮಂಗಳ ನಲ್ಲಿ ಇಳಿಯುತ್ತಿದ್ದಂತೆ ನಾಸಾದ ಕೇಂದ್ರ ಕಚೇರಿಯಲ್ಲಿ “ಟಚ್‌ಡೌನ್ ಕನ್‌ಫಮ್ಡ್ì’ ಎಂದು ಘೋಷಿಸಿದ್ದು ಇವರು. 7 ತಿಂಗಳ ಕಾಲ ಭೂಮಿಯಿಂದಲೇ ಸೂತ್ರ ಹಿಡಿದು ಮಾರ್ಗ ದರ್ಶನ, ನೇವಿಗೇಶನ್ ಮತ್ತು ನಿಯಂತ್ರಣದ ಜವಾಬ್ದಾರಿ ವಹಿಸಿದ್ದರು.
ಹೇಗಿದೆ ರೋವರ್? :
- ಎಸ್‌ಯುವಿಯಷ್ಟು ಗಾತ್ರ
- 7 ಅಡಿ ಉದ್ದದ ರೋಬ್ಯಾಟಿಕ್ ಕೈ
- 19 ಕೆಮರಾಗಳು
- 2 ಮೈಕ್ರೋಫೋನ್‌ಗಳು
- ಕಲ್ಲು ಕತ್ತರಿಸುವ ಉಪಕರಣಗಳು
ಇಳಿದದ್ದು ಎಲ್ಲಿ? :
ಮಂಗಳನ ಅಂಗಳದ ಜೆಝುರೋ ಕ್ರೇಟರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
Israel ನಡೆಸಿದ ಭಾರೀ ದಾಳಿಗೆ ಸಿರಿಯಾದಲ್ಲಿ ಲಘು ಭೂಕಂಪನ!
New York: ಅಮೆರಿಕದಲ್ಲಿ ಶೂಟೌಟ್: ಇಬ್ಬರ ಕೊಂದು ವಿದ್ಯಾರ್ಥಿನಿ ಆತ್ಮಹ*ತ್ಯೆ
Moscow: ಕೆಮಿಕಲ್ ಅಸ್ತ್ರ ಬಳಸಿದ್ದ ರಷ್ಯಾ ಪರಮಾಣು ರಕ್ಷಣಾಪಡೆ ಮುಖ್ಯಸ್ಥನ ಹತ್ಯೆ
Watch Video: ದ್ವೀಪರಾಷ್ಟ್ರ ವನವಾಟುನಲ್ಲಿ ಪ್ರಬಲ ಭೂಕಂಪ, ಹಲವಾರು ಕಟ್ಟಡ ಕುಸಿತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.