ಬ್ರಸೆಲ್ಸ್ ರೈಲು ನಿಲ್ದಾಣದಲ್ಲಿ ಸ್ಫೋಟ; ಶಂಕಿತ ಗುಂಡಿಗೆ ಬಲಿ, ಭದ್ರತ
Team Udayavani, Jun 21, 2017, 12:32 PM IST
ಬ್ರಸೆಲ್ಸ್ : ಇಲ್ಲಿನ ಸಿಟಿ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ವ್ಯಕ್ತಿಯೋರ್ವ ಉಪಕರಣವೊಂದನ್ನು ಸ್ಫೋಟಿಸಿದ ಘಟನೆಯನ್ನು ಅನುಸರಿಸಿ ರೈಲು ನಿಲ್ದಾಣದಲ್ಲಿ ಗರಿಷ್ಠ ಭದ್ರತೆಯನ್ನು ಆಯೋಜಿಸಲಾಗಿದೆ ಎಂದು ಬೆಲ್ಜಿಯನ್ ಅಧಿಕಾರಿ ತಿಳಿಸಿದ್ದಾರೆ.
ನಿನ್ನೆ ತಡರಾತ್ರಿ ವ್ಯಕ್ತಿಯೋರ್ವ ಸಣ್ಣ ಉಪಕರಣವೊಂದನ್ನು ಸ್ಫೋಟಿಸಿದಾಕ್ಷಣ ಆತನನ್ನು ಕೂಡಲೇ ಸೈನಿಕನೋರ್ವ ಗುಂಡಿಕ್ಕಿದ. ಗುಂಡೇಟಿಗೆ ಗುರಿಯಾದ ಆ ವ್ಯಕ್ತಿ ಬಳಿಕ ಕೊನೆಯುಸಿರೆಳೆದ. ಆತನ ಸ್ಫೋಟ ಕೃತ್ಯದಲ್ಲಿ ಯಾರೊಬ್ಬರೂ ಗಾಯಗೊಂಡಿರಲಿಲ್ಲ.
ಈ ಘಟನೆಯನ್ನು ಅನುಸರಿಸಿ ಭದ್ರತಾ ಕಾರಣಕ್ಕಾಗಿ ನಿನ್ನೆ ತಡರಾತ್ರಿ ಮುಚ್ಚಲ್ಪಟ್ಟಿದ್ದ ಸಿಟಿ ಸೆಂಟ್ರಲ್ ರೈಲು ಇಂದು ಬೆಳಗ್ಗೆ ಎಂದಿನಂತೆಯೇ ತೆರೆಯುವುದಿತ್ತು. ಆ ಪ್ರಕಾರ ಎಲ್ಲ ಸಿಬಂದಿಗಳು ಕರ್ತವ್ಯ ನಿರ್ವಹಣೆಗೆ ಆಗಮಿಸತೊಡಗಿದ್ದರು. ಆದರೆ ಪೊಲೀಸರು ಹಾಕಿದ್ದ ಭದ್ರತಾ ಬ್ಯಾರಿಕೇಡ್ಗಳನ್ನು ತೆರವು ಗೊಳಿಸಲಾಗಿರಲಿಲ್ಲ. ಅಂತೆಯೇ ರೈಲು ನಿಲ್ದಾಣ ಇಂದು ಬೆಳಗ್ಗೆ ಮುಚ್ಚಿತ್ತು.
ಯಾವುದೇ ರೀತಿಯ ಅತಿಶಯದ ಪ್ರತಿಕ್ರಿಯೆ ತೋರುವುದಕ್ಕಿಂತ ಗರಿಷ್ಠ ಮುನ್ನೆಚ್ಚರಿಕೆಯ ಕ್ರಮವಾಗಿ ಭದ್ರತೆಯನ್ನು ಬಿಗಿ ಗೊಳಿಸುವುದೇ ಸರಿ ಎಂದು ಬೆಲ್ಜಿಯಂ ನ ಒಳಾಡಳಿತ ಸಚಿವ ಜ್ಯಾನ್ ಜ್ಯಾಂಬನ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan: ಪಾಕ್ನಲ್ಲಿ ಹಿಂಸಾಚಾರ; ಒಟ್ಟು 37 ಮಂದಿ ಸಾವು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.