ಮದುವೆ ನಿಶ್ಚಯವಾಗಿದ್ದ ಪಾಕ್ ಜೋಡಿ ಸೆಲ್ಫಿ: ಅಪ್ಪನಿಂದ ಅವಳಿ ಹತ್ಯೆ
Team Udayavani, Dec 4, 2018, 11:11 AM IST
ಇಸ್ಲಾಮಾಬಾದ್ : ನಿಶ್ಚಿತಾರ್ಥ ನಡೆದಿದ್ದರೂ ಮದುವೆಗೆ ಮುನ್ನ ಪರಸ್ಪರ ಭೇಟಿಯಾಗಿ ಸೆಲ್ಫಿ ತೆಗೆದುಕೊಂಡ ಕಾರಣಕ್ಕೆ 19 ವರ್ಷ ಪ್ರಾಯದ ತರುಣಿಯನ್ನು ಆಕೆಯ ತಂದೆ ವಿಷವಿಕ್ಕಿ ಸಾಯಿಸಿ ಮದುವೆಯಾಗಲಿದ್ದ ಹುಡುಗನನ್ನು ಗುಂಡಿಕ್ಕಿ ಕೊಂದ “ಮರ್ಯಾದೆಗೇಡು ಹತ್ಯೆ’ ಪ್ರಕರಣ ಪಾಕಿಸ್ಥಾನದ ಕರಾಚಿಯಿಂದ ವರದಿಯಾಗಿದೆ.
ನಿಶ್ಚಿತಾರ್ಥವಾದ ತನ್ನ ಪುತ್ರಿ ಮದುವೆಯಾಗಲಿರುವ ಹುಡುಗನನ್ನು ಮದುವೆಗೆ ಮುನ್ನ ಭೇಟಿಯಾಗುತ್ತಿರುವುದು ಮತ್ತು ಸೆಲ್ಫಿ ತೆಗೆದುಕೊಂಡಿರುವುದನ್ನು ಅರಿತ ತಂದೆ ಆಕೆಗೆ ವಿಷ ಉಣಿಸಿ ಕೊಂದು ಬಹುತೇಕ ಅದೇ ಹೊತ್ತಿನಲ್ಲಿ, ಆಕೆಯನ್ನು ವರಿಸುವ ಹುಡುಗನನ್ನು ಕೂಡ ಗುಂಡಿಕ್ಕಿ ಕೊಂದನೆಂದು ಡಾನ್ ದೈನಿಕ ವರದಿ ಮಾಡಿದೆ.
ಹುಡುಗಿಯ ತಾಯಿಯು ತನ್ನ ಮಗಳು ಮತ್ತು ಆಕೆಯನ್ನು ವರಿಸುವ ಹುಡುಗನನ್ನು ತನ್ನ ಪತಿಯೇ ಹತ್ಯೆಗೈದಿರುವುದನ್ನು ಶಂಕಿಸಿ ಪೊಲೀಸರಿಗೆ ದೂರು ನೀಡಿದ್ದಳು.
ಆ ದೂರಿನಲ್ಲಿ ಆಕೆ ತನ್ನ ಸಹೋದರಿ ಮತ್ತು ಆಕೆಯ ಪುತ್ರ (ತನ್ನ ಮಗಳನ್ನು ವರಿಸಲಿದ್ದ ಹುಡುಗ) ತನ್ನ ಮಗಳೊಂದಿಗಿನ ನಿಶ್ಚಿತಾರ್ಥದ ಬಳಿಕ ಒಂದು ಬಾರಿ ತನ್ನ ಮನೆಗೆ ಬಂದಿದ್ದಾಗ ಭಾವೀ ವಧು-ವರ ಪರಸ್ಪರ ಮಾತನಾಡಿಕೊಂಡು ಸೆಲ್ಫಿ ತೆಗೆದುಕೊಂಡಿದ್ದರು ಎಂದು ಹೇಳಿದ್ದಳು.
ಪೊಲೀಸರು ಈ ಅವಳಿ ಕೊಲೆಯ ಬಗ್ಗೆ ತನಿಖೆ ನಡೆಸಿದಾಗ ಹುಡುಗಿಯ ತಂದೆ ಮತ್ತು ಅಜ್ಜ ಕೂಡಿಕೊಂಡು ‘ಮನೆ ಮರ್ಯಾದೆ ಉಳಿಸುವ ಕಾರಣಕ್ಕೆ’ ಈ ಅವಳಿ ಹತ್ಯೆ ನಡೆಸಿದರೆಂಬುದು ಬಯಲಾಯಿತು. ಅಂತೆಯೇ ಪೊಲೀಸರು ಹುಡುಗಿಯ ತಂದೆ ಮತ್ತು ಅಜ್ಜನನ್ನು ಬಂಧಿಸಿದರು.
ವಿಷಯ ಪೊಲೀಸರಲ್ಲಿಗೆ ಹೋಗುವ ಮುನ್ನ ಹುಡುಗಿಯ ತಂದೆಯು ತನ್ನ ಮಗಳು ವಿಷ ಸೇವಿಸಿ ಸತ್ತಿರುವುದಾಗಿ ಎಲ್ಲರಲ್ಲಿ ಹೇಳಿದ್ದ. ಅಂತೆಯೇ ಆಕೆಯ ಶವದ ಮರಣೋತ್ತರ ಪರೀಕ್ಷೆ ಇತ್ಯಾದಿ ಯಾವುದನ್ನೂ ನಡೆಸದೆ ತರಾತುರಿಯಲ್ಲಿ ಶವ ದಫನ ಮಾಡಿಸಿದ್ದ.
ಪೊಲೀಸರು ಇದೀಗ ಹುಡುಗಿಯ ಶವವನ್ನು ಸಮಾಧಿಯಿಂದ ಮೇಲಕ್ಕೆತ್ತಿ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಇತ್ತ ಮಗಳನ್ನು ವಿಷ ಉಣಿಸಿ ಕೊಂದ ಬಳಿಕ ಆಕೆಯ ಅಪ್ಪನು ಬಹುತೇಕ ಅದೇ ಹೊತ್ತಿನಲ್ಲಿ ಆಕೆಯನ್ನು ವರಿಸಲಿದ್ದ ಹುಡುಗನನ್ನು ಕೂಡ ಗುಂಡಿಕ್ಕಿ ಸಾಯಿಸಿರುವುದು ತನಿಖೆಯಿಂದ ಬಹಿರಂಗವಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.