ಹಿರಿಯ ನಟ, ಚಿತ್ರಸಾಹಿತಿ ಖಾದರ್ ಖಾನ್ ಇನ್ನಿಲ್ಲ
Team Udayavani, Jan 2, 2019, 4:15 AM IST
ಟೊರೊಂಟೊ: ಬಾಲಿವುಡ್‌ನ ಹಿರಿಯ ನಟ ಹಾಗೂ ಚಿತ್ರ ಸಾಹಿತಿ ಖಾದರ್ ಖಾನ್ (81) ಟೊರೊಂಟೋದ ಆಸ್ಪತ್ರೆಯೊಂದರಲ್ಲಿ ಡಿ. 31ರ ರಾತ್ರಿ ನಿಧನರಾಗಿದ್ದಾರೆ. ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಟೊರೊಂಟೋದ ಸ್ಥಳೀಯ ಕಾಲಮಾನ ಡಿ. 31ರ ಸಂಜೆ 6 ಗಂಟೆ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ.
ತಮ್ಮ ಮಗ ಹಾಗೂ ಸೊಸೆಯೊಂದಿಗೆ ಕೆನಡಾದಲ್ಲಿ ವಾಸವಿದ್ದ ಅವರು, ಇತ್ತೀಚಿನ ವರ್ಷಗಳಲ್ಲಿ ಪ್ರೋಗ್ರೆಸ್ಸಿವ್ ಸುಪ್ರಾನ್ಯೂಕ್ಲಿಯರ್ ಪಾಲ್ಸಿ ಎಂಬ ನ್ಯೂನತೆಗೂ ಒಳಗಾಗಿದ್ದು, ದೇಹದ ಮೇಲಿನ ನಿಯಂತ್ರಣ ಕಳೆದುಕೊಂಡಿದ್ದರು. ಇತ್ತೀಚೆಗೆ ಉಸಿರಾಟದ ತೊಂದರೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಭಾನುವಾರ ಮಧ್ಯಾಹ್ನದಿಂದ ಅವರು ಕೋಮಾ ಸ್ಥಿತಿಗೆ ತಲುಪಿದ್ದರೆಂದು ತಿಳಿಸಿರುವ ಅವರ ಪುತ್ರ ಹಾಗೂ ನಟ ಸಫìರಾಜ್, ಮೃತರ ಅಂತಿಮ ವಿಧಿ ವಿಧಾನಗಳನ್ನು ಕೆನಡಾದಲ್ಲಿಯೇ ನೆರವೇರಿಸಲಾಗುತ್ತದೆ ಎಂದಿದ್ದಾರೆ.
ಗಣ್ಯರ ಶೋಕ: ಖಾನ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿರುವ ಪ್ರಧಾನಿ ಮೋದಿ, “ತಮ್ಮಲ್ಲಿನ ಅನಘÂì ನಟನೆ ಹಾಗೂ ಬರವಣಿಗೆಯ ಚಾತುರ್ಯದಿಂದ ಬೆಳ್ಳಿ ತೆರೆಯನ್ನು ಬೆಳಗಿದ ಖಾನ್‌ರನ್ನು ಕಳೆದುಕೊಂಡ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಸಿಗಲಿ’ ಎಂದಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೂಡ ಶೋಕ ವ್ಯಕ್ತಪಡಿಸಿದ್ದು, ಖಾನ್‌ರ ಅನುಪಸ್ಥಿತಿ ಎಂದೆಂದಿಗೂ ಕಾಡಲಿದೆ ಎಂದಿದ್ದರೆ, ಖಾನ್ ಜತೆಗೆ ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿರುವ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್, “”ನನ್ನ ಹಲವಾರು ಚಿತ್ರಗಳ ಯಶಸ್ಸಿನಲ್ಲಿ ಅವರು ಬರೆದ ಸಂಭಾಷಣೆಯದ್ದು ಮಹತ್ವದ ಪಾಲಿದೆ. ಒಬ್ಬ ಶ್ರೇಷ್ಠ ನಟ, ಕಲಾವಿದರನ್ನು ಕಳೆದುಕೊಂಡಿದ್ದು ಬೇಸರ ತರಿಸಿದೆ” ಎಂದಿದ್ದಾರೆ.
ಮರೆಯಲಾಗದ ಕಲಾವಿದ, ಚಿತ್ರ ಸಾಹಿತಿ
ಕಾಬೂಲ್‌ನಲ್ಲಿ 1937ರ ಅ.22ರಂದು ಜನಿಸಿದ್ದ ಖಾನ್, ಅನಂತರ ಬೆಳೆದಿದ್ದು ಮುಂಬೈನಲ್ಲಿ. 1972ರಲ್ಲಿ ತೆರೆಕಂಡ ರಣಧೀರ್ ಕಪೂರ್‌ರ “ಜವಾನಿ ದಿವಾನಿ’ ಚಿತ್ರದ ಮೂಲಕ ಪೂರ್ಣ ಪ್ರಮಾಣದ ಚಿತ್ರ ಸಾಹಿತಿಯಾಗಿ, ದಿಲೀಪ್ ಕುಮಾರ್, ರಾಜೇಶ್ ಖನ್ನಾ, ಜೀತೇಂದ್ರ, ಫಿರೋಜ್ ಖಾನ್, ಅಮಿತಾಭ್ ಬಚ್ಚನ್, ಅನಿಲ್ ಕಪೂರ್, ಗೋವಿಂದಾ ಸೇರಿದಂತೆ ಸುಮಾರು ನಾಲ್ಕು ತಲೆಮಾರಿನ ಹೀರೋಗಳ ಚಿತ್ರಗಳಿಗೆ ಲೇಖನಿ ಹಿಡಿದ ಹೆಗ್ಗಳಿಕೆ ಅವರದ್ದು. ಬಚ್ಚನ್‌ರ “ಅಮರ್ ಅಕºರ್ ಅಂಥೋನಿ’, “ಶೋಲಾ ಔರ್ ಶಬ್ನಮ್’, “ಶರಾಬಿ’, “ಲಾವಾರಿಸ್’, “ಮುಕದ್ದರ್ ಕಾ ಸಿಕಂದರ್’, “ನಸೀಬ್’, “ಅಗ್ನಿ ಪಥ್’ ಚಿತ್ರಗಳಲ್ಲಿ ಅವರ ಸಂಭಾಷಣೆಗಳಂತೂ ಸೂಪರ್ ಹಿಟ್. ರಾಜೇಶ್ ಖನ್ನಾರ “ದಾಗ್’ ಚಿತ್ರದಿಂದ ನಟನೆಗೂ ಕಾಲಿಟ್ಟ ಅವರು, ಖಳನಟರಾಗಿ, ಹಾಸ್ಯನಟರಾಗಿಯೂ ಮಿಂಚಿದರಲ್ಲದೆ, 90ರ ದಶಕದಲ್ಲಿ ಗೋವಿಂದಾ-ಖಾನ್ ಅವರ ಜತೆ “ಕೂಲಿ ನಂ. 1′, “ರಾಜಾ ಬಾಬು’, “ಸಾಜನ್ ಚಲೇ ಸಸುರಾಲ್’, “ಹೀರೋ ನಂ. 1′, “ದುಲೆØ ರಾಜಾ’ ಮುಂತಾದ ಕಾಮಿಡಿ ಚಿತ್ರಗಳಲ್ಲಿ ನಟಿಸಿ ಮತ್ತಷ್ಟು ಜನಪ್ರಿಯರಾದರು. 300ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಇವರು, ಐದು ಫಿಲಂಫೇರ್ ಪ್ರಶಸ್ತಿ ಪಡೆದಿದ್ದರು. 2017ರಲ್ಲಿ ತೆರೆ ಕಂಡಿದ್ದ “ಮಸ್ತಿ ನಹೀ ಸಸ್ತಿ’ ಇವರು ಅಭಿನಯಿಸಿದ ಕೊನೆಯ ಚಿತ್ರ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
Pope Francis; ಗಾಜಾಪಟ್ಟಿ ಮೇಲೆ ನಡೆದದ್ದು ಯುದ್ಧವಲ್ಲ, ಕ್ರೌರ್ಯ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
Sheikh Hasina ಅವಧಿಯಲ್ಲಾದ ಅಪಹರಣಗಳಿಗೆ ಭಾರತ ಕುಮ್ಮಕ್ಕು: ಬಾಂಗ್ಲಾ ವರದಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.