ಫುಲ್ ರೋಬೋ ಬ್ಯಾಂಕ್
Team Udayavani, Apr 26, 2018, 6:00 AM IST
ಶಾಂಘೈ: ಜಗತ್ತಿನ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕಂಪ್ಯೂಟರ್ ಬಳಕೆ ಈಗ ಅಗತ್ಯವೇ ಆಗಿದೆ. ಅದರ ಜತೆಗೆ ಕಾಗದ ರಹಿತವೂ ಆಗಿವೆ. ಮಾನವ ರಹಿತ ಬ್ಯಾಂಕ್ ಶಾಖೆಗಳು ಕಾರ್ಯಚರಣೆ ಮಾಡಿದರೆ ಹೇಗಿರುತ್ತದೆ. ಡಿಜಿಟಲೀಕರಣ, ಕೃತಕ ಬುದ್ಧಿಮತ್ತೆ (ಎ.ಐ)ಯಲ್ಲಿ ಪ್ರಾವಿಣ್ಯತೆ ಸಾಧಿಸಿರುವ ಚೀನಾ ಅಂಥ ಸಾಧನೆ ಮಾಡಿದೆ. ಶಾಂಘೈನಲ್ಲಿ ಸಂಪೂರ್ಣ ಯಂತ್ರ ಮಾನವನೇ (ರೋಬೋಟ್) ನಿರ್ವಹಿಸುವ ಬ್ಯಾಂಕ್ ಶಾಖೆಯನ್ನು ಇತ್ತೀಚೆಗೆ ಆರಂಭಿಸಲಾಗಿದೆ. ಸರ್ಕಾರಿ ಸ್ವಾಮ್ಯದ ಚೀನಾ ಕನ್‌ಸ್ಟ್ರಕ್ಷನ್ ಬ್ಯಾಂಕ್ ಇದೇ ಮಾದರಿಯಲ್ಲಿ ಆರಂಭಿಸಲಾಗಿದೆ. ಅದಕ್ಕೆ ಚೀನಾದ ಮೊದಲ ಮಾನವ ರಹಿತ ಬ್ಯಾಂಕ್ ಎಂಬ ಹೆಗ್ಗಳಿಕೆ ಸಿಕ್ಕಿದೆ.ಆದರೆ ರಕ್ಷಣಾ ಸಿಬ್ಬಂದಿ ಇರುತ್ತಾರೆ.
ಮುಖ ಸ್ಕ್ಯಾನ್, ಧ್ವನಿಯ ಮೂಲಕ ರೋಬೋಟ್ ಗ್ರಾಹಕರ ಗುರುತು ಪತ್ತೆ ಮಾಡುತ್ತದೆ. ಬ್ಯಾಂಕ್‌ಗೆ ಪ್ರವೇಶಿಸಬೇಕಾದರೆ ಗುರುತಿನ ಚೀಟಿಯನ್ನು ಪ್ರದರ್ಶಿಸಬೇಕು. ಇನ್ನು ಅತಿ ಗಣ್ಯ ವ್ಯಕ್ತಿಗಳು ಗ್ರಾಹಕರಾಗಿದ್ದಲ್ಲಿ ಅವರಿಗೆ ಅಜ್ಞಾತ ಸ್ಥಳದಲ್ಲಿರುವ ಸಿಬ್ಬಂದಿ ಜತೆಗೆ ಟೆಲಿಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಿ ಅವರ ಸಮಸ್ಯೆಗಳನ್ನು ಇತ್ಯರ್ಥಗೊಳಿಸುವ ವ್ಯವಸ್ಥೆ ಉಂಟು. ಈ ಶಾಖೆಯಲ್ಲಿ ಕರೆನ್ಸಿ ಬದಲಾವಣೆ, ಚಿನ್ನದ ಖರೀದಿ, ರಿಯಲ್ ಎಸ್ಟೇಟ್ ಹೂಡಿಕೆ ಸೇರಿದಂತೆ ಬ್ಯಾಂಕಿಂಗ್ ಕ್ಷೇತ್ರದ ಎಲ್ಲ ವಹಿವಾಟುಗಳನ್ನು ನಡೆಸಲು ಅವಕಾಶವಿದೆ.
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅಟೋಮೇಷನ್ (ಸ್ವಯಂಚಾಲಿತ) ಎನ್ನುವುದು ಹೊಸತೇನಲ್ಲ. ಅಮೆರಿಕದಲ್ಲಿ ಬ್ಯಾಂಕ್ ಆಫ್ ಅಮೆರಿಕ 3 ಸಂಪೂರ್ಣ ಸ್ವಯಂಚಾಲಿತ ಬ್ಯಾಂಕ್ ಶಾಖೆ ಆರಂಭಿಸಿದೆ. ಚೀನಾದ ಹೆಗ್ಗಳಿಕೆ ಏನೆಂದರೆ ಗ್ರಾಹಕರ ಮುಖ ಗುರುತಿಸಿ ರೋಬೋಟ್ ಜತೆ ವಹಿವಾಟು ನಡೆಸುವುದೇ ಆಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.