ವಿಶ್ವಾದ್ಯಂತ ಷೇರು ಮಾರುಕಟ್ಟೆ ಕುಸಿತ
Team Udayavani, Mar 11, 2023, 2:31 AM IST
ವಾಷಿಂಗ್ಟನ್: ವಿಶ್ವದ ಷೇರು ಮಾರುಕಟ್ಟೆ ಕುಸಿತಗೊಂಡಿದೆ. ಇದರ ಪರಿಣಾಮ ಭಾರತದ ಷೇರು ಮಾರುಕಟ್ಟೆ ಮೇಲೂ ಪ್ರತಿಫಲಿಸಿದೆ. ಶುಕ್ರವಾರ ಬೆಳಗ್ಗೆ ಭಾರತದ ಹೂಡಿಕೆದಾರರಿಗೆ 2.67 ಲಕ್ಷ ಕೋಟಿ ರೂ. ನಷ್ಟವಾಗಿದೆ.
ಜಾಗತಿಕ ಮಾರುಕಟ್ಟೆಯಲ್ಲೂ ಹಿಂಜರಿಕೆ ಕಂಡುಬಂದಿದ್ದರಿಂದ, ಹೆಚ್ಚಿನ ಷೇರುದಾರರು ತಮ್ಮ ಷೇರುಗಳನ್ನು ಮಾರಾಟ ಮಾಡಿದರು. ಇದರ ಪರಿಣಾಮ ಬಿಎಸ್ಇ ಪಟ್ಟಿ ಮಾಡಿರುವ ಕಂಪೆನಿಗಳ ಮಾರುಕಟ್ಟೆ ಬಂಡವಾಳದಲ್ಲಿ ಕುಸಿತ ಕಂಡುಬಂತು. ಭಾರತದಲ್ಲಿ ಶುಕ್ರವಾರ ಸೆನ್ಸೆಕ್ಸ್ 671.15 ಪಾಯಿಂಟ್ಸ್ ಇಳಿಕೆಯಾಗಿ, ದಿನದ ಅಂತ್ಯಕ್ಕೆ 59,135.13 ತಲುಪಿತು. ಅದೇ ರೀತಿ ನಿಫ್ಟಿ 176.70 ಪಾಯಿಂಟ್ಸ್ ಇಳಿಕೆಯಾಗಿ, ದಿನದ ಅಂತ್ಯಕ್ಕೆ 17,412.90 ದಾಖಲಿಸಿತು. ಇನ್ನೊಂದೆಡೆ ಲಂಡನ್, ಶಾಂಘೈ, ಫ್ರಾಂಕ್ಫರ್ಟ್ ಮತ್ತು ಟೋಕಿಯೊ ಮಾರುಕಟ್ಟೆಯಲ್ಲಿ ಕೂಡ ಷೇರು ಮಾರುಕಟ್ಟೆ ಕುಸಿತ ಅನುಭವಿಸಿತು. ಜಾಗತಿಕ ತೈಲ ಬೆಲೆ ಕೂಡ ಇಳಿಕೆ ಕಂಡಿತು. ಅಮೆರಿಕದಲ್ಲಿ ಉದ್ಯೋಗ ಕಡಿತದ ಪರಿಣಾಮ ಷೇರು ಮಾರುಕಟ್ಟೆ ಮೇಲೆ ಬೀರಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
ವಾಯುವ್ಯ ಅಮೆರಿಕಕ್ಕೆ ಅಪ್ಪಳಿಸಿದ ಬಾಂಬ್ ಸೈಕ್ಲೋನ್, 6 ಲಕ್ಷ ಮನೆಗಳಿಗೆ ವಿದ್ಯುತ್ ಕಡಿತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.