ಭಾರತದ ವಿಮಾನ ನಿರಾಕರಿಸಿದ ಮಾಲ್ಡೀವ್ಸ್ ಅಧ್ಯಕ್ಷನ ನಿರ್ಧಾರದಿಂದ ಬಾಲಕನ ಪ್ರಾಣವೇ ಹೋಯ್ತು
Team Udayavani, Jan 21, 2024, 12:33 PM IST
ಮಾಲೆ: ಮಾಲ್ಡೀವ್ಸ್ ಸಚಿವರು ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದಂಡಿನಿಂದ ಎರಡು ರಾಷ್ಟ್ರಗಳ ಸಂಬಂಧಗಳು ಅಷ್ಟಕಷ್ಟೆ ಇದರ ಪರಿಣಾಮ ಮಾಲ್ಡೀವ್ಸ್ ನಲ್ಲಿ ತುರ್ತು ಚಿಕಿತ್ಸೆಗೆ ಒಳಗಾಗಬೇಕಿದ್ದ ಹದಿನಾಲ್ಕು ವರ್ಷದ ಬಾಲಕನನ್ನು ಭಾರತೀಯ ವಿಮಾನದ ಮೂಲಕ ಆಸ್ಪತ್ರೆಗೆ ಸಾಗಿಸುವ ನಿರ್ಧಾರಕ್ಕೆ ಮಾಲ್ಡೀವ್ಸ್ ಅಧ್ಯಕ್ಷ ನಿರಾಕರಿಸಿದ ಹಿನ್ನೆಲೆಯಲ್ಲಿ ಬಾಲಕ ಪ್ರಾಣ ಕಳೆದುಕೊಳ್ಳುವಂತಾಗಿದೆ.
ಕಳೆದ ಹಲವು ವರ್ಷಗಳಿಂದ ಭಾರತೀಯ ಸೇನೆಯ ಸಣ್ಣ ತುಕಡಿಯನ್ನು ಮಾಲ್ಡೀವ್ಸ್‌ನಲ್ಲಿ ನಿಯೋಜಿಸಲಾಗಿದೆ. ಅಲ್ಲಿನ ಹಿಂದಿನ ಸರ್ಕಾರದ ಮನವಿಯ ಮೇರೆಗೆ ಭಾರತವು ಸಮುದ್ರ ಭದ್ರತೆ ಮತ್ತು ವಿಪತ್ತು ಪರಿಹಾರ ಕಾರ್ಯಾಚರಣೆಗಳಲ್ಲಿ ಸಹಾಯ ಮಾಡಲು ಸೈನಿಕರನ್ನು ಅಲ್ಲಿ ನಿಯೋಜಿಸಿತ್ತು. ಆದರೆ ಮೊನ್ನೆ ಮೊನ್ನೆ ನಡೆದ ಅವಹೇಳನಕಾರಿ ಘಟನೆಯ ಬಳಿಕ ಮಾಲ್ಡೀವ್ಸ್‌ನ ನೂತನ ಅಧ್ಯಕ್ಷ ಮೊಹಮ್ಮದ್ ಮುಯಿಝು ಈ ಸೈನಿಕರನ್ನು ದೇಶ ತೊರೆಯುವಂತೆ ಹೇಳಿದ್ದಾರೆ. ಈ ಎಲ್ಲದರ ನಡುವೆ, ಶನಿವಾರದಂದು, ಮಾಲ್ಡೀವ್ಸ್‌ನಲ್ಲಿ 14 ವರ್ಷದ ಬಾಲಕನೊಬ್ಬ ಸಾವನ್ನಪ್ಪಿದ್ದಾನೆ ಎಂದು ಆರೋಪಿಸಲಾಗಿದೆ ಏಕೆಂದರೆ ಏರ್‌ಲಿಫ್ಟ್‌ಗೆ ಭಾರತ ಒದಗಿಸಿದ ಡೋರ್ನಿಯರ್ ವಿಮಾನವನ್ನು ಬಳಸಲು ಮುಯಿಝು ಅನುಮತಿ ನೀಡಲು ನಿರಾಕರಿಸಿರುವುದೇ ಇದಕ್ಕೆ ಕಾರಣ.
ಹದಿನಾಲ್ಕು ವರ್ಷದ ಹುಡುಗ ಬ್ರೈನ್ ಟ್ಯೂಮರ್ ಮತ್ತು ಪಾರ್ಶ್ವವಾಯುವಿಗೆ ಒಳಗಾಗಿದ್ದ, ನಂತರ ಅವನ ಸ್ಥಿತಿ ಗಂಭೀರವಾಗಿತ್ತು. ಇದರಿಂದ ಭಯಭೀತರಾದ ಕುಟುಂಬ ಬಾಲಕನನ್ನು ಗಫ್ ಅಲಿಫ್ ವಿಲ್ಲಿಂಗಿಲಿಯಲ್ಲಿರುವ ಅವರ ಮನೆಯಿಂದ ರಾಜಧಾನಿ ಮಾಲೆಗೆ ಚಿಕಿತ್ಸೆಗಾಗಿ ಕರೆದೊಯ್ಯಲು ಏರ್ ಆಂಬ್ಯುಲೆನ್ಸ್ ಅನ್ನು ವಿನಂತಿಸಿದೆ ಆದರೆ ಕುಟುಂಬಕ್ಕೆ ಅಲ್ಲಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ ಎಂದು ಹೇಳಿದ್ದಾರೆ.
ಬಾಲಕನ ತಂದೆಯಹೇಳಿಕೆಯಂತೆ “ಸ್ಟ್ರೋಕ್ ಆದ ತಕ್ಷಣ ಮಗನನ್ನು ಮಾಲೆಗೆ ಕರೆದೊಯ್ಯಲು ನಾವು ಐಲ್ಯಾಂಡ್ ಏವಿಯೇಷನ್‌ಗೆ ಕರೆ ಮಾಡಿದ್ದೇವೆ, ಆದರೆ ಅವರು ನಮ್ಮ ಕರೆಗಳಿಗೆ ಉತ್ತರಿಸಲಿಲ್ಲ. ಆದರೆ ಮರುದಿನ ಬೆಳಿಗ್ಗೆ 8:30 ಕ್ಕೆ ಫೋನ್‌ಗೆ ಉತ್ತರಿಸಿದರು ಕೇವಲ ಒಂದು ಏರ್ ಆಂಬ್ಯುಲೆನ್ಸ್ ಮಾತ್ರ ಇರುವುದಾಗಿ ಹೇಳಿದ್ದರು. ಇದಾದ ಬಳಿಕ ತುರ್ತು ಮನವಿಯ 16 ಗಂಟೆಗಳ ಬಳಿಕ ಬಾಲಕನನ್ನು ಮಾಲೆಗೆ ಕರೆತರಲಾಯಿತು ಆದರೆ ಅಷ್ಟೋತ್ತಿಗಾಗಲೇ ಬಾಲಕನ ಪ್ರಾಣ ಪಕ್ಷಿ ಹಾರಿಹೋಗಿತ್ತು.
ಬಾಲಕನ ಸಾವಿನ ಕುರಿತು ಪ್ರತಿಕ್ರಿಯಿಸಿರುವ ಮಾಲ್ಡೀವ್ಸ್ ಸಂಸದ ಮೈಕೆಲ್ ನಸೀಮ್, “ಭಾರತದ ವಿರುದ್ಧ ಹಗೆತನವನ್ನು ಪೂರೈಸಲು ನಮ್ಮ ಅಧ್ಯಕ್ಷರು ಜನರ ಪ್ರಾಣವನ್ನು ಕೊಟ್ಟು ಬೆಲೆ ತೆರಬಾರದು” ಎಂದು ಹೇಳಿದ್ದಾರೆ.
ಇದನ್ನೂ ಓದಿ: Actor Darshan: ಮಹಿಳೆಗೆ ನಾಯಿ ಕಚ್ಚಿದ ಪ್ರಕರಣ: ನಟ ದರ್ಶನ್‌ಗೆ ಬಿಗ್ ರಿಲೀಫ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್ ರನ್ ಆರಂಭಿಸಿದ ಸಿ.ಟಿ.ರವಿ
Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.