ಸಿಧು ಪಾಕಿಸ್ಥಾನದಲ್ಲಿ ಚುನಾವಣೆಗೆ ನಿಂತರೂ ಗೆಲ್ತಾರೆ: ಇಮ್ರಾನ್ ಖಾನ್
Team Udayavani, Nov 28, 2018, 5:46 PM IST
ಕರ್ತಾರ್‌ಪುರ : ಪಂಜಾಬ್ ಸಚಿವ ನವಜ್ಯೋತ್ ಸಿಂಗ್ ಸಿಧು ಅವರು ಒಂದೊಮ್ಮೆ ಪಾಕಿಸ್ಥಾನದಲ್ಲಿ ಚುನಾವಣೆಗೆ ನಿಂತರೂ ಅವರು ಗೆಲ್ಲುತ್ತಾರೆ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.
“ಪ್ರಧಾನಿಯಾಗಿ ನಾನು ಪ್ರಮಾಣ ವಚನ ಸ್ವೀಕರಿಸುವ ಸಮಾರಂಭಕ್ಕೆ ಬಂದಿದ್ದ ಸಿಧು ವಿರುದ್ಧ ಭಾರತದಲ್ಲೀಗ ಟೀಕೆ, ಖಂಡನೆಗಳು ಕೇಳಿ ಬರುತ್ತಿವೆ. ಆದರೆ ಅವರನ್ನು ಯಾಕಾದರೂ ಜನರು ಟೀಕಿಸುತ್ತಾರೋ ನನಗೆ ಅರ್ಥವಾಗುವುದಿಲ್ಲ. ಸಿಧು ಕೇವಲ ಸಹೋದರತೆ ಮತ್ತು ಶಾಂತಿಯ ಬಗ್ಗೆ ಮಾತನಾಡಿದ್ದಾರೆ; ಸಿಧು ಪಾಕಿಸ್ಥಾನದ ಪಂಜಾಬಿಗೆ ಬಂದು ಚುನಾವಣೆಯಲ್ಲಿ ಸ್ಪರ್ಧಿಸಬಹುದು; ಅವರು ಗೆದ್ದೇ ಗೆಲ್ಲುತ್ತಾರೆ’ ಎಂದು ಇಮ್ರಾನ್ ಕರ್ತಾರ್‌ಪುರ ಕಾರಿಡಾರ್ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಹೇಳಿದರು.
ಭಾರತದೊಂದಿಗೆ ಪಾಕಿಸ್ಥಾನ ಶಾಂತಿ, ಸಾಮರಸ್ಯವನ್ನು ಬಯಸುತ್ತದೆ; ಈ ದಿಶೆಯಲ್ಲಿ ಭಾರತ ಒಂದು ಹೆಜ್ಜೆ ಮುಂದಿಟ್ಟರೆ ಪಾಕಿಸ್ಥಾನ ಎರಡು ಹೆಜ್ಜೆ ಮುಂದಿಡುತ್ತದೆ ಎಂದು ಇಮ್ರಾನ್ ಹೇಳಿದರು.