ಹತ್ತೂವರೆ ಗಂಟೆಗೆ ಒಂದು ದಿನ!
Team Udayavani, Jan 21, 2019, 1:15 AM IST
ವಾಷಿಂಗ್ಟನ್: ಶನಿ ಗ್ರಹದ ಅಸ್ತಿತ್ವವನ್ನು ಕಂಡುಕೊಂಡಾಗಿನಿಂದಲೂ ತಿಳಿದಿರದ ಮಹತ್ವದ ಸಂಗತಿಯೊಂದನ್ನು ನಾಸಾದ ಕ್ಯಾಸಿನಿ ಗಗನ ನೌಕೆ ಕಂಡುಕೊಂಡಿದೆ. ಶನಿ ಗ್ರಹ ಒಂದು ದಿನ ಎಂದು ಎಷ್ಟು ಗಂಟೆಗಳನ್ನು ಹೊಂದಿರುತ್ತದೆ ಎಂಬ ರಹಸ್ಯವನ್ನು ಬಿಡಿಸಲು ವಿಜ್ಞಾನಿಗಳಿಗೆ ಈವರೆಗೂ ಸಾಧ್ಯವಾಗಿರಲಿಲ್ಲ. ಆದರೆ ಕ್ಯಾಸಿನಿ ಗಗನ ನೌಕೆಯ ದತ್ತಾಂಶವನ್ನು ಆಧರಿಸಿ ಈ ಮಹತ್ವದ ಸಂಶೋಧನೆ ನಡೆ ಸಿದ್ದು, ಭೂಮಿಯ 10 ಗಂಟೆ 33 ನಿಮಿಷ ಗಳು ಮತ್ತು 38 ಸೆಕೆಂಡುಗಳು ಶನಿಯಲ್ಲಿ ಒಂದು ದಿನ ಎಂದು ಪರಿಗಣಿಸಲ್ಪಡುತ್ತದೆ. ಅಲ್ಲದೆ, ಭೂಮಿಯ ಒಂದು ವರ್ಷವು ಶನಿಯಲ್ಲಿ 29 ವರ್ಷವಾಗಿರುತ್ತದೆ ಎಂದು ಕ್ಯಾಲಿಫೋರ್ನಿ ಯಾ ವಿವಿ ವಿಜ್ಞಾನಿಗಳು ಕಂಡುಕೊಂಡಿದ್ದಾರೆ.
ಶನಿ ಗ್ರಹವು ಹಲವು ಉಂಗುರಗಳನ್ನು ಹೊಂದಿದ್ದರಿಂದ, ಈ ಬಗ್ಗೆ ವಿಜ್ಞಾನಿಗಳಿಗೆ ನಿಖರವಾಗಿ ಕಂಡುಕೊಳ್ಳಲು ಸಾಧ್ಯವಾ ಗಿರಲಿಲ್ಲ. ಆದರೆ ಈಗ ಕ್ಯಾಲಿಫೋರ್ನಿಯಾ ವಿವಿ ವಿದ್ಯಾರ್ಥಿ ಕ್ರಿಸ್ಟೋಫರ್ ಮಾನ್‌ಕೋವಿಚ್ ಈ ಅಧ್ಯಯನವನ್ನು ಉಂಗುರಗಳ ಅಲೆ ವಿಧವನ್ನು ವಿಶ್ಲೇಷಿಸಿ ಮಾಡಿದ್ದಾರೆ. ಇದಕ್ಕಾಗಿ ಅವರು ಕ್ಯಾಸಿನಿ ಸೆರೆ ಹಿಡಿದ ದತ್ತಾಂಶಗಳನ್ನೇ ಅವಲಂಬಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಸಮಗ್ರ ಅಧ್ಯಯನ ವರದಿಯು ಆಸ್ಟ್ರೋಫಿಸಿಕಲ್ ಜರ್ನಲ್‌ನಲ್ಲಿ ಪ್ರಕಟವಾಗಿದೆ.
ಇತರ ಗ್ರಹಗಳಿಂದ ಶನಿಯ ಪರಿಭ್ರಮಣೆ ಪಥ ಮತ್ತು ರೀತಿ ವಿಭಿನ್ನವಾಗಿದ್ದುದರಿಂದ ಕಾಲಾವಧಿಯನ್ನು ಕಂಡುಕೊಳ್ಳಲು ವಿಜ್ಞಾನಿ ಗಳಿಗೆ ಸಾಧ್ಯವಾಗಿರಲಿಲ್ಲ. ಹೀಗಾಗಿ ಶನಿಯ ಉಂಗುರಗಳಿಂದ ಹೊರಡುವ ಅಲೆಗಳನ್ನು ಆಧರಿಸಿ ಈ ಬಗ್ಗೆ ಕಂಡುಕೊಳ್ಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Saudi Arabia: ಮೆಕ್ಕಾ-ಮದೀನಾ ಸೇರಿ ಹಲವೆಡೆ ದಾಖಲೆಯ ಧಾರಾಕಾರ ಮಳೆ; ಜನಜೀವನ ಅಸ್ತವ್ಯಸ್ತ
ಟಿಬೆಟ್ ನಲ್ಲಿ ಪ್ರಬಲ ಭೂಕಂಪ… ಸಾವಿನ ಸಂಖ್ಯೆ 95ಕ್ಕೆ ಏರಿಕೆ, 60ಕ್ಕೂ ಹೆಚ್ಚು ಮಂದಿ ಗಾಯ
Updated: ಕೆನಡಾ ಮುಂದಿನ ಪ್ರಧಾನಿ ರೇಸ್ ನಲ್ಲಿ ಭಾರತೀಯ ಮೂಲದ ಅನಿತಾ ಸೇರಿ ಹಲವರ ಪೈಪೋಟಿ!
Facing Dissent: ಕೆನಡಾ ಪ್ರಧಾನಿ ಹುದ್ದೆಗೆ ಟ್ರುಡೋ ರಾಜೀನಾಮೆ
ಬ್ರಹ್ಮಪುತ್ರ ಅಣೆಕಟ್ಟಿಂದ ಭಾರತಕ್ಕೆ ಧಕ್ಕೆ ಆಗದು: ಚೀನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.