ಗರಿಷ್ಠ ಸದ್ಭಾವನೆ ತೋರಿದ್ದೇವೆ; ಸಹನೆ ತಳಮಟ್ಟ ತಲುಪಿದೆ : ಚೀನ ಖಡಕ್
Team Udayavani, Aug 4, 2017, 12:14 PM IST
ಬೀಜಿಂಗ್ : “ಸಿಕ್ಕಿಂ ನಲ್ಲಿನ ಡೋಕ್‌ಲಾಂ ಗಡಿ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ನಾವು ಗರಿಷ್ಠ ಸದ್ಭಾವನೆಯನ್ನು ತೋರಿದ್ದೇವೆ; ಹಾಗಿದ್ದರೂ ನಮ್ಮ ಸಹನೆ ತಳ ಮಟ್ಟವನ್ನು ತಲುಪಿದೆ’ ಎಂಬ ಖಡಕ್ ಸಂದೇಶವನ್ನು ಚೀನ ಭಾರತಕ್ಕೆ ರವಾನಿಸಿದೆ.
ಭೂತಾನ್‌ಗೆ ಸೇರಿದ ವಿವಾದಿತ ಡೋಕ್‌ಲಾಂ ನಲ್ಲಿ ಭಾರತ – ಚೀನ ಸೇನೆಯ ಮುಖಾಮುಖೀ ಕಳೆದ ಜೂನ್ 16ರಿಂದಲೂ ಸಾಗಿದ್ದು ಇದು ಉಭಯ ದೇಶಗಳ ನಡುವೆ ಸಮರ ಸ್ಫೋಟದ ಭೀತಿಯನ್ನು ಹುಟ್ಟಿಸಿದೆ.
ಭಾರತದ ವಿದೇಶ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್ ಅವರು ನಿನ್ನೆಯಷ್ಟೇ ಸಂಸತ್ತಿನಲ್ಲಿ “ಭಾರತ – ಚೀನ ನಡುವಿನ ಗಡಿ ವಿವಾದಕ್ಕೆ ಯುದ್ಧವೇ ಪರಿಹಾರವಲ್ಲ; ಪರಸ್ಪರ ಮಾತುಕತೆಯೇ ಪರಿಹಾರ; ಒಂದೊಮ್ಮೆ ಯುದ್ಧ ಸಂಭವಿಸಿದರೂ ಆ ಬಳಿಕದಲ್ಲಿ ಶಾಂತಿ – ಸೌಹಾರ್ದ ಸ್ಥಾಪನೆಗೆ ಮಾತುಕತೆಯೇ ಮುಖ್ಯವಾಗುತ್ತದೆ. ಆದುದರಿಂದ ಉಭಯ ದೇಶಗಳು ಡೋಕ್‌ಲಾಂ ನಿಂದ ತಮ್ಮ ಸೇನೆಯನ್ನು ಹಿಂದೆಗೆದುಕೊಂಡು ಬಿಕ್ಕಟ್ಟು ಬಗೆ ಹರಿಸುವ ಮಾತುಕತೆಗೆ ತೊಡಗಬೇಕು ಮತ್ತು ಆ ಮೂಲಕ ದ್ವಿಪಕ್ಷೀಯ ಸಂಬಂಧಗಳನ್ನು ಗಟ್ಟಿಗೊಳಿಸಬೇಕು’ ಎಂದು ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯೆ ಎಂಬಂತೆ ಚೀನದ ರಕ್ಷಣಾ ಸಚಿವಾಲಯ, “ಚೀನ ಡೋಕ್‌ಲಾಂ ವಿವಾದದ ವಿಷಯದಲ್ಲಿ ಗರಿಷ್ಠ ಸದ್ಭಾವನೆಯನ್ನು ತೋರಿದೆ; ನಮ್ಮ ಸಹನೆ ತಳ ಮಟ್ಟವನ್ನು ತಲುಪಿದೆ; ಭಾರತ ಇದನ್ನು ತಿಳಿಯಬೇಕು’ ಎಂದು ಹೇಳಿದೆ.
ಭೂತಾನ್‌ಗೆ ಸೇರಿದ ವಿವಾದಿತ ಡೋಕ್‌ಲಾಂ ಪ್ರದೇಶದಲ್ಲಿ ಚೀನ ರಸ್ತೆಯನ್ನು ನಿರ್ಮಿಸಿದರೆ ಅದರಿಂದ ಭಾರತಕ್ಕೆ ತನ್ನ ಈಶಾನ್ಯ ರಾಜ್ಯಗಳ ಸಂಪರ್ಕ ಮಾರ್ಗ ಕಡಿದು ಹೋಗುವುದು ಎಂಬ ಭೀತಿ ಇದೆ. ಆ ಕಾರಣಕ್ಕಾಗಿ ಭಾರತೀಯ ಸೇನೆ ಚೀನ ಡೋಕ್‌ಲಾಂನಲ್ಲಿ ರಸ್ತೆ ನಿರ್ಮಿಸುವುದನ್ನು ತಡೆದಿತ್ತು. ಪರಿಣಾಮವಾಗಿ ಕಳೆದ ಜೂನ್ 16ರಿಂದ ಡೋಕ್‌ಲಾಂ ತ್ರಿರಾಷ್ಟ್ರ ಚೌಕದಲ್ಲಿ ಉಭಯ ದೇಶಗಳ ಸೇನಾ ಮುಖಾಮುಖೀ ಗಡಿ ಉದ್ವಿಗ್ನತೆಗೆ ಕಾರಣವಾಗುವ ರೀತಿಯಲ್ಲಿ ಸಮರ ಭೀತಿಯನ್ನು ಸೃಷ್ಟಿಸುತ್ತಾ ಮುಂದುವರಿದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್ ಪರೀಕ್ಷೆ
Iran: ಹಿಜಾಬ್ ನಿರಾಕರಿಸಿದರೆ ವಿಶೇಷ ಕ್ಲಿನಿಕ್: ಇರಾನ್ ತೀರ್ಮಾನಕ್ಕೆ ಆಕ್ರೋಶ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
MUST WATCH
ಹೊಸ ಸೇರ್ಪಡೆ
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Maharashtra Election: ಬೂತ್ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.