ಪರಿಣತರಿಗೆ ಸಿಗಲಿದೆ 5 ವರ್ಷಗಳ ಸಿಂಗಾಪುರ ವೀಸಾ
Team Udayavani, Aug 30, 2022, 6:30 AM IST
ಸಿಂಗಾಪುರ: ಪರಿಣಿತ ಉದ್ಯೋಗಿಗಳ ಕೊರತೆ ಎದುರಿಸುತ್ತಿರುವ ಸಿಂಗಾಪುರ ಇತರ ದೇಶಗಳಿಂದ ಆಸಕ್ತರನ್ನು ಆಹ್ವಾನಿಸಲು ನಿರ್ಧರಿಸಿದೆ.
ಅದಕ್ಕಾಗಿ ಓವರ್‌ಸೀಸ್ ನೆಟ್‌ವರ್ಕ್ ಆ್ಯಂಡ್ ಎಕ್ಸ್‌ಪರ್‌ಟೈಸ್ (ಒಎನ್‌ಇ) ಎಂಬ ಹೆಸರಿನ ಯೋಜನೆಯಲ್ಲಿ ಐದು ವರ್ಷಗಳ ಅವಧಿಯ ವೀಸಾ ನೀಡಲು ಮುಂದಾಗಿದೆ ಮತ್ತು ನಿಯಮಗಳಲ್ಲಿ ಬದಲಾವಣೆ ತರಲು ಮುಂದಾಗಿದೆ.
ಪ್ರತಿ ತಿಂಗಳ ಕನಿಷ್ಠ 30 ಸಾವಿರ ಸಿಂಗಾಪುರ ಡಾಲರ್ (17,14,284.29 ರೂ) ವೇತನ ನೀಡಲು ಅಲ್ಲಿನ ಸರ್ಕಾರ ನಿರ್ಧರಿಸಿದೆ. ಕ್ರೀಡೆ, ಕಲೆ, ವಿಜ್ಞಾನ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದವರಿಗೆ ಹೆಚ್ಚಿನ ವೇತನ ನೀಡಲು ಮುಂದಾಗಿದೆ. ಮುಂದಿನ ವರ್ಷದ ಜ.1ರಿಂದ ಹೊಸ ವ್ಯವಸ್ಥೆ ಜಾರಿಯಾಗಲಿದೆ.
ವೀಸಾ ಪಡೆದವರು ಮಾತ್ರವಲ್ಲ, ಅವರ ಜತೆಗೆ ಇರುವವರಿಗೆ ಕೂಡ ಕೆಲಸ ಮಾಡಲೂ ಹೊಸ ವ್ಯವಸ್ಥೆಯಲ್ಲಿ ಅವಕಾಶ ಕಲ್ಪಿಸಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Irrigation Development: ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದಿಂದ ಅನುದಾನ: ವಿ.ಸೋಮಣ್ಣ
Power Prayers: ಡಿಸಿಎಂ ಟೆಂಪಲ್ ರನ್ ವಿಚಾರ; ಎಚ್‌ಡಿಕೆ ವ್ಯಂಗ್ಯ, ಡಿಕೆಶಿ ಪ್ರತ್ಯುತ್ತರ
BBK11: ದೈತ್ಯ ಸ್ಪರ್ಧಿಗಳನ್ನು ಸೋಲಿಸಿ ಫಿನಾಲೆಗೆ ಎಂಟ್ರಿ ಕೊಟ್ಟ ಹಳ್ಳಿಹೈದ ಹನುಮಂತು
Name Road Row: ಮೈಸೂರಿನ ರಸ್ತೆಗೆ ನಾಮಕರಣ ವಿಚಾರ; ಗೊಂದಲಗಳಿಗೆ ತೆರೆ ಎಳೆದ ಸಿಎಂ
POCO X7 5G; ಇದೀಗ ತಾನೆ ಬಿಡುಗಡೆಯಾದ ಫೋನ್ ನಲ್ಲಿ ಏನೇನಿದೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.