ವಾಷಿಂಗ್ಟನ್: ಸ್ಪೇಸ್ ಲಾಂಚ್ ಸಿಸ್ಟಂ ಯಶಸ್ವಿ ಪರೀಕ್ಷೆ
ಓರಿಯನ್ ಕ್ಯಾಪ್ಸೂಲ್ ಗಗನನೌಕೆ ಹೊತ್ತೂಯ್ಯಲಿರುವ ರಾಕೆಟ್
Team Udayavani, Jun 25, 2022, 7:10 AM IST
ವಾಷಿಂಗ್ಟನ್: ಅಮೆರಿಕದ ಬಾಹ್ಯಾಕಾಶ ಸಂಸ್ಥೆ (ನಾಸಾ), ಸ್ಪೇಸ್ ಲಾಂಚ್ ಸಿಸ್ಟಂ (ಎಸ್‌ಎಲ್‌ಎಸ್) ಎಂಬ ರಾಕೆಟ್‌ನಲ್ಲಿ ಹಲವಾರು ಪ್ರಯೋಗಗಳನ್ನು ನಡೆಸಿದೆ.
2024ರಲ್ಲಿ ಚಂದ್ರನಲ್ಲಿಗೆ “ಓರಿಯನ್ ಕ್ಯಾಪ್ಸೂಲ್’ ಎಂಬ ಗಗನನೌಕೆ ಪ್ರಯಾಣಿಸಲಿದೆ. ಅದನ್ನು ಭೂಮಿಯ ಗುರುತ್ವಾಕರ್ಷಣೆ ವ್ಯಾಪ್ತಿಯಿಂದ ಆಚೆಗೆ ಕೊಂಡೊಯ್ಯಲಿರುವುದು ಇದೇ ಎಸ್‌ಎಲ್‌ಎಸ್. ಹಾಗಾಗಿ, ಬಾಹ್ಯಾಕಾಶ ಪ್ರಯಾಣಕ್ಕೆ ಅನುಗುಣವಾಗಿ ರಾಕೆಟ್‌ನಲ್ಲಿ “ವೆಟ್ ಡ್ರೆಸ್ ರಿಹರ್ಸಲ್’ ಇತ್ಯಾದಿ ಪ್ರಯೋಗ ಕೈಗೊಳ್ಳಲಾಗಿದೆ.
“30 ಅಂತಸ್ತುಗಳುಳ್ಳ ರಾಕೆಟ್ ಇಂಧನ ಟ್ಯಾಂಕ್‌ಗಳಿಂದ ಸೋರಿಕೆಯನ್ನು ಪರೀಕ್ಷಿಸಲು ಹಾಗೂ ಕೌಂಟ್‌ಡೌನ್ ಅವಧಿಯಲ್ಲಿ ರಾಕೆಟ್ ತೋರಬಹುದಾದ ಸಾಮರ್ಥ್ಯವನ್ನು ಪರಿಗಣಿಸಲಾಯಿತು ಎಂದು ನಾಸಾ ಹೇಳಿದೆ. ಸದ್ಯದಲ್ಲೇ, ಕೆನಡಿ ಉಡಾವಣಾ ಕೇಂದ್ರದಿಂದ ಓರಿಯನ್ ಕ್ಯಾಪ್ಸೂಲ್ ಹೊತ್ತು ಎಸ್‌ಎಲ್‌ಎಸ್ ರಾಕೆಟ್ ಉಡಾವಣೆಯಾಗಲಿದೆ.
ಅಂದಹಾಗೆ, ಓರಿಯನ್ ಕ್ಯಾಪ್ಸೂಲ್ ಮೊದಲ ಪಯಣದಲ್ಲಿ ಮನುಷ್ಯರು ಭಾಗಿಯಾಗುತ್ತಿಲ್ಲ. ಅಲ್ಲದೆ, ಓರಿಯನ್ ಗಗನನೌಕೆಯನ್ನು ಹೊತ್ತೂಯ್ಯಲಿರುವ ಎಸ್‌ಎಲ್‌ಎಸ್ ರಾಕೆಟ್, ಚಂದ್ರನಿಂದ ಕ್ಯಾಪ್ಸೂಲ್ ಅನ್ನು ಪುನಃ ಭೂಮಿಗೆ ಕರೆತರಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್ನ ಅತ್ಯುನ್ನತ ಗೌರವ ಪ್ರದಾನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
Sheikh Hasina ಅವಧಿಯಲ್ಲಾದ ಅಪಹರಣಗಳಿಗೆ ಭಾರತ ಕುಮ್ಮಕ್ಕು: ಬಾಂಗ್ಲಾ ವರದಿ
Meditation; ಜಾಗತಿಕ ಶಾಂತಿ, ಏಕತೆಗೆ ಧ್ಯಾನ ಮುಖ್ಯ ಸಾಧನ: ಶ್ರೀ ಶ್ರೀ ರವಿಶಂಕರ್
Israel ಮೇಲೆ ದಾಳಿಗೆ ಇರಾನ್ನಿಂದ ಮಕ್ಕಳ ಬಳಕೆ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.