ಕಾರ್ಬಾಕ್ಸಿಲಿಕ್ ಆಮ್ಲ ಹೊಂದಿರುವ ಜನರಿಗೆ ಹೆಚ್ಚು ಸೊಳ್ಳೆ ಕಡಿತ!
Team Udayavani, Oct 21, 2022, 7:40 AM IST
ನ್ಯೂಯಾರ್ಕ್: ನಿಮ್ಮ ಪಕ್ಕದಲ್ಲಿ ಇರುವವರಿಗಿಂತ ನಿಮಗೇ ಹೆಚ್ಚು ಸೊಳ್ಳೆಗಳು ಕಡಿಯುತ್ತವೆಯೇ? ಕೆಲವರಿಗೇ ಏಕೆ ಸೊಳ್ಳೆಗಳು ಹೆಚ್ಚು ಕಚ್ಚುತ್ತವೆ ಎಂಬುದನ್ನು ಎಂದಾದರೂ ಯೋಚಿಸಿದ್ದಿರಾ? ಇದಕ್ಕೆ ಅಮೆರಿಕದ ನ್ಯೂಯಾರ್ಕ್ನ ರಾಕ್ಫೆಲ್ಲರ್ ವಿಶ್ವವಿದ್ಯಾಲಯದ ಸಂಶೋಧಕರು ಉತ್ತರ ಕಂಡುಕೊಂಡಿದ್ದಾರೆ.
ಸಂಶೋಧನೆಯ ಪ್ರಕಾರ, ತಮ್ಮ ಚರ್ಮದ ಮೇಲೆ ಹೆಚ್ಚಿನ ಮಟ್ಟದ ಕಾರ್ಬಾಕ್ಸಿಲಿಕ್ ಆಮ್ಲಗಳನ್ನು ಹೊಂದಿರುವ ಜನರ ಮೇಲೆ ಹೆಣ್ಣು ಸೊಳ್ಳೆ “ಈಡಿಸ್ ಈಜಿಪ್ಟಿ’ಗೆ 100 ಪಟ್ಟು ಹೆಚ್ಚು ಆಕರ್ಷಿತವಾಗುತ್ತದೆ. ಈ ಪ್ರಕಾರದ ಸೊಳ್ಳೆಯು ಡೆಂ à, ಚಿಕೂನ್ಗುನ್ಯಾ, ಹಳದಿ ಜ್ವರ, ಝಿಕಾ ಮುಂತಾದ ರೋಗಗಳು ಹರಡಲು ಕಾರಣವಾಗಿದೆ.
ಆಹಾರದಲ್ಲಿ ಬದಲಾವಣೆ ಹೊರತಾಗಿಯೂ ಮನ್ಯುಷರ ಮೇಲೆ ಸೊಳ್ಳೆಗಳ ಆಕರ್ಷಣೆಯು ಸ್ಥಿರವಾಗಿರಲಿದೆ ಎಂಬುದು ಸಂಶೋಧನೆಯಿಂದ ತಿಳಿದುಬಂದಿದೆ. “ನಿಮ್ಮ ಚರ್ಮದ ಮೇಲೆ ಹೆಚ್ಚಿನ ಪ್ರಮಾಣದ ಕಾರ್ಬಾಕ್ಸಿಲಿಕ್ ಆಮ್ಲ ಹೊಂದಿದ್ದರೆ ಹೆಚ್ಚಿನ ಸಂಖ್ಯೆಯಲ್ಲಿ ಸೊಳ್ಳೆಗಳ ಕಡಿತಕ್ಕೆ ಒಳಗಾಗುತ್ತೀರಿ,’ ಎಂದು ರಾಕ್ಫೆಲ್ಲರ್ ವಿಶ್ವವಿದ್ಯಾಲಯದ ಸಂಶೋಧಕಿ ಲೆಸ್ಲಿ ವೋಶಾಲ್ ತಿಳಿಸಿದ್ದಾರೆ.
64 ಮಂದಿ ಸ್ವಯಂಸೇವಕರನ್ನು ಈ ಸಂಶೋಧನಾತ್ಮಕ ಅಧ್ಯಯನಕ್ಕಾಗಿ ತೊಡಗಿಸಿಕೊಳ್ಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.