ಪ್ರಯಾಣಿಕನ ಬೂಟಿನಲ್ಲಿತ್ತು 1000 ವಜ್ರ!
Team Udayavani, Mar 24, 2017, 12:43 PM IST
ಬೀಜಿಂಗ್: ಧರಿಸಿದ ಶೂವಿನ ಸೋಲ್ ಒಳಗೆ ಸಾವಿರ ವಜ್ರಗಳನ್ನು ಅಡಗಿಸಿಕೊಂಡು ಅಕ್ರಮವಾಗಿ ಸಾಗಿಸಲು ಯತ್ನಿಸಿದ ಯುವಕನೊಬ್ಬ ತಾನೇ ಮಾಡಿಕೊಂಡ ಎಡವಟ್ಟಿನಿಂದ ಚೀನದ ಶೆನ್‌ಜೆನ್ ಏರ್‌ಪೋರ್ಟಿನ ಕಸ್ಟಮ್ಸ್‌ಗೆ ಅತಿಥಿ ಆಗಿದ್ದಾನೆ! ಹಾಂಗ್‌ಕಾಂಗ್‌ನಿಂದ ಚೀನಗೆ ತೆರಳುತ್ತಿದ್ದ ಯುವಕ, ಎರಡೂ ಬೂಟುಗಳ ಒಳಗಿನ ಸೋಲ್‌ಗಳ ಅಡಿಯಲ್ಲಿ ಬರೋಬ್ಬರಿ ಒಂದು ಸಾವಿರ ವಜ್ರದ ಹರಳುಗಳಿದ್ದ ಪ್ಯಾಕ್‌ಗಳನ್ನು ಬಚ್ಚಿಟ್ಟುಕೊಂಡಿದ್ದ. ಯುವಕ ಲೋಹೂಗೆ ಬಂದಾಗ ಆತ ನಡೆಯುವ ಶೈಲಿ ಕಂಡು ಅಲ್ಲಿನ ಕಸ್ಟಮ್ಸ್ ಅಧಿಕಾರಿಗಳಿಗೆ ಅನುಮಾನ ಬಂದಿದೆ.
ವಿಮಾನ ನಿಲ್ದಾಣದ ಅಧಿಕಾರಿಗಳನ್ನು ಯಾಮಾರಿಸುವ ಯುವಕನ ಪ್ಲಾನ್ ಕೈಕೊಟ್ಟಿದ್ದೇ ಅಲ್ಲಿ. ಅಧಿಕಾರಿಗಳು ತನ್ನತ್ತ ನೋಡುತ್ತಿದ್ದುದನ್ನು ಗಮನಿಸಿದ ಆರೋಪಿ, ತತ್‌ಕ್ಷಣ ನಡೆಯುವ ಶೈಲಿ ಬದಲಿಸಿದ್ದಾನೆ. ಕೂಡಲೆ ಯುವಕನನ್ನು ನಿಲ್ಲಿಸಿದ ಅಧಿಕಾರಿಗಳು, ಸೀದಾ ಆತನ ಶೂ ಬಿಚ್ಚಿಸಿ ಇನ್ನರ್ ಸೋಲ್ ತೆಗೆದಾಗ ಅಚ್ಚರಿ ಕಾದಿತ್ತು. ಏಕೆಂದರೆ ಆ ಯುವಕನ ಬೂಟಿನೊಳಗೆ ಸಿಕ್ಕಿದ್ದು 212.9 ಕ್ಯಾರಟ್‌ನಷ್ಟು ವಜ್ರದ ಹರಳುಗಳು! ಕೂಡಲೆ ಯುವಕನನ್ನು ವಶಕ್ಕೆ ಪಡೆದ ಶೆನ್‌ಜೆನ್ ಕಸ್ಟಮ್ಸ್ ಅಧಿಕಾರಿಗಳು, ಆತನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಈ ಹಿಂದೆ ವ್ಯಕ್ತಿಯೊಬ್ಬ 1554 ವಜ್ರದ ಹರಳುಗಳನ್ನು ಕುರುಕಲು ತಿಂಡಿ ಪೊಟ್ಟಣಗಳಲ್ಲಿ ಇರಿಸಿ ಸಾಗಿಸುವಾಗ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bangladesh: ಹಿಂದೂಗಳ ಮೇಲೆ ಬಾಂಗ್ಲಾ ಸೇನೆಯಿಂದ ದಾಳಿ: ವೀಡಿಯೋ ವೈರಲ್
Stop Wars: ನಾನು ಯುದ್ಧ ಆರಂಭಿಸಲ್ಲ… ನಿಲ್ಲಿಸುವೆ: ವಿಜಯೋತ್ಸದಲ್ಲಿ ಟ್ರಂಪ್ ಘೋಷಣೆ
US Election: 1-7ರಿಂದ ಗೆಲುವನ್ನು 7-0ಗೇರಿಸಿಕೊಂಡ ಟ್ರಂಪ್
US Election: ಟ್ರಂಪ್‌ಗೆ ಅಭಿನಂದಿಸುವ ಯೋಜನೆಯಿಲ್ಲ… ರಷ್ಯಾ
US Election: ಸೋಲಿನ ಬೆನ್ನಲ್ಲೇ ಭಾಷಣ ರದ್ದುಪಡಿಸಿದ ಕಮಲಾ ಹ್ಯಾರಿಸ್!
MUST WATCH
ಹೊಸ ಸೇರ್ಪಡೆ
By Election: ಯೋಗೇಶ್ವರ್ ನಿಂದಿಸಿದ್ದ ಡಿ.ಕೆ.ಸುರೇಶ್ ಆಡಿಯೋ ಎಚ್‌ಡಿಕೆ ಬಿಡುಗಡೆ
By Election: ನಾಗೇಂದ್ರ, ಜಮೀರ್, ಡಿಕೆಶಿ ಮೇಲೆ ಚುನಾವಣಾ ಆಯೋಗ ಕಣ್ಣಿಡಲಿ: ಡಿವಿಎಸ್
Waqf: ಮುಸ್ಲಿಮರ ಗುರಿ ಮಾಡುವುದು ಬಿಟ್ಟರೆ ಬಿಜೆಪಿಗೆ ಬೇರೇನೂ ಇಲ್ಲ: ಸಚಿವ ದಿನೇಶ್
Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ
Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್ ಅನುಮತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.