Submarine; ನಾಪತ್ತೆಯಾದ ಜಲಾಂತರ್ಗಾಮಿಯಿಂದ ಶಬ್ದ!
-ಕೆನಡಾದ ಪಿ-3 ವಿಮಾನಕ್ಕೆ ಸಿಕ್ಕ ಸಿಗ್ನಲ್| ಕಾರ್ಯಾಚರಣೆ ಬಿರುಸು
Team Udayavani, Jun 22, 2023, 7:30 AM IST
ವಾಷಿಂಗ್ಟನ್: ಅಟ್ಲಾಂಟಿಕ್ ಸಾಗರದಲ್ಲಿ ಟೈಟಾನಿಕ್ ಹಡಗಿನ ಅವಶೇಷಗಳತ್ತ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಜಲಾಂತರ್ಗಾಮಿ ನೌಕೆ ಮುಳುಗಡೆಯಾದ 2 ದಿನಗಳ ಬಳಿಕ, ಬುಧವಾರ ಶೋಧ ಪ್ರದೇಶದ ಕಡಲಾಳದಲ್ಲಿ ಶಬ್ದವೊಂದು ಕೇಳಿಬಂದಿದೆ. ಈ ಮೂಲಕ ನೌಕೆಯಲ್ಲಿರುವ ಪ್ರವಾಸಿಗರು ಇನ್ನೂ ಜೀವಂತವಾಗಿರಬಹುದು ಎಂಬ ಆಶಾವಾದ ಮೂಡಿದೆ.
ಐವರು ಪ್ರವಾಸಿಗರಿದ್ದ ನೌಕೆ ಭಾನುವಾರ ಪ್ರಯಾಣ ಆರಂಭಿಸಿದ 1 ಮುಕ್ಕಾಲು ಗಂಟೆಯ ಬಳಿಕ ನಾಪತ್ತೆಯಾಗಿ ಸಂಪರ್ಕ ಕಳೆದುಕೊಂಡಿತ್ತು. ಈಗ ಅದರಲ್ಲಿ ಕೇವಲ 24 ಗಂಟೆಗಳ ಅವಧಿಗಷ್ಟೇ ಸೀಮಿತವಾಗಿರುವಷ್ಟು ಆಮ್ಲಜನಕ ವ್ಯವಸ್ಥೆ ಇದೆ. ಈ ಹಿನ್ನೆಲೆಯಲ್ಲಿ ಅಮೆರಿಕ ಕರಾವಳಿ ಪಡೆ, ಕೆನಡಾ ಜಂಟಿ ರಕ್ಷಣಾ ಪಡೆ ಹಾಗೂ ಫ್ರಾನ್ಸ್‌ನ ವಿಪತ್ತು ಪರಿಹಾರ ಪಡೆಗಳು ಶೋಧ ಕಾರ್ಯಾಚಾರಣೆ ಬಿರುಸುಗೊಳಿಸಿವೆ. ಈ ವೇಳೆ ಕೆನಾಡದ ಪಿ-3 ವಿಮಾನಕ್ಕೆ ಶೋಧಪ್ರದೇಶದಲ್ಲಿ ಸಿಗ್ನಲ್ ಒಂದು ಪತ್ತೆಯಾಗಿದ್ದು, ಪ್ರತಿ 30 ನಿಮಿಷಕ್ಕೊಮ್ಮೆ ಶಬ್ದ ಕೇಳಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಶಬ್ದಗಳ ಮೂಲ ಅನ್ವೇಷಿಸಲು ರಿಮೋಟ್ ಆಪರೇಟಡ್ ವೆಹಿಕಲ್ ಒಂದನ್ನೂ ನಿಯೋಜಸಲಾಗಿದ್ದು, ಶೀಘ್ರವೇ ಜಲಾಂತರ್ಗಾಮಿ ನೌಕೆ ಪತ್ತೆಯಾಗುವ ವಿಶ್ವಾಸವನ್ನೂ ರಕ್ಷಣಾ ಪಡೆಗಳು ವ್ಯಕ್ತ ಪಡಿಸಿವೆ.
ಇನ್ನು ಮುಳುಗಿಹೋಗಿರುವ ಜಲಾಂತರ್ಗಾಮಿ ನೌಕೆ ತಯಾರಿಕಾ ಸಂಸ್ಥೆಯ ಮಾಜಿ ಉದ್ಯೋಗಿ ಲ್ರೋರ್ಚಿಡ್ಜ್ ಎಂಬವರು ಈ ದುರಂತಕ್ಕೆ ಸಂಸ್ಥೆಯೇ ಹೊಣೆಯೆಂದು ಹೇಳಿದ್ದು, ನೌಕೆ ತಲುಪಬಹುದಾದ ಸಾಗರದ ಆಳದ ಮಿತಿ ವಾಸ್ತವವಾಗಿ 1,300 ಮೀಟರ್ (4,265 ಅಡಿ ) ಮಾತ್ರ. ಆದರೆ, ಸಂಸ್ಥೆಯು ನೌಕೆಗೆ 4000 ಮೀಟರ್ ಅಂದರೆ 13,123 ಅಡಿಗಳ ಆಳಕ್ಕೆ ತಲುಪುವ ಪರಿಮಿತಿ ನೀಡಿದೆ. ಸರಿಯಾಗಿ ಪರೀಕ್ಷೆಗಳನ್ನು ನಡೆಸದೇ ನೀಡಿದ ಈ ಮಿತಿಯ ಕಾರಣದಿಂದಾಗಿಯೇ ನೌಕೆ ಸಾಗರದಾಳ ತಲುಪಿ, ಸಮಸ್ಯೆಗೆ ಸಿಲುಕಿದೆ ಎಂದು ಆರೋಪಿಸಿದ್ದಾರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
ವಾಯುವ್ಯ ಅಮೆರಿಕಕ್ಕೆ ಅಪ್ಪಳಿಸಿದ ಬಾಂಬ್ ಸೈಕ್ಲೋನ್, 6 ಲಕ್ಷ ಮನೆಗಳಿಗೆ ವಿದ್ಯುತ್ ಕಡಿತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.