ಅಮೆರಿಕದಲ್ಲಿ ಭಾರತೀಯ ಮೂಲದ ವ್ಯಾಪಾರಿ ಹತ್ಯೆ
Team Udayavani, Mar 5, 2017, 3:45 AM IST
ನ್ಯೂಯಾರ್ಕ್: ಅಮೆರಿಕದ ದಕ್ಷಿಣ ಕ್ಯಾರೊಲಿನಾದಲ್ಲಿ ಭಾರತೀಯ ಮೂಲದ ಉದ್ಯಮಿ ಹರ್ನಿಷ್ ಪಟೇಲ್ (43) ಎಂಬುವರನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ. ಅವರ ಮನೆ ಮುಂಭಾಗದಲ್ಲಿಯೇ ಗುರುವಾರ ಈ ಕೃತ್ಯವೆಸಗಲಾಗಿದೆ.
ಕಳೆದ ವಾರವಷ್ಟೇ ಕನ್ಸಾಸ್ ಸಿಟಿಯಲ್ಲಿ ಆಂಧ್ರಪ್ರದೇಶ ಮೂಲದ ಎಂಜಿನಿಯರ್ ಶ್ರೀನಿವಾಸ ಕುಚಿಭೋಟ್ಲಾರನ್ನು ಹತ್ಯೆ ಮಾಡಿದ ಬೆನ್ನಲ್ಲೇ ಮತ್ತೂಂದು ಪ್ರಕರಣ ನಡೆದಿದೆ. ಶುಕ್ರವಾರ ನ್ಯೂಯಾರ್ಕ್ ಭಾರತೀಯ ಮೂಲದ ಮಹಿಳೆಗೆ ಆಫ್ರಿಕನ್-ಅಮೆರಿಕನ್ ಸಮುದಾಯದ ವ್ಯಕ್ತಿ ಆಕ್ಷೇಪಾರ್ಹ ರೀತಿಯಲ್ಲಿ ಮಾತುಗಳನ್ನಾಡಿದ್ದ.
ದಕ್ಷಿಣ ಕ್ಯಾರೊಲಿನಾದಲ್ಲಿನ ಲ್ಯಾಂಕಾಸ್ಟರ್ ಕೌಂಟಿಯಲ್ಲಿರುವ ತಮ್ಮ ಮಳಿಗೆಯನ್ನು ಮುಚ್ಚಿ ಸನಿಹದಲ್ಲಿಯೇ ಇರುವ ಮನೆಗೆ ಬರುತ್ತಿದ್ದಂತೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಎಲ್ಲರೊಂದಿಗೆ ಸ್ನೇಹದೊಂದಿಗೆ ವರ್ತನೆ ಮಾಡುತ್ತಿದ್ದ ಮತ್ತು ಕಷ್ಟದಲ್ಲಿ ಇದ್ದವರಿಗೆ ಕೈಲಾದ ಸಹಾಯ ಮಾಡುತ್ತಿದ್ದ ಪಟೇಲ್ರನ್ನು ಯಾವ ಕಾರಣಕ್ಕಾಗಿ ಹತ್ಯೆ ಮಾಡಲಾಗಿದೆ ಎಂಬ ವಿಚಾರ ಗೊತ್ತಾಗುತ್ತಿಲ್ಲವೆಂದು ಕುಟುಂಬ ಸದಸ್ಯರು, ಸ್ನೇಹಿತರು ಹೇಳಿದ್ದಾರೆ. ಲಾಂಕಾಸ್ಟರ್ ಕೌಂಟಿ ಠಾಣೆಗೆ ಗುರುವಾರ ರಾತ್ರಿ 11.33ರ ಸುಮಾರಿಗೆ ಕರೆ ಬಂದಿತ್ತು. ಈ ಘಟನೆಗೆ ಯಾವುದೇ ರೀತಿಯಲ್ಲಿ ಜನಾಂಗೀಯ ನಿಂದನೆ ಪ್ರಕರಣದ ನಂಟು ಕಾಣುತ್ತಿಲ್ಲ ಎಂದು ಹಿರಿಯ ಅಧಿಕಾರಿ ಶೆರಿಫ್ ಬಾರಿ ಫಾಲಿ ತಿಳಿಸಿದ್ದಾರೆ. ಹಣವಿಲ್ಲ ಎಂದು ಬಂದವರಿಗೆ ಪಟೇಲ್ ನೆರವಾಗುತ್ತಿದ್ದರೆಂದು ಅವರದ್ದೇ ಮಳಿಗೆಯ ಗ್ರಾಹಕರೊಬ್ಬರು ನೆನಪಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್ನಲ್ಲಿ ಉದ್ಯೋಗದ ಆಮಿಷ
Kyiv: ಉಕ್ರೇನ್ ವಿದ್ಯುತ್ ಸ್ಥಾವರ ಮೇಲೆ ರಷ್ಯಾ 120 ಕ್ಷಿಪಣಿ ದಾಳಿ
Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್ಸಾನಿಕ್ ಅಸ್ತ್ರ !
Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ
Puttur: ಮಹಿಳೆಯ ಮಾನಭಂಗಕ್ಕೆ ಯತ್ನ; ಆರೋಪಿಗೆ ಜೈಲು ಶಿಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.