Park Bo Ram: 30ರ ಹರೆಯದಲ್ಲಿ ಇಹಲೋಕ ತ್ಯಜಿಸಿದ ಖ್ಯಾತ ಗಾಯಕಿ; ಕಾರಣ ನಿಗೂಢ

Team Udayavani, Apr 12, 2024, 4:47 PM IST

Park Bo Ram: 30ರ ಹರೆಯದಲ್ಲಿ ಇಹಲೋಕ ತ್ಯಜಿಸಿದ ಖ್ಯಾತ ಗಾಯಕಿ; ಕಾರಣ ನಿಗೂಢ

ನವದೆಹಲಿ:  ದಕ್ಷಿಣ ಕೊರಿಯಾದ ಗಾಯಕಿ ಪಾರ್ಕ್ ಬೋ ರಾಮ್ ತನ್ನ 30ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ.

ಕೆ-ಪಾಪ್ ಗಾಯಕಿಯ ನಿಧನ ಸುದ್ದಿಯನ್ನು ಕೇಳಿ ದಕ್ಷಿಣ ಕೊರಿಯಾದ ಮ್ಯೂಸಿಕ್‌ ಇಂಡಸ್ಟ್ರಿ ಶಾಕ್‌ ಆಗಿದೆ.

ಪಾರ್ಕ್ ಬೋ ರಾಮ್ ಸಾವಿನ ಸುದ್ದಿಯನ್ನು ಆಕೆಯ ಏಜೆನ್ಸಿ ಖಚಿತಪಡಿಸಿದೆ.  ಏಪ್ರಿಲ್ 11 ರಂದು ತಡರಾತ್ರಿ ಪಾರ್ಕ್‌ ಬೋ ರಾಮ್ ಹಠಾತ್ ನಿಧನರಾದರೆಂದು ಹೇಳಲು ನಮಗೆ ಅತೀವ ದುಃಖವಾಗುತ್ತಿದೆ. ಪಾರ್ಕ್ ಬೋ ರಾಮ್ ಅವರನ್ನು ಬೆಂಬಲಿಸುವ ಎಲ್ಲಾ ಅಭಿಮಾನಿಗಳಿಗೆ ನಾವು ಈ ಹಠಾತ್ ಸುದ್ದಿಯನ್ನು ಹೇಳಬೇಕಾಗಿರುವುದು ಇನ್ನಷ್ಟು ದುಃಖಕರವಾಗಿದೆ ಎಂದು ಕ್ಸಾನಾಡು ಎಂಟರ್‌ಟೈನ್‌ಮೆಂಟ್ ಹೇಳಿದೆ.

ಪಾರ್ಕ್ ಬೋ ರಾಮ್ ಈ ವರ್ಷ ಸಂಗೀತ ಕ್ಷೇತ್ರದಲ್ಲಿ 10 ವರ್ಷಗಳನ್ನು ಪೂರ್ಣಗೊಳಿಸಲಿದ್ದರು. ಈ ಸಂದರ್ಭದಲ್ಲಿ ಹೊಸ ಹಾಡನ್ನು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದ್ದರು ಎಂದು ವರದಿಯಾಗಿದೆ.

ಪಾರ್ಕ್ ಬೋ ರಾಮ್ ಅವರು ಸಾಯುವ ಕೆಲ ಗಂಟೆಗಳ ಮೊದಲು ಸ್ನೇಹಿತರೊಂದಿಗೆ ಪಾರ್ಟಿಯಲ್ಲಿದ್ದರು. ಈ ವೇಳೆ ಅವರು ಮದ್ಯಪಾನ ಮಾಡುತ್ತಿದ್ದರು. ಗಾಯಕಿ ರಾತ್ರಿ 9:55 ಕ್ಕೆ ವಾಶ್‌ರೂಮ್‌ಗೆ ಹೋಗುವುದಾಗಿ ಹೇಳಿ ಹೋದವರು ವಾಪಾಸ್‌ ಬಾರದೇ ಇರುವುದನ್ನು ಕಂಡಾಗ ಅವರ ಸ್ನೇಹಿತರು ವಾಶ್‌ ರೂಮ್‌ ನತ್ತ ಹೋಗಿದ್ದಾರೆ. ಆದರೆ ಈ ವೇಳೆ ಅವರು ಸಿಂಕ್‌ ಬಳಿ ಪ್ರಜ್ಞಾಹೀನರಾಗಿ ಬಿದ್ದಿದ್ದರು. ತಕ್ಷಣ ಅವರನ್ನು ಸಿಪಿಆರ್‌ ನೀಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ರಾತ್ರಿ 11:17 ಕ್ಕೆ ಅವರು ಸಾವನ್ನಪ್ಪಿದ್ದಾರೆ ಎಂದು ವರದಿ ತಿಳಿಸಿದೆ.

2010 ರಲ್ಲಿ Mnet ಆಡಿಷನ್ ಪ್ರೋಗ್ರಾಂ ‘ಸೂಪರ್‌ಸ್ಟಾರ್ K2’ ನಲ್ಲಿ ಭಾಗವಹಿಸಿದ ನಂತರ ಪಾರ್ಕ್ ಬೊ ರಾಮ್ ಖ್ಯಾತಿಯನ್ನು ಗಳಿಸಿದ್ದರು. ಇದಾದ ಬಳಿಕ 2014 ರಲ್ಲಿ ʼಬ್ಯೂಟಿಫುಲ್‌ʼ ಹಾಡಿನ ಮೂಲಕ ಪಾಪ್‌ ಮ್ಯೂಸಿಕ್‌ ಇಂಡಸ್ಟ್ರಿಗೆ ಕಾಲಿಟ್ಟರು. ಅದೇ ವರ್ಷ ಅವರು 2014 ರ ಗಾಂವ್ ಚಾರ್ಟ್ ಸಂಗೀತ ಪ್ರಶಸ್ತಿಗಳಲ್ಲಿ ವರ್ಷದ ಕಲಾವಿದ ಪ್ರಶಸ್ತಿಯನ್ನು ಗೆದ್ದರು. 2015 ರಲ್ಲಿ, ಪಾರ್ಕ್ ‘ಸೆಲೆಪ್ರೆಟಿ’ ಎನ್ನು ಆಲ್ಬಂನ್ನು ರಿಲೀಸ್‌ ಮಾಡಿದ್ದರು. ʼ ಹೈವಾಡಾಂಗ್ʼ, ʼ Please Say Something Even Though I know It’s a Lieʼ ಮುಂತಾದ ಹಾಡುಗಳಿಂದ ಖ್ಯಾತಿ ಗಳಿಸಿದ್ದರು.

ಎರಿಕ್ ನ್ಯಾಮ್, ಪಾರ್ಕ್ ಕ್ಯುಂಗ್, ಪಾರ್ಕ್ ಜೇ ಜಂಗ್, ಲಿಲ್ ಬೋಯಿ ಮತ್ತು ಹುಹ್ ಗಕ್ ಸೇರಿದಂತೆ ಕೊರಿಯಾದಲ್ಲಿ ಅನೇಕ ಕಲಾವಿದರೊಂದಿಗೆ ಕೆಲಸ ಮಾಡಿದ್ದರು.

ಏಪ್ರಿಲ್ 3 ರಂದು ಪಾರ್ಕ್ ಬೋ ರಾಮ್ ಅವರು ‘ಐ ಮಿಸ್ ಯು’ ಎಂಬ ಹಾಡನ್ನು ಬಿಡುಗಡೆ ಮಾಡಿದರು. ಇದು ಈಗ ಯೂಟ್ಯೂಬ್‌ನಲ್ಲಿ 211k ವೀಕ್ಷಣೆ ಕಂಡಿದೆ.

ಸದ್ಯ ಅವರ ನಿಗೂಢ ಸಾವಿನ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಟಾಪ್ ನ್ಯೂಸ್

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್

Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್

Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್‌ ಎಚ್ಚರಿಕೆ

Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್‌ ಎಚ್ಚರಿಕೆ

Earthquake…! ರೋಡ್‌ ರೋಲರ್‌ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು

Earthquake…! ರೋಡ್‌ ರೋಲರ್‌ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

1-lasike

Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Untitled-1

Kasaragod Crime News: ರಸ್ತೆಯಲ್ಲಿ ಬಿಯರ್‌ ಬಾಟ್ಲಿ ಒಡೆದ ಮೂವರ ಬಂಧನ

byndoor

Belthangady: ಬಸ್‌ ಬೈಕ್‌ ಢಿಕ್ಕಿ, ಸವಾರ ಗಂಭೀರ

5

Malpe: ಮೆಹಂದಿಯಲ್ಲಿ ತಡರಾತ್ರಿವರೆಗೆ ಡಿಜೆ ಬಳಕೆ; ಪ್ರಕರಣ ದಾಖಲು

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.