ಖಗೋಳ ಯಾತ್ರೆ ಇತಿಹಾಸದಲ್ಲಿ ಸುವರ್ಣ ಅಧ್ಯಾಯ
Team Udayavani, Aug 4, 2020, 6:22 AM IST
ಜಗತ್ತಿನ ಮೊತ್ತಮೊದಲ ಮರುಬಳಕೆ ಮಾಡಬಹುದಾದ, ಸ್ಪೇಸ್ ಎಕ್ಸ್ ಕಂಪೆನಿಯ ‘ಫಾಲ್ಕನ್-9’ ರಾಕೆಟ್‌ನಲ್ಲಿ ಕುಳಿತು ಮೇ 31ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣ ಬೆಳೆಸಿದ್ದ ಅಮೆರಿಕದ ಇಬ್ಬರು ವಿಜ್ಞಾನಿಗಳು ಸೋಮವಾರ, ಭೂಮಿಗೆ ಯಶಸ್ವಿಯಾಗಿ ಹಿಂದಿರುಗಿದ್ದಾರೆ. ಬಾಹ್ಯಾಕಾಶ ಪ್ರಯಾಣದಲ್ಲಿ ಇದೊಂದು ದಾಖಲೆಯಾಗಿದ್ದು, ಹೊಸ ಅಧ್ಯಾಯಕ್ಕೆ ಇದು ನಾಂದಿ ಹಾಡಿದೆ.
ಪ್ರಯಾಣಿಸಿದ್ದು ಯಾವಾಗ?
ಮೇ 31ರ ಮಧ್ಯ ರಾತ್ರಿ ಭಾರತೀಯ ಕಾಲಮಾನ ಸುಮಾರು 12 ಗಂಟೆ ಹೊತ್ತಿಗೆ, ಫ್ಲಾರಿಡಾದಲ್ಲಿರುವ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ನಾಸಾಕ್ಕೆ ‘ಫಾಲ್ಕನ್ 9’ ರಾಕೆಟ್ ನಲ್ಲಿ ರಾಬರ್ಟ್ ಬೆಹ್ನ್ ಕೆನ್ ಹಾಗೂ ಡಗ್ಲಾಸ್ ಹರ್ಲೆ ಎಂಬಿಬ್ಬರು ಖಗೋಳ ಯಾತ್ರಿಕರು ಬಾಹ್ಯಾಕಾಶದಲ್ಲಿರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದ್ದಾರೆ. ಆ ರಾಕೆಟ್ ಬಾಹ್ಯಾಕಾಶಕ್ಕೆ ಆ ವಿಜ್ಞಾನಿಗಳನ್ನು ತಲುಪಿಸಿ ಮತ್ತೆ ಕೆನಡಿ ಬಾಹ್ಯಾಕಾಶ ಕೇಂದ್ರಕ್ಕೆ ಹಿಂದಿರುಗಿತ್ತು! ಇಬ್ಬರು ವಿಜ್ಞಾನಿಗಳು ಇದ್ದ ಸ್ಪೇಸ್ ಕ್ಯಾಪ್ಸೂಲ್, ರಾಕೆಟ್‌ನಿಂದ ಬೇರ್ಪಟ್ಟ ನಂತರ ವಿಜ್ಞಾನಿಗಳನ್ನು ಬಾಹ್ಯಾಕಾಶ ನಿಲ್ದಾಣಕ್ಕೆ ತಲುಪಿಸಿತ್ತು.
ಹಿಂದಿರುಗಿದ್ದು ಯಾವಾಗ?
ಭಾರತೀಯ ಕಾಲಮಾನದ ಪ್ರಕಾರ, ಆ. 2ರ ಮಧ್ಯರಾತ್ರಿ 12:18ರ ಸುಮಾರಿಗೆ ಖಗೋಳ ಯಾತ್ರಿಗಳಿದ್ದ ಸ್ಪೇಸ್ ಕ್ಯಾಪ್ಸೂಲ್ ಮೆಕ್ಸಿಕೋ ಕೊಲ್ಲಿಯಲ್ಲಿ ಬಂದಿಳಿದಿದೆ. ಅವರು ಬಂದಿಳಿಯುವ ಜಾಗವನ್ನು ಮೊದಲೇ ಗ್ರಹಿಸಿದ್ದ ಸ್ಪೇಸ್ ಎಕ್ಸ್ ತಂತ್ರಜ್ಞರು, ಈಜುಗಾರರೊಂದಿಗೆ ನೌಕೆಯಲ್ಲಿ ಸಾಗಿ ಅವರನ್ನು ಸುರಕ್ಷಿತವಾಗಿ ಕರೆದುಕೊಂಡು ಬಂದಿದ್ದಾರೆ.
ಹೆಗ್ಗಳಿಕೆಯೇನು?
ಮರುಬಳಕೆ ಮಾಡಬಹುದಾದ ರಾಕೆಟ್‌ನಲ್ಲಿ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳಿಸಿ, ಆನಂತರ ಅಲ್ಲಿಂದ ಅವರನ್ನು ಭೂಮಿಗೆ ಸುರಕ್ಷಿತವಾಗಿ ವಾಪಸ್ ಕರೆಯಿಸಿಕೊಂಡ ವಿಶ್ವದ ಮೊದಲ ಖಾಸಗಿ ಕಂಪೆನಿ ಎಂಬ ಹೆಗ್ಗಳಿಕೆಗೆ ಸ್ಪೇಸ್ ಎಕ್ಸ್ ಹಾಗೂ ಅದರ ಮಾಲಕ ಎಲಾನ್ ಮಸ್ಕ್ ಪಾತ್ರರಾಗಿದ್ದಾರೆ. ಖಗೋಳ ಯಾತ್ರೆಯ ಇತಿಹಾಸದಲ್ಲಿ ಇದೊಂದು ಅಪೂರ್ವ ಸಾಧನೆ.
– 679 ಕೋಟಿ ರೂ. ಈ ಬೃಹತ್ ಯೋಜನೆಗೆ ಸುರಿದ ಹಣ
– 468 ಕೋಟಿ ರೂ. ಫಾಲ್ಕನ್-9 ಉಡಾವಣೆಗೆ ತಗುಲಿದ ವೆಚ್ಚ
– 28,163 ಕಿ.ಮೀ. ಭೂಮಿಗೆ ಹಿಂದಿರುಗುವಾಗ ಸ್ಪೇಸ್ ಕ್ಯಾಪ್ಸೂಲ್‌ನ ವೇಗ (ಪ್ರತಿ ಗಂಟೆಗೆ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
MUST WATCH
ಹೊಸ ಸೇರ್ಪಡೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.