ಮತ್ತೂಂದು ಸ್ಪೇಸ್ ಎಕ್ಸ್ ರಾಕೆಟ್ ಸ್ಫೋಟ
Team Udayavani, Mar 5, 2021, 7:08 AM IST
ಕ್ಯಾಲಿಫೋರ್ನಿಯಾ: ಅಮೆರಿಕದ ಪ್ರಸಿದ್ಧ ರಾಕೆಟ್ ನಿರ್ಮಾಣ ಸಂಸ್ಥೆ ಸ್ಪೇಸ್ ಎಕ್ಸ್‌ನ ಸ್ಟಾರ್‌ಶಿಪ್ ಪರೀಕ್ಷಾ ಮಾದರಿಯ ರಾಕೆಟ್, ಅತ್ಯುನ್ನತ ಎತ್ತರದ ಪರೀಕ್ಷಾ ಹಾರಾಟ ಮುಗಿಸಿ, ಲ್ಯಾಂಡ್ ಆಗುವ ವೇಳೆ ಸ್ಫೋಟಗೊಂಡಿದೆ. ಮುಂದಿನ ಪೀಳಿಗೆಯ ವಾಹನವಾದ “ಎಸ್‌ಎನ್- 10′ ರಾಕೆಟ್, ಟೆಕ್ಸಾಸ್‌ನ ಬೊಕಾ ಚಿಕಾ ಎಂಬಲ್ಲಿ ಸುರಕ್ಷಿತವಾಗಿಯೇ ಇಳಿದಿತ್ತು. ಆದರೆ ಕಾಂಕ್ರೀಟ್ ಲ್ಯಾಂಡಿಂಗ್ ಪ್ಯಾಡ್ ಮೇಲೆ ಇಳಿದ ಎಂಟೇ ನಿಮಿಷಗಳಲ್ಲಿ ಸ್ಫೋಟದಿಂದ ಛಿದ್ರವಾಗಿದೆ. ರ್ಯಾಪ್ಟರ್ ಎಂಜಿನ್‌ಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದೇ ಸ್ಫೋಟಕ್ಕೆ ಕಾರಣ ಎಂದು ತಿಳಿದುಬಂದಿದೆ.
3ನೇ ವೈಫಲ್ಯ: ಈಗಿರುವ ಫಾಲ್ಕನ್ ರಾಕೆಟ್‌ಗಳಿಗೆ ಪರ್ಯಾಯವಾಗಿ ಸುಧಾರಿತ ಮಾದರಿಯಲ್ಲಿ ನಿರ್ಮಿಸಲಾದ ಸ್ಟಾರ್‌ಶಿಪ್ ರಾಕೆಟ್‌ಗಳನ್ನು ಸರಣಿ ರೂಪದಲ್ಲಿ ಸ್ಪೇಸ್ ಎಕ್ಸ್ ಪರೀಕ್ಷೆಗೊಳಪಡಿಸುತ್ತಿದೆ. ಈಗಾಗಲೇ ಎಸ್‌ಎನ್-8, ಎಸ್‌ಎನ್-9 ಪರೀಕ್ಷೆ ಪೇಲವ ಅಂತನ್ನಿಸಿಕೊಂಡರೂ ಪ್ರಸ್ತುತ ಸ್ಫೋಟಗೊಂಡ ಎಸ್‌ಎನ್-9 ರಾಕೆಟ್ ವಾಹನ ನಿರೀಕ್ಷೆಗೂ ಮೀರಿ ಫಲಿತಾಂಶ ನೀಡಿದೆ. 50 ಮೀಟರ್ ಎತ್ತರದ ಈ ಸ್ಟಾರ್‌ಶಿಪ್ ರಾಕೆಟ್ ಕಕ್ಷೀಯ ಉಪಗ್ರಹಗಳನ್ನಲ್ಲದೆ, ಸಿಬಂದಿ- ಪ್ರಯಾಣಿಕರನ್ನೂ ಕರೆದೊಯ್ಯುವ ಸಾಮರ್ಥ್ಯ ಹೊಂದಿದೆ. ಈ ರಾಕೆಟ್ ಬಳಸಿಯೇ 2023ರಲ್ಲಿ ಚಂದ್ರ, ಮಂಗಳನಲ್ಲಿ ಮಾನವನನ್ನು ಕರೆದೊಯ್ಯಲು ಮಸ್ಕ್ ಯೋಜಿಸಿದ್ದಾರೆ.
ಸ್ಪೇಸ್ ಎಕ್ಸ್ ಮೇಲೆ ಸಾಕಷ್ಟು ನಿರೀಕ್ಷೆ :
ಮಸ್ಕ್ ಅವರು ತಮ್ಮ ಕನಸನ್ನು ಪ್ರಕಟಿಸುತ್ತಿದ್ದಂತೆ ಜಗತ್ತಿನ ನಾನಾ ಉದ್ಯಮಿಗಳು, ಈ ಆಕಾಶಕಾಯದಲ್ಲಿ ಮಂಗಳ ಅಥವಾ ಚಂದ್ರನನ್ನು ಸುತ್ತುವ ತವಕದಲ್ಲಿದ್ದಾರೆ. ಮೊನ್ನೆಯಷ್ಟೇ ಜಪಾನಿನ ಉದ್ಯಮಿಯೊಬ್ಬ, ಚಂದ್ರದಲ್ಲಿಗೆ ಹೋಗುವ ಸ್ಪೇಸ್ ಎಕ್ಸ್‌ನ ಆಕಾಶಕಾಯದಲ್ಲಿ ತಾನು 9 ಸೀಟುಗಳನ್ನು ಬುಕ್ ಮಾಡಿದ್ದು, ತನ್ನೊಂದಿಗೆ ಬರುವವರು ತನ್ನನ್ನು ಸಂಪರ್ಕಿಸಿ ಆಸನಗಳನ್ನು ಬುಕ್ ಮಾಡಿಕೊಳ್ಳಬಹುದು ಎಂದು ಜಗತ್ತಿನ ಎಲ್ಲ ರಾಷ್ಟ್ರಗಳ ನಾಗರಿಕರಿಗೆ ಆಫರ್ ಕೊಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
Elon Musk: ಭಾರತದಲ್ಲಿ 1 ದಿನದಲ್ಲಿ 6.4 ಕೋಟಿ ಮತ ಎಣಿಕೆ: ಉದ್ಯಮಿ ಮಸ್ಕ್ ಮೆಚ್ಚುಗೆ!
Sheikh Hasina, ಅದಾನಿ ನಡುವಿನ ಒಪ್ಪಂದದ ಪರಿಶೀಲನೆಗೆ ಸಮಿತಿ ರಚಿಸಿದ ಬಾಂಗ್ಲಾದೇಶ!
Nijjar ಹ*ತ್ಯೆಗೆ ಮೋದಿ ನಂಟು ವರದಿ: “ಗುಪ್ತಚರರ’ ವಿರುದ್ಧ ಟ್ರಾಡೊ ಗರಂ
Pakistan: ಪಾಕ್‌ನಲ್ಲಿ ಹಿಂಸಾಚಾರ; ಒಟ್ಟು 37 ಮಂದಿ ಸಾವು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
Drink & Drive Case: ಕುಡಿದು ವಾಹನ ಚಾಲನೆ; ʼಮಂಜುಮ್ಮೆಲ್ ಬಾಯ್ಸ್ʼ ನಟ ಬಂಧನ
Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು
IPL Mega Auction: ಮೊದಲ ದಿನದ ಹರಾಜಿನ ಬಳಿಕ ಆರ್ ಸಿಬಿ ತಂಡ ಹೀಗಿದೆ ನೋಡಿ
Arrested: ಹೊಯ್ಸಳ ಪೊಲೀಸ್ ಮೇಲೆ ಹಲ್ಲೆ; ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.