![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Jul 5, 2017, 3:45 AM IST
ಸಿಯೋಲ್: ಅಮೆರಿಕ ಸೇರಿದಂತೆ, ಅದರ ಮಿತ್ರ ರಾಷ್ಟ್ರಗಳ ವಿರುದ್ಧ ಕಾಲು ಕೆರೆಯುತ್ತಲೇ ಇರುವ ಉತ್ತರ ಕೊರಿಯಾ, ಇದೇ ಮೊದಲ ಬಾರಿಗೆ ಪರಮಾಣು ಸಿಡಿತಲೆಯೊಂದಿಗೆ ಉಡಾಯಿಸ ಬಹುದಾದ ಖಂಡಾಂತರ ಕ್ಷಿಪಣಿಯ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಿದೆ.
ಹವಾಸಂಗ್-14 ಹೆಸರಿನ ಕ್ಷಿಪಣಿ ಇದಾಗಿದ್ದು, 2,802 ಕಿ.ಮೀ. ಎತ್ತರಕ್ಕೆ ಇದು ಸಾಗಿ, 933 ಕಿ.ಮೀ. ದೂರಕ್ಕೆ ಹೋಗಿ ಗುರಿ ಛೇದಿಸಿದೆ. ಈ ಬೆಳವಣಿಗೆಯನ್ನು ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ವೀಕ್ಷಿಸಿದ್ದಾರೆ ಎಂದು ಉ.ಕೊರಿಯಾದ ಅಧಿಕೃತ ಮಾಧ್ಯಮ ವರದಿ ಹೇಳಿದೆ. ಉ.ಕೊರಿಯಾದ ಈ ಉನ್ಮಾದದಿಂದ ದ.ಕೊರಿಯಾ, ಜಪಾನ್, ಅಮೆರಿಕಗಳಿಗೆ ಹೊಸ ತಲೆನೋವು ಶುರುವಾಗಿದೆ. ಈ ನೂತನ ಕ್ಷಿಪಣಿ ಅಮೆರಿಕದ ಅಲಾಸ್ಕಾವನ್ನು ತಲುಪುವ ಸಾಮರ್ಥ್ಯ ಹೊಂದಿದೆ ಎಂದು ಅಮೆರಿಕದ ರಕ್ಷಣಾ ತಜ್ಞರು ಹೇಳಿದ್ದಾರೆ. ಇದರ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಟ್ರಂಪ್ ಟ್ವೀಟ್ ಮಾಡಿದ್ದು, ಉ.ಕೊರಿಯಾದ ಈ ಅಸಂಬಂದ್ಧಗಳನ್ನು ಚೀನಾ ಒಂದೇ ಬಾರಿಗೆ ನಿಲ್ಲಿಸಬೇಕು ಎಂದಿದ್ದಾರೆ. ಟ್ರಂಪ್ ಟ್ವೀಟ್‌ಗೆ ಚೀನಾ ಪ್ರತಿಕ್ರಿಯಿಸಿದ್ದು, ಉ.ಕೊರಿಯಾದ ಪರಮಾಣು ವಿವಾದ ಗಳನ್ನು ಬಗೆಹರಿಸಲು ಸರ್ವಯತ್ನ ಮಾಡುತ್ತಿರುವುದಾಗಿ, ಸಂಯಮವಹಿಸಬೇಕೆಂದು ಹೇಳಿದೆ.
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
You seem to have an Ad Blocker on.
To continue reading, please turn it off or whitelist Udayavani.