ಇಂಗ್ಲೆಂಡ್ನಲ್ಲೊಂದು ವಿಚಿತ್ರ ಪ್ರಕರಣ! ಬುದ್ಧಿಮಾಂದ್ಯತೆ ಮುಚ್ಚಿಟ್ಟು ವೀರ್ಯದಾನ!
ಇಂಗ್ಲೆಂಡ್ನ 15 ಮಕ್ಕಳ ತಂದೆಯ ವಿವರ ಬಹಿರಂಗಕ್ಕೆ ನ್ಯಾಯಾಲಯ ಆದೇಶ
Team Udayavani, Jun 2, 2022, 6:55 AM IST
ಲಂಡನ್: ಇಂಗ್ಲೆಂಡ್ನಲ್ಲೊಂದು ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ. ಬಾಲಿವುಡ್ನಲ್ಲಿ ಹಲವು ವರ್ಷಗಳ ಹಿಂದೆ ಬಿಡುಗಡೆಯಾಗಿ ಯಶಸ್ವಿಯಾದ “ವಿಕಿ ಡೋನರ್’ ಸಿನಿಮಾದ ಪಾತ್ರಧಾರಿಯಂತೆ ಜೇಮ್ಸ್ ಮೆಕ್ಡಗಾಲ್ ಕೂಡ ವೀರ್ಯದಾನ ಮಾಡಿದ್ದಾನೆ. ಹೀಗೆ ಈತ 15 ಮಕ್ಕಳಿಗೆ ಅಪ್ಪ ಕೂಡ ಆಗಿದ್ದಾನೆ!
ದುರದೃಷ್ಟವಶಾತ್ ಈತ ತನಗಿರುವ ಆರೋಗ್ಯ ಸಮಸ್ಯೆಯನ್ನು ಮುಚ್ಚಿಟ್ಟಿದ್ದಾನೆ. ಈತನ ವಂಶವಾಹಿಯಲ್ಲೇ ಬುದ್ಧಿಮಾಂದ್ಯತೆ, ಕಡಿಮೆ ನೆನಪಿನ ಶಕ್ತಿಯಿರುವುದು ಈಗ ಖಾತ್ರಿಯಾಗಿದೆ. ಇದು ಗುಣಪಡಿಸಲಾಗದ ಸಮಸ್ಯೆ. ಇದನ್ನು ಆತ ವೀರ್ಯದಾನ ಮಾಡುವ ಮುನ್ನ ತಾಯಂದಿರಿಗೆ ಹೇಳಿಲ್ಲ! ಹಾಗಾಗಿ, ಈ ಕಾಯಿಲೆ ರಕ್ತಗತವಾಗಿ ಈತನ ವೀರ್ಯದಿಂದ ಹುಟ್ಟಿದ ಮಕ್ಕಳಿಗೆ, ಈ ಮಕ್ಕಳಿಂದ ಜನಿಸುವ ಮಕ್ಕಳಿಗೆ ಅಲ್ಲಿಂದ ಅವರ ವಂಶಪಾರಂಪರ್ಯವಾಗಿ ಈ ಕಾಯಿಲೆ ಮುಂದುವರಿಯುತ್ತದೆ.
ಹಾಗಾಗಿ, ಇದನ್ನು ಇಂಗ್ಲೆಂಡ್ನ ಡರ್ಬಿ ಕ್ರೌನ್ ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿದೆ. ಈತನ ಮೋಸದ ಜಾಲಕ್ಕೆ ಇತರರು ಬಲಿಯಾಗಬಾರದು ಎಂಬ ಕಾರಣಕ್ಕೆ ಈತನ ವಿವರಗಳನ್ನು ಬಹಿರಂಗಪಡಿಸಲು ಆದೇಶಿಸಿದೆ.
ಇಷ್ಟೆಲ್ಲ ಎಡವಟ್ಟುಗಳಾಗಲು ಈತನೇ ಕಾರಣ. ವೀರ್ಯದಾನ ಮಾಡುವಾಗ ಸಹಿ ಮಾಡಿದ ಒಪ್ಪಂದಪತ್ರದಲ್ಲಿ ಹುಟ್ಟುವ ಮಕ್ಕಳನ್ನು ಭೇಟಿ ಮಾಡುವುದಿಲ್ಲ ಎಂದು ಸಮ್ಮತಿಸಿದ್ದಾನೆ. ಆದರೆ ಇತ್ತೀಚೆಗೆ ತನಗೆ ನಾಲ್ಕು ಮಕ್ಕಳನ್ನು ಭೇಟಿ ಮಾಡಲು ಆಗುತ್ತಿಲ್ಲ ಎಂದು ಡರ್ಬಿ ಕ್ರೌನ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾನೆ. ಅದೇ ಆತನಿಗೆ ಮುಳುವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
US Polls: ಕಮಲಾ ಗೆಲುವಿಗಾಗಿ ಪೂರ್ವಿಕರ ಗ್ರಾಮದಲ್ಲಿ ಅರ್ಚನೆ, ಅಭಿಷೇಕ!
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.