ನಮ್ಮ ದುಡ್ಡು ವಾಪಸ್ ಕೊಡಿ : ಲಂಕೆಯಲ್ಲಿ ನಿಲ್ಲದ ಜನರ ಆಕ್ರೋಶ
Team Udayavani, Jul 14, 2022, 6:45 AM IST
ಕೊಲೊಂಬೋ/ಚೆನ್ನೈ: “ನಮ್ಮಿಂದ ಏನು ಪಡೆದುಕೊಂಡಿದ್ದೀರೋ, ಅದನ್ನು ವಾಪಸ್ ಮಾಡಿ’ ಹೀಗೆಂದು ಶ್ರೀಲಂಕಾದಲ್ಲಿನ ಪ್ರತಿಭಟನಾಕಾರರು ಪರಾರಿ ಯಾಗಿರುವ ಅಧ್ಯಕ್ಷ ಗೋಟಬಯ ರಾಜಪಕ್ಸ ಮತ್ತು ಹಂಗಾಮಿ ಅಧ್ಯಕ್ಷರಾಗಿ ನೇಮಕ ಗೊಂಡಿರುವ ರೆನಿಲ್ ವಿಕ್ರಮ ಸಿಂಘೆ ಅವರಿಗೆ ಒತ್ತಾಯಿಸುತ್ತಿದ್ದಾರೆ.
ರಾಜಪಕ್ಸ ದೇಶಬಿಟ್ಟು ಪರಾರಿಯಾಗಿದ್ದಾರೆ ಎಂದು ಗೊತ್ತಾಗುತ್ತಲೇ ಜನರು ಶ್ರೀಲಂಕೆ ಯಾದ್ಯಂತ ಬೀದಿಗೆ ಇಳಿದು ಪ್ರತಿಭಟನೆ ನಡೆಸಿದ್ದಾರೆ. ಅವರನ್ನು ಚದುರಿಸುವ ನಿಟ್ಟಿನಲ್ಲಿ ಪೊಲೀಸರು ಮತ್ತು ದ್ವೀಪ ರಾಷ್ಟ್ರದ ಯೋಧರು ಕಾರ್ಯಪ್ರವೃತ್ತ ರಾಗಿದ್ದಾರೆ, ಅಶ್ರು ವಾಯು ಸೆಲ್‌ಗಳನ್ನೂ ಸಿಡಿಸಿದ್ದಾರೆ. ಇದರ ಹೊರತಾಗಿಯೂ ಅವರು “ನೀವು ನಮ್ಮಿಂದ ಕಿತ್ತುಕೊಂಡಿರುವ ದುಡ್ಡು ವಾಪಸ್ ಮಾಡಿ’ ಎಂದು ಘೋಷಣೆ ಕೂಗಿದ್ದಾರೆ.
ಲಾಠಿ ಪ್ರಹಾರ ಮತ್ತು ಅಶ್ರುವಾಯು ಸಿಡಿಸಿದರೂ ಲೆಕ್ಕಿಸದೆ ಕೊಲೊಂಬೋಗೆ ದ್ವೀಪರಾಷ್ಟ್ರದ ವಿವಿಧ ಭಾಗಗಳಿಂದ ಬಂದ ಜನರು ಪ್ರತಿಭಟನೆ ನಡೆಸು ತ್ತಿದ್ದಾರೆ. ಪ್ರಮುಖ ಸರ್ಕಾರಿ ಕಟ್ಟಡ ಗಳನ್ನು ಏರಿ ನಿಂತು ಘೋಷಣೆ ಹಾಕುತ್ತಿದ್ದಾರೆ.
ಒಬ್ಬ ಸಾವು: ಪ್ರಧಾನಿ ರೆನಿಲ್ ವಿಕ್ರಮ ಸಿಂಘೆ ನಿವಾಸದ ಬಳಿ ಪ್ರತಿಭಟನೆ ನಡೆಸುತ್ತಿದ್ದ ಗುಂಪು ಚದುರಿಸಲು ಪೊಲೀಸರು ಅಶ್ರುವಾಯು ಸೆಲ್ ಸಿಡಿಸಿದ ಸಂದರ್ಭದಲ್ಲಿ ಯುವಕ ತೀವ್ರ ಅಸ್ವಸ್ಥನಾಗಿದ್ದಾನೆ. ಆತನನ್ನು ಆಸ್ಪತ್ರೆಗೆ ದಾಖಲಿಸಿದರೂ, ಅಸುನೀಗಿದ್ದಾನೆ.
ನಿರ್ಧಾರ ಕೈಗೊಳ್ಳಿ: ಇನ್ನೊಂದೆಡೆ, ದ್ವೀಪ ರಾಷ್ಟ್ರದಲ್ಲಿನ ಪರಿಸ್ಥಿತಿ ನಿಯಂತ್ರ ಣಕ್ಕೆ ರಾಜಕೀಯವಾಗಿ ಸೂಕ್ತ ನಿರ್ಧಾರ ಕೈಗೊಂಡು, ಅದನ್ನು ಅನುಷ್ಠಾನಕ್ಕೆ ತರಬೇಕು ಎಂದು ಸೇನೆಯ ಹಿರಿಯ ಅಧಿಕಾರಿಗಳು ಸರ್ವಪಕ್ಷಗಳಿಗೆ ಒತ್ತಾಯಿಸಿದ್ದಾರೆ.
ಮಾಲ್ಡೀವ್ಸ್‌ನಲ್ಲಿ ಆಕ್ಷೇಪ: ಶ್ರೀಲಂಕೆಯ ಅಧ್ಯಕ್ಷ ಗೋಟಬಯ ರಾಜಪಕ್ಸ ಅವರಿಗೆ ಸರ್ಕಾರಿ ಮಟ್ಟದ ಸ್ವಾಗತ ನೀಡಿ, ಆಶ್ರಯ ನೀಡಿದ್ದಕ್ಕೆ ಮಾಲ್ಡೀವ್ಸ್‌ನ ನ್ಯಾಷನಲ್ ಪಾರ್ಟಿ ಆಕ್ಷೇಪ ಮಾಡಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಪಕ್ಷದ ನಾಯಕ ದುನ್ಯಾ ಮೌಮೂನ್ ದ್ವೀಪ ರಾಷ್ಟ್ರದ ಜನರ ಭಾವನೆಗಳಿಗೆ ಚ್ಯುತಿ ತಂದಂತೆ ಆಗಿದೆ ಎಂದಿದ್ದಾರೆ. ಆ ದೇಶದ ಸಂಸತ್‌ನ ಸ್ಪೀಕರ್ ಮೊಹಮ್ಮದ್ ನಶೀದ್ ಗೊಟಬಯ ಪರಾರಿಯಾಗಲು ನೆರವು ನೀಡಿದ್ದಾರೆ ಎಂಬ ವರದಿಗಳೂ ಇವೆ. ಜತೆಗೆ ಒಟ್ಟಾರೆ ಬೆಳವಣಿಗೆ ಬಗ್ಗೆ ಅಲ್ಲಿನ ಸರ್ಕಾರ ಮೌನ ವಹಿಸಿದೆ.
ಬಾರದ ಚೀನ ನೆರವು
ಕಷ್ಟ ಕಾಲದಲ್ಲಿ ಸಾಲ ಕೊಡುತ್ತೇನೆ ಎಂದು ಹೇಳಿದ್ದ ಚೀನ ಹಿಂದೇಟು ಹಾಕಿದ ಘಟನೆ ಬೆಳಕಿಗೆ ಬಂದಿದೆ. 73 ಮಿಲಿಯನ್ ಅಮೆರಿಕನ್ ಡಾಲರ್ ನೆರವಿನ ಪೈಕಿ ಕೊಲೊಂಬೋ ತಲುಪಿದ್ದು ಒಂದು ದೊಡ್ಡ ಹಡಗಿನಲ್ಲಿ ಬಂದ ಅಕ್ಕಿ ಮಾತ್ರ. ಉಳಿದಂತೆ ಎಲ್ಲವೂ ಭರವಸೆಯ ಮಾತುಗಳೇ ಎಂದು ಈಗ ವ್ಯಕ್ತವಾಗಿದೆ. ಇದು ಕೂಡ ಬಿಕ್ಕಟ್ಟಿಗೆ ಕಾರಣ ಎಂದು ಹೇಳಲಾಗುತ್ತಿದೆ. ಮತ್ತೊಂದು ಬೆಳವಣಿಗೆಯಲ್ಲಿ ಸದ್ಯ ಉಂಟಾಗಿರುವ ಬಿಕ್ಕಟ್ಟು ಚೀನದ ಹೂಡಿಕೆ ಮತ್ತು ದ್ವಿಪಕ್ಷೀಯ ಬಾಂಧವ್ಯಗಳಿಗೆ ಪ್ರತಿಕೂಲವಾಗಿ ಪರಿಣಮಿಸಲಿದೆ ಎಂದೂ ರಾಜಕೀಯ ಕ್ಷೇತ್ರದ ಪರಿಣತರು ಅಭಿಪ್ರಾಯಪಡಲಾರಂಭಿಸಿದ್ದಾರೆ. ಆದರೆ ಚೀನ ಸರಕಾರ ಬೆಳವಣಿಗೆಗಳ ಬಗ್ಗೆ ಇದುವರೆಗೆ ಪ್ರತಿಕ್ರಿಯೆ ನೀಡಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
Israel ನಡೆಸಿದ ಭಾರೀ ದಾಳಿಗೆ ಸಿರಿಯಾದಲ್ಲಿ ಲಘು ಭೂಕಂಪನ!
New York: ಅಮೆರಿಕದಲ್ಲಿ ಶೂಟೌಟ್: ಇಬ್ಬರ ಕೊಂದು ವಿದ್ಯಾರ್ಥಿನಿ ಆತ್ಮಹ*ತ್ಯೆ
Moscow: ಕೆಮಿಕಲ್ ಅಸ್ತ್ರ ಬಳಸಿದ್ದ ರಷ್ಯಾ ಪರಮಾಣು ರಕ್ಷಣಾಪಡೆ ಮುಖ್ಯಸ್ಥನ ಹತ್ಯೆ
Watch Video: ದ್ವೀಪರಾಷ್ಟ್ರ ವನವಾಟುನಲ್ಲಿ ಪ್ರಬಲ ಭೂಕಂಪ, ಹಲವಾರು ಕಟ್ಟಡ ಕುಸಿತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.