ಲಂಕಾದಲ್ಲಿ ಕೃಷಿ ಸಂಬಂಧಿ ರಾಸಾಯನಿಕಗಳ ಆಮದಿನ ಮೇಲಿನ ನಿರ್ಬಂಧ ರದ್ದು
Team Udayavani, Nov 22, 2021, 10:15 PM IST
ಕೊಲೊಂಬೋ: ಜಗತ್ತಿನಲ್ಲೇ ಮೊದಲ “ಸಂಪೂರ್ಣ ಸಾವಯವ ಕೃಷಿ ದೇಶ’ ಎಂಬ ಹೆಗ್ಗಳಿಕೆಯನ್ನು ಪಡೆಯುವ ಶ್ರೀಲಂಕಾದ ಕನಸು ಭಗ್ನವಾಗಿದೆ.
ಕ್ರಿಮಿನಾಶಕಗಳು ಮತ್ತು ಸಾವಯವ ಕೃಷಿಯಲ್ಲಿ ಬಳಸಲಾಗುವ ವಸ್ತುಗಳ ಆಮದು ಮೇಲೆ ಹೇರಿದ್ದ ನಿಷೇಧವನ್ನು ಶ್ರೀಲಂಕಾ ಸರ್ಕಾರ ಹಿಂಪಡೆದಿದೆ.
ವಿದೇಶಿ ವಿನಿಮಯದ ಕೊರತೆ, ಆಹಾರ, ಕಚ್ಚಾತೈಲ ಮತ್ತು ಇತರೆ ಅವಶ್ಯಕ ವಸ್ತುಗಳ ಅಭಾವದಿಂದಾಗಿ ದ್ವೀಪ ರಾಷ್ಟ್ರವು ಗಂಭೀರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವಾಗಲೇ ಈ ಬೆಳವಣಿಗೆ ನಡೆದಿದೆ.
ಕಳೆದ ತಿಂಗಳಷ್ಟೇ ಸರ್ಕಾರವು ದೇಶದ ಪ್ರಮುಖ ರಫ್ತು ಉತ್ಪನ್ನವಾದ ಚಹಾ ಕೃಷಿಗೆ ಬಳಸುವ ರಾಸಾಯನಿಕ ಗೊಬ್ಬರದ ಮೇಲೆ ವಿಧಿಸಿದ್ದ ನಿರ್ಬಂಧವನ್ನು ಹಿಂಪಡೆದಿತ್ತು.
ಇದನ್ನೂ ಓದಿ:ಪರಿಷತ್ ಚುನಾವಣೆ: 17 ಮಂದಿ ಕಾಂಗ್ರೆಸ್ ಅಭ್ಯರ್ಥಿಗಳ ಅಧಿಕೃತ ಪಟ್ಟಿ ಬಿಡುಗಡೆ
ಈಗ ಕೃಷಿ ಸಂಬಂಧಿತ ಆಮದಿನ ನಿರ್ಬಂಧ ವಿರೋದಿಸಿ ದೇಶಾದ್ಯಂತ ರೈತರು ಪ್ರತಿಭಟನೆ ಆರಂಭಿಸಲು ಸಿದ್ಧತೆ ನಡೆಸುತ್ತಿದ್ದಂತೆ, ಲಂಕಾ ಸರ್ಕಾರವು ಮಣಿದಿದೆ. ತುರ್ತಾಗಿ ಬೇಕಾಗಿರುವ ಕೃಷಿ ಸಂಬಂಧಿ ರಾಸಾಯನಿಕಗಳು, ಹರ್ಬಿಸೈಡ್‌ಗಳು, ಕ್ರಿಮಿನಾಶಕಗಳನ್ನು ಆಮದು ಮಾಡಿಕೊಳ್ಳಲು ಒಪ್ಪಿಗೆ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.