ಸಾಜಿತ್ ಪ್ರೇಮದಾಸಗೆ ಅಧ್ಯಕ್ಷ ಪಟ್ಟ? ಶ್ರೀಲಂಕಾ ಪ್ರಮುಖ ವಿಪಕ್ಷದ ಅಭ್ಯರ್ಥಿಯಾಗುವ ಸಾಧ್ಯತೆ
Team Udayavani, Jul 13, 2022, 6:30 AM IST
ಕೊಲಂಬೊ: ಶ್ರೀಲಂಕಾದ ರಾಜಧಾನಿ ಕೊಲಂಬೋದ ಸಂಸದರಾದ ಸಾಜಿತ್ ಪ್ರೇಮದಾಸ ಅವರನ್ನು ಅಧ್ಯಕ್ಷ ಪಟ್ಟಕ್ಕೆ ಕೂರಿಸಲು, ಶ್ರೀಲಂಕಾ ಸಂಸತ್ತಿನ ಪ್ರಮುಖ ವಿಪಕ್ಷವಾದ ಸಮಗಿ ಜನ ಬಲವೇಗಯಾ (ಎಸ್‌ಜೆಬಿ) ನಿರ್ಧರಿಸಿದೆ.
ಜು. 13ರಂದು ಹಾಲಿ ಅಧ್ಯಕ್ಷ ಗೋಟಬಯ ರಾಜಪಕ್ಸ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ಸಾಧ್ಯತೆಯಿದ್ದು, ರಾಜೀನಾಮೆ ಸಲ್ಲಿಕೆಯಾದ ತತ್‌ಕ್ಷಣ ಅಧ್ಯಕ್ಷ ಸ್ಥಾನಕ್ಕೆ ಸಾಜಿತ್ ಅವರ ಹೆಸರನ್ನು ಶಿಫಾರಸು ಮಾಡಲು ಎಸ್‌ಜೆಬಿ ನಿರ್ಧರಿಸಿದೆ.
ಪಕ್ಷದ ಕಾರ್ಯದರ್ಶಿಯಾದ ರಂಜಿತ್ ಮದ್ದುಮ ಬಂಡಾರ ಅವರು ಈ ಕುರಿತಂತೆ ಪ್ರಸ್ತಾವನೆಯೊಂದನ್ನು ಸಿದ್ಧಪಡಿಸಿದ್ದು, ಅದಕ್ಕೆ ಪಕ್ಷದ ಅಧ್ಯಕ್ಷ ಫೀಲ್ಡ್ ಮಾರ್ಷಲ್ ಸರತ್ ಫೊನ್ಸೆಕಾ ನೇತೃತ್ವದ ಸಂಸದೀಯ ಸಮಿತಿಯು ಸಹಿ ಹಾಕಿದೆ ಎಂದು ಮೂಲಗಳು ತಿಳಿಸಿವೆ.
ಅಧ್ಯಕ್ಷರಾಗಿ ಚುನಾಯಿತರಾಗಲು 113 ಸಂಸದರ ಬೆಂಬಲ ಬೇಕು. ಸದ್ಯಕ್ಕೆ ಎಸ್‌ಜೆಪಿ ಪಕ್ಷವು 50 ಸಂಸದರನ್ನು ಹೊಂದಿದ್ದು, ಸಮಾನ ಮನಸ್ಕ ಇತರ ಪಕ್ಷಗಳ ಬೆಂಬಲ ಸಿಕ್ಕರೆ ಪ್ರೇಮದಾಸ ಅವರು ಅಧ್ಯಕ್ಷರಾಗುವ ಹಾದಿ ಸುಗಮವಾಗುತ್ತದೆ. ಸಾಜಿತ್ ಪ್ರೇಮದಾಸ ಅವರು, 2015ರಲ್ಲಿ ಮೈತಿಪಾಲ ಸಿರಿಸೇನಾ ಅವರ ಅಧ್ಯಕ್ಷರಾಗಿದ್ದಾಗ ಅವರ ಮಂತ್ರಿಮಂಡಲದಲ್ಲಿ ವಸತಿ ಸಚಿವ ರಾಗಿ ಕಾರ್ಯನಿರ್ವಹಿಸಿದ್ದರು. ಇವರು, ಶ್ರೀಲಂಕಾದ 3ನೇ ಅಧ್ಯಕ್ಷರಾಗಿದ್ದ ದಿ. ರಣಸಿಂಘೆ ಪ್ರೇಮದಾಸ ಅವರ ಪುತ್ರ.
ಬಾಸಿಲ್ ರಾಜಪಕ್ಸಗೆ ಮುಜುಗರ: ಶ್ರೀಲಂಕಾದ ಆರ್ಥಿಕ ದುಸ್ಥಿತಿ ಹಾಗೂ ಇತ್ತೀಚೆಗೆ ಸಂಭವಿಸಿದ ಜನರ ದಂಗೆ ಘಟನೆಗಳಿಂದ ವಿಚಲಿತರಾಗಿರುವ ಅಲ್ಲಿನ ಮಾಜಿ ಹಣಕಾಸು ಸಚಿವ ಬಾಸಿಲ್ ರಾಜಪಕ್ಸ ಅವರು ದೇಶ ತೊರೆದು ದುಬಾೖಗೆ ಹೋಗಲು ಮಾಡಿದ ಪ್ರಯತ್ನ ವ್ಯರ್ಥವಾಗಿದೆ.
ಹಾಲಿ ಅಧ್ಯಕ್ಷ ಗೋಟಬಯ ರಾಜಪಕ್ಸ ಸಹೋದರರಾದ ಬಾಸಿಲ್, ದುಬಾೖಗೆ ತೆರಳುವ ಉದ್ದೇಶದಿಂದ ಕುಟುಂಬ ಸಮೇತ ಶುಕ್ರವಾರ ಕೊಲಂಬೊ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಆದರೆ ಅವರನ್ನು ಗುರುತು ಹಿಡಿದ ಜನ ಅವರನ್ನು ತಡೆದು ಗಲಾಟೆ ಮಾಡಿದ್ದಾರೆ. ಹಾಗಾಗಿ, ಬಾಸಿಲ್‌ವುನೆಗೆ ವಾಪಸ್ ಹೋಗಿದ್ದಾರೆ. ಮತ್ತೂಂದೆಡೆ, ರಾಷ್ಟ್ರಾಧ್ಯಕ್ಷ ರಾಜಪಕ್ಸ ಅವರು ಶ್ರೀಲಂಕಾದಿಂದ ದುಬೈಗೆ ಹೋಗಲು ವಿಫಲರಾಗಿದ್ದಾರೆ. ಏರ್‌ಬೇಸ್‌ನಿಂದ ಹೊರಡುವಾಗ ಅಲ್ಲಿನ ಸಿಬಂದಿಯು ತೀವ್ರವಾಗಿ ವಿರೋಧಿಸಿದ್ದರಿಂದ ಪ್ರಯಾಣ ರದ್ದಾಯಿತು ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
Sheikh Hasina ಅವಧಿಯಲ್ಲಾದ ಅಪಹರಣಗಳಿಗೆ ಭಾರತ ಕುಮ್ಮಕ್ಕು: ಬಾಂಗ್ಲಾ ವರದಿ
Meditation; ಜಾಗತಿಕ ಶಾಂತಿ, ಏಕತೆಗೆ ಧ್ಯಾನ ಮುಖ್ಯ ಸಾಧನ: ಶ್ರೀ ಶ್ರೀ ರವಿಶಂಕರ್
Israel ಮೇಲೆ ದಾಳಿಗೆ ಇರಾನ್‌ನಿಂದ ಮಕ್ಕಳ ಬಳಕೆ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.