ಶ್ರೀ ಪುತ್ತಿಗೆ ಮಠದ ಶ್ರೀ ಕೃಷ್ಣವೃಂದಾವನ ವಾರ್ಷಿಕೋತ್ಸವ: ಭಾಗವಹಿಸಿ, ಹರಸಿದ ಪುತ್ತಿಗೆಶ್ರೀ
Team Udayavani, Nov 20, 2023, 2:57 PM IST
ಅಮೇರಿಕ: ಇಲ್ಲಿನ ಹೂಸ್ಟನ್ ಮಹಾನಗರದ ಶ್ರೀ ಪುತ್ತಿಗೆ ಮಠದ ಶ್ರೀ ಕೃಷ್ಣ ವೃಂದಾವನದ 12ನೇ ವಾರ್ಷಿಕೋತ್ಸವದಲ್ಲಿ ಪುತ್ತಿಗೆ ಶ್ರೀಪಾದರು ಪಾಲ್ಗೊಂಡರು.
ಶ್ರೀಪಾದರು ವಿಶ್ವಾದ್ಯಂತ ಸಂಚರಿಸಿ ಸನಾತನ ಹಿಂದೂ ಧರ್ಮ ಪ್ರಚಾರದ ಜೊತೆಗೆ ಶ್ರೀಕೃಷ್ಣ ಭಕ್ತಿ ಪ್ರಸಾರಕ್ಕಾಗಿ ಅಲ್ಲಲ್ಲಿ ಸ್ಥಾಪಿಸಿರುವ ಶ್ರೀಮಠಗಳಲ್ಲಿ ಹೂಸ್ಟನ್ ನಲ್ಲಿರುವ ಮಠ 4ನೇ ಮಠವಾಗಿ 2011 ರಲ್ಲಿ ಸ್ಥಾಪನೆಯಾಗಿದೆ.
ತತ್ಸಂಬಂಧವಾಗಿ ಇತ್ತೀಚೆಗೆ ನಡೆದ ವಾರ್ಷಿಕೋತ್ಸವ ಸಂದರ್ಭದಲ್ಲಿ ಮುಂಜಾನೆ ಶ್ರೀಕೃಷ್ಣದೇವರಿಗೆ 108 ಪ್ರಸನ್ನ ಕಲಶಾಭಿಷೇಕ ಪೂಜೆ ನಡೆಯಿತು.
ಬಳಿಕ ನೆರೆದ ಭಕ್ತರಿಗೆ ಮುದ್ರಾಧಾರಣೆ ನಡೆಯಿತು. ಸಾಯಂಕಾಲ ಗೋಧೂಳಿ ಲಗ್ನದಲ್ಲಿ ವೈಭವದ ಶ್ರೀನಿವಾಸ ಕಲ್ಯಾಣ ಮಹೋತ್ಸವ ನಡೆಯಿತು.
ಉಡುಪಿ ಮೂಲದ ಭಕ್ತರು ಹುಲಿವೇಷಧಾರಿಗಳಾಗಿ ಹುಲಿವೇಷ ಕುಣಿತದೊಂದಿಗೆ ಕಾರ್ಯಕ್ರಮದ ಮೆರಗನ್ನು ಹೆಚ್ಚಿಸಿದರು .ಶ್ರೀಪಾದರು ರಾತ್ರಿ ಪೂಜೆ ಬಳಿಕ ತುಳಸೀ ಪೂಜೆ ನೆರವೇರಿಸಿದರು.
ಕಾರ್ತಿಕ ಮಾಸದ ಸಂದರ್ಭದಲ್ಲಿ ಭಕ್ತರಿಂದ ನಡೆದ ತುಳಸೀ ಸಂಕೀರ್ತನೆ ಕಾರ್ಯಕ್ರಮ ಭಾರತೀಯ ಸಂಸ್ಕೃತಿಯ ಪ್ರತಿರೂಪದಂತೆ ಅತ್ಯಂತ ಶೋಭಾಯಮಾನವಾಗಿತ್ತು.
ಪೂಜ್ಯ ಶ್ರೀಪಾದರು ಎಲ್ಲರನ್ನು ಹರಸಿ ತಮ್ಮ ಚತುರ್ಥ ಪರ್ಯಾಯಕ್ಕೆ ಆಮಂತ್ರಿಸಿದರು. ಎಲ್ಲರಿಗೂ ಭಗವದ್ಗೀತೆ ಬರೆಯುವ ದೀಕ್ಷೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kazakhstan: ಅಜೆರ್ಬೈಜಾನ್ ಏರ್ ಲೈನ್ಸ್ ಪತನ, 25ಕ್ಕೂ ಅಧಿಕ ಪ್ರಯಾಣಿಕರ ಮೃತ್ಯು?
Afghanistan: ತಾಲಿಬಾನ್ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ? 25ಕ್ಕೂ ಅಧಿಕ ಸಾ*ವು
UK: ಒಂದೇ ನಿಮಿಷದಲ್ಲಿ 49 ಗ್ರಾಂ ಕಾಟನ್ ಕ್ಯಾಂಡಿ ಸೇವಿಸಿ ದಾಖಲೆ ಬರೆದ ಮಹಿಳೆ
American Airlines ಅಮೆರಿಕ: ವಿಮಾನಯಾನ ವ್ಯತ್ಯಯ,”ಕ್ರಿಸ್ಮಸ್’ಗೆ ಅಡ್ಡಿ
Bangladesh: 42,600 ಕೋಟಿ ರೂ. ಲಂಚ ಕೇಸ್: ಹಸೀನಾ ವಿರುದ್ಧ ತನಿಖೆ ಶುರು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.