ಶ್ರೀಲಂಕಾ ಸ್ಪೋಟ ಪ್ರಕರಣ : 40 ಶಂಕಿತರ ಬಂಧನ
ಸಾವಿನ ಸಂಖ್ಯೆ 310ಕ್ಕೆ ಏರಿಕೆ ; ಗಾಯಾಳುಗಳಲ್ಲಿ ಹಲವರ ಸ್ಥಿತಿ ಇನ್ನೂ ಗಂಭೀರ
Team Udayavani, Apr 23, 2019, 12:22 PM IST
ದ್ವೀಪರಾಷ್ಟ್ರದಲ್ಲಿ ಇದೀಗ ಎಲ್ಲೆಲ್ಲೂ ದುಗುಡ, ದುಃಖ, ನೋವು ತುಂಬಿದ ಮುಖಗಳೇ ಕಾಣಿಸುತ್ತಿವೆ.
ಕೊಲಂಬೋ: ಈಸ್ಟರ್ ರವಿವಾರ ಶ್ರೀಲಂಕಾ ದ್ವೀಪರಾಷ್ಟ್ರದ ರಾಜಧಾನಿ ಕೊಲಂಬೋದ ವಿವಿಧೆಡೆಗಳಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಇದುವರೆಗೆ ಮೃತಪಟ್ಟವರ ಸಂಖ್ಯೆ 310ಕ್ಕೆ ಏರಿಕೆಯಾಗಿದೆ. ಘಟನೆಗೆ ಸಂಬಂಧಿಸಿದಂತೆ 40 ಜನ ಶಂಕಿತರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ದೇಶವನ್ನೇ ತಲ್ಲಣಗೊಳಿಸಿದ ಈ ದುರಂತ ಘಟನೆಯ ಬಳಿಕ ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನೆ ಅವರು ದೇಶಾದ್ಯಂತ ತುರ್ತುಸ್ಥಿತಿ ಘೋಷಿಸಿದ್ದು ದೇಶದ ಮಿಲಿಟರಿಗೆ ತಾತ್ಕಾಲಿಕ ಪೊಲೀಸ್ ಅಧಿಕಾರವನ್ನು ನೀಡಲಾಗಿದೆ. ಕೆಲವೊಂದು ಸಾಮಾಜಿಕ ಜಾಲತಾಣ ಸೈಟ್ ಗಳನ್ನೂ ಮುಚ್ಚಲಾಗಿದೆ. ರಾಷ್ಟ್ರ ರಾಜಧಾನಿಯ ಜನನಿಬಿಡ ಪ್ರದೇಶಗಳಲ್ಲಿ ಸಶಸ್ತ್ರ ಯೋಧರು ಪಥಸಂಚಲನ ನಡೆಸುತ್ತಿದ್ದಾರೆ. ಕರ್ಫ್ಯೂ ಸ್ಥಿತಿಯನ್ನು ಎರಡನೇ ದಿನಕ್ಕೆ ಮುಂದುವರೆಸಲಾಗಿದೆ.
2009ರಲ್ಲಿ ನಾಗರಿಕ ಯುದ್ಧಕ್ಕೆ ಅಂತ್ಯ ಹಾಡಿದ್ದ ಬಳಿಕ ಮೊನ್ನೆ ರವಿವಾರ ನಡೆದ ಈ ಆತ್ಮಾಹುತಿ ಬಾಂಬ್ ದಾಳಿಗಳೇ ದ್ವೀಪರಾಷ್ಟ್ರದಲ್ಲಿ ಸಂಭವಿಸಿದ ಅತೀದೊಡ್ಡ ದುರಂತವಾಗಿದೆ. ಇನ್ನು ಸೋಮವಾರದಂದು ಕೊಲಂಬೋದ ಪ್ರಮುಖ ಬಸ್ ನಿಲ್ದಾಣವೊಂದರಲ್ಲಿ 87 ಬಾಂಬ್ ಡಿಟೋನೇಟರ್ ಗಳು ಪತ್ತೆಯಾಗಿದ್ದು ಇನ್ನಷ್ಟು ಆತಂಕಕ್ಕೆ ಕಾರಣವಾಗಿತ್ತು.
ಈ ಭೀಕರ ಬಾಂಬ್ ಸ್ಪೋಟದಲ್ಲಿ ಎಂಟು ಭಾರತೀಯರೂ ಸೇರಿದಂತೆ 31 ವಿದೇಶಿ ನಾಗರಿಕರು ಸಾವಿಗೀಡಾಗಿದ್ದಾರೆ. ಗಾಯಗೊಂಡವರಲ್ಲಿ ಹಲವರ ಸ್ಥಿತಿ ಚಿಂತಾಜನಕವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
KTR ಫಾರ್ಮುಲಾ ರೇಸ್ ಕೇಸ್ ರದ್ದು: ತೀರ್ಪು ಕಾಯ್ದಿರಿಸಿದ ಹೈಕೋರ್ಟ್
Mysuru: ಇನ್ಫೋಸಿಸ್ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್ ಫ್ರಂ ಹೋಂ
Professional Life: ಚಿತ್ರರಂಗಕ್ಕೆ ನಟ ದರ್ಶನ್ ಮರುಪ್ರವೇಶ!
Demand: ಮನೆ ನಿರ್ಮಾಣ: ಶೇ.18 ಜಿಎಸ್‌ಟಿ ರದ್ಧತಿಗೆ ಆಗ್ರಹಿಸುವೆ: ಟಿ.ಬಿ.ಜಯಚಂದ್ರ
Haveri: ಬಾಲಕಿಗೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಯತ್ನ: ಇಬ್ಬರ ವಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.