ಮಸ್ಕ್ ಸ್ಟಾರ್‌ಶಿಪ್ ಫೇಲ್: ಉಡಾವಣೆಗೊಂಡ ಕೆಲವೇ ಕ್ಷಣದಲ್ಲಿ ವಿಫಲ
Team Udayavani, Apr 21, 2023, 6:30 AM IST
ವಾಷಿಂಗ್ಟನ್: ಚಂದ್ರ ಮತ್ತು ಮಂಗಳನ ಅಂಗಳದಲ್ಲಿ ಗಗನಯಾತ್ರಿಗಳನ್ನು ತಲುಪಿಸಲು ಉದ್ದೇಶಿಸಿ ಅಭಿವೃದ್ಧಿ ಪಡಿಸಲಾಗಿದ್ದ ಉದ್ಯಮಿ ಎಲಾನ್‌ಮಸ್ಕ್ ಒಡೆತನದ ಸ್ಪೇಸ್‌ಎಕ್ಸ್ ಸಂಸ್ಥೆಯ ಜಗತ್ತಿನ ಅತಿದೊಡ್ಡ ರಾಕೆಟ್ ಸ್ಟಾರ್‌ಶಿಪ್, ಮೊದಲ ಪರೀಕ್ಷಾರ್ಥ ಉಡಾವಣೆಯಲ್ಲೇ ಸ್ಫೋಟಗೊಂಡಿದೆ. ಈ ಯೋಜನೆಗಾಗಿ ಮಸ್ಕ್ ಅವರು 24 ಸಾವಿರ ಕೋಟಿ ರೂ. ವೆಚ್ಚ ಮಾಡಿದ್ದರು.
ಟೆಕ್ಸಾಸ್‌ನ ಬೊಕಾಚಿಕಾದಲ್ಲಿರುವ ಸ್ಪೇಸ್‌ಎಕ್ಸ್‌ನ ಬಾಹ್ಯಾಕಾಶ ನಿಲ್ದಾಣವಾದ ಸ್ಟಾರ್‌ಬೇಸ್‌ನಿಂದ ರಾಕೆಟ್ ಲಾಂಚ್ ಮಾಡಲಾಗಿತ್ತು. ಆದರೆ, ಉಡಾವಣೆಗೊಂಡ ಕೇವಲ ನಾಲ್ಕೇ ನಿಮಿಷದಲ್ಲಿ ರಾಕೆಟ್ ಸ್ಫೋಟಗೊಂಡಿದೆ. ಉಡಾವಣೆಗೊಂಡ 3 ನಿಮಿಷಗಳ ಬಳಿಕ ರಾಕೆಟ್ ಬೂಸ್ಟರ್‌ನಿಂದ ಕ್ಯಾಪ್ಸುಲ್ ಬೇರ್ಪಡುವಂತೆ ನಿಗದಿ ಪಡಿಸಲಾಗಿತ್ತು. ಆದರೆ, ಈ ಬೇರ್ಪಡುವ ಪ್ರಕ್ರಿಯೆ ಹಂತದಲ್ಲಿಯೇ ವಿಫಲವಾಗಿದ್ದರಿಂದ ರಾಕೆಟ್ ಆಕಾಶದಲ್ಲೇ ಸ್ಫೋಟಗೊಂಡಿದೆ.
ಪರೀಕಾರ್ಥ ಉಡಾವಣೆಯಾಗಿದ್ದ ಕಾರಣ ರಾಕೆಟ್‌ನಲ್ಲಿ ಯಾವುದೇ ಉಪಗ್ರಹ ಅಥವಾ ಯಾತ್ರಿಗಳು ಇರಲಿಲ್ಲ.394 ಅಡಿ ಎತ್ತರ ಹಾಗೂ 90 ಅಡಿ ಅಗಲಿವಿದ್ದ ಸ್ಟಾರ್‌ಶಿಪ್ ರಾಕೇಟ್, ನಾಸಾ ಚಂದ್ರನ ಕಕ್ಷೆಗೆ ತಲುಪಲು ಇತ್ತೀಚೆಗೆ ಉಡಾವಣೆಗೊಳಿಸಿದ್ದ ಸ್ಪೇಸ್ ಲಾಂಚ್ ಸಿಸ್ಟಮ್(ಎಸ್‌ಎಲ್‌ಎಸ್)ಗಿಂತ ಎರಡು ಪಟ್ಟು ಶಕ್ತಿಶಾಲಿಯಾಗಿತ್ತು ಎನ್ನಲಾಗಿದೆ.
ಈ ವೈಫಲ್ಯಹೊಸ ಪಾಠ ಕಲಿಸಿದೆ. ಇದು ಮುಂದಿನ ಉಡಾವಣೆಗೆ ಸಹಾಯವಾಗಲಿದೆ.
– ಎಲಾನ್ ಮಸ್ಕ್, ಉದ್ಯಮಿ
4 ನಿಮಿಷಗಳಲ್ಲೇ ಸ್ಫೋಟ
3 ನಿಮಿಷದ ಬೇರ್ಪಡಿಕೆ ವಿಫಲ
394 ಅಡಿ ಎತ್ತರದ ಬೃಹತ ರಾಕೆಟ್
24 ಸಾವಿರ ಕೋಟಿ ರೂ.- ಮಸ್ಕ್ ಮಾಡಿರುವ ವೆಚ್ಚ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
America: ಪ್ರತೀಕಾರ- ಭಾರತದ ನಟೋರಿಯಸ್ ಡ್ರ*ಗ್ಸ್ ಸ್ಮಗ್ಲರ್ ಶೂಟೌಟ್ ನಲ್ಲಿ ಹ*ತ್ಯೆ
Ex-US President: ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಆಸ್ಪತ್ರೆಗೆ ದಾಖಲು
Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!
White House; ಎಐ ಹಿರಿಯ ಸಲಹೆಗಾರರಾಗಿ ಭಾರತ ಮೂಲದ ವ್ಯಕ್ತಿ ನೇಮಕ
Syria ಮಾಜಿ ಅಧ್ಯಕ್ಷ ಅಸಾದ್‌ಗೆ ವಿಚ್ಛೇದನ ಕೊಡಲು ಪತ್ನಿ ಚಿಂತನೆ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ವಿದೇಶಿ ಹಕ್ಕಿಗಳ ಕಲರವ- ಕುಷ್ಟಗಿಯ ನಿಡಶೇಸಿ ಕೆರೆಗೆ ಬಂದ ಬಾನಾಡಿಗಳು!
Aranthodu: ಲಾರಿ-ಸ್ಕೂಟಿ ಅಪಘಾತ; ಸವಾರರ ಪೈಕಿ ಓರ್ವ ಮೃತ್ಯು, ಸಹಸವಾರೆ ಗಾಯ
ದೆಹಲಿ ಪರೇಡ್‌ಗೆ ಬ್ರಹ್ಮ ಜಿನಾಲಯ ಸ್ತಬ್ಧಚಿತ್ರ; ಗತ ವೈಭವ ಸಾರಲಿದೆ ಟ್ಯಾಬ್ಲೊ
SriLanka ನೌಕಾಪಡೆಯಿಂದ ತಮಿಳುನಾಡಿನ 17 ಮೀನುಗಾರರ ಬಂಧನ; ಬಿಡುಗಡೆಗೆ ಸ್ಟಾಲಿನ್ ಮನವಿ
Year Ender 2024: ಗೂಗಲ್ ನಲ್ಲಿ ಈ ವರ್ಷ ಅತೀ ಹೆಚ್ಚು ಹುಡುಕಲ್ಪಟ್ಟ ವಿಷಯ ಯಾವುದು ಗೊತ್ತಾ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.