ಫೈಜರ್ ನೀಡಿಕೆ ಶುರು, ಅಮೆರಿಕ ನಿಟ್ಟುಸಿರು!
Team Udayavani, Dec 15, 2020, 1:19 AM IST
ಅಮೆರಿಕದ ನ್ಯೂಯಾರ್ಕ್ ನಲ್ಲಿ ಮೊಟ್ಟ ಮೊದಲ ಲಸಿಕೆ ಹಾಕಿಸಿಕೊಂಡ ನರ್ಸ್ ಸಾಂಡ್ರಾ ಲಿಂಡ್ಸೆ
ವಾಷಿಂಗ್ಟನ್/ಹೊಸದಿಲ್ಲಿ: ಕೊರೊನಾದಿಂದ ಅತಿಹೆಚ್ಚು ಸಾವು-ನೋವು ಕಂಡ ಅಮೆರಿಕ ಕೊನೆಗೂ ನಿಟ್ಟುಸಿರು ಬಿಟ್ಟಿದ್ದು, ಯುಎಸ್‌ನಲ್ಲಿ ಸೋಮವಾರದಿಂದ ಫೈಜರ್ ಲಸಿಕೆ ನೀಡಿಕೆ ಆರಂಭಗೊಂಡಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ನಿಟ್ಟುಸಿರಿನ ಸಂಭ್ರಮವನ್ನು ಟ್ವಿಟರಿನಲ್ಲಿ ಹಂಚಿಕೊಂಡಿದ್ದಾರೆ. “ಅಮೆರಿಕ ¨ ಲ್ಲಿ ಮೊದಲ ಲಸಿಕೆ ನೀಡುವಿಕೆ ಶುರುವಾಗಿದೆ. ಅಮೆರಿ ಕನ್ನರಿಗೆ ವಂದನೆ ಗಳು, ಜಗತ್ತಿಗೂ ಶುಭಾಶಯಗಳು’ ಎಂದು ಟ್ರಂಪ್ ಟ್ವೀಟಿಸಿದ್ದಾರೆ.
ಮಿಚಿಗನ್‌ನ ಕಲಾಮಝೂ ಲಸಿಕೆ ತಯಾರಕಾ ಘಟಕ ದಿಂದ 30 ಲಕ್ಷ ಫೈಜರ್ ಡೋಸ್‌ಗಳನ್ನು ಅತಿಕಡಿಮೆ ಉಷ್ಣಾಂಶವುಳ್ಳ ಬಾಕ್ಸ್‌ಗಳಲ್ಲಿ ಸಂರಕ್ಷಿಸಿ, ವಿಮಾನ ಮತ್ತು ಟ್ರಕ್‌ಗಳ ಮೂಲಕ ದೇಶಾದ್ಯಂತದ ಆರೋಗ್ಯ ಕೇಂದ್ರ ಗಳಿಗೆ ಪೂರೈಸುವ ಕೆಲಸ ಸಾಗಿದೆ. ಆರೋಗ್ಯ ಕಾರ್ಯ ಕರ್ತರು, ನರ್ಸ್‌ಗಳು, ತೀವ್ರ ಸೋಂಕಿನಿಂದ ನಲುಗು ತ್ತಿರು ವವರಿಗೆ ಆರಂಭಿಕ ಹಂತದಲ್ಲಿ ಲಸಿಕೆ ನೀಡಲಾಗು ತ್ತಿದೆ. ಇನ್ನೊಂದೆಡೆ ಭಾರತದಲ್ಲಿ ಈ ತಿಂಗಳಿನಲ್ಲಿ ಮತ್ತೂಮ್ಮೆ 30 ಸಾವಿರಕ್ಕಿಂತ ಕಡಿಮೆ ಕೊರೊನಾ ಕೇಸ್ ದಾಖಲಾಗಿದೆ. ಸೋಮವಾರ ದೇಶದಲ್ಲಿ ಹೊಸದಾಗಿ ಕೇವಲ 27,071 ಮಂದಿಗೆ ಪಾಸಿಟಿವ್ ತಗುಲಿದೆ.
ಐಐಟಿ ಮದ್ರಾಸ್‌ನಲ್ಲಿ 104 ಕೇಸು
ಚೆನ್ನೈನಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮದ್ರಾಸ್‌ನ ಕ್ಯಾಂಪಸ್‌ನಲ್ಲಿ 104 ಸೋಂಕು ಪ್ರಕರಣಗಳು ದೃಢಪಟ್ಟಿವೆ. ಈ ಪೈಕಿ ಹೆಚ್ಚಿನವರು ವಿದ್ಯಾರ್ಥಿಗಳು. ಹೀಗಾಗಿ, ಕ್ಯಾಂಪಸ್ ಅನ್ನು ತಾತ್ಕಾಲಿಕವಾಗಿ ಮುಚ್ಚಲು ನಿರ್ಧರಿಸಲಾಗಿದೆ. ಸೋಂಕು ದೃಢಪಟ್ಟವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಐಐಟಿ ಕ್ಯಾಂಪಸ್‌ನಲ್ಲಿ ಡಿ.1 ರಿಂದ 12ರ ವರೆಗೆ 444 ಸ್ಯಾಂಪಲ್‌ಗಳನ್ನು ತೆಗೆದುಕೊಳ್ಳಲಾಗಿತ್ತು. ಈ ಪೈಕಿ 104 ಮಂದಿಗೆ ಸೋಂಕು ದೃಢಪಟ್ಟಿದೆ. ಪ್ರಾಧ್ಯಾಪಕರಿಗೆ ಮತ್ತು ಇತರ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ನಿರ್ವಹಿಸಲು ಸೂಚಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Suzuki; ಆಟೋಮೊಬೈಲ್ ಕ್ಷೇತ್ರದ ದಿಗ್ಗಜ ಒಸಾಮು ಸುಜುಕಿ ವಿಧಿವಶ
26/11 ದಾಳಿಯ ಸಂಚುಕೋರ ಅಬ್ದುಲ್ ರೆಹಮಾನ್ ಮಕ್ಕಿ ಪಾಕಿಸ್ತಾನದಲ್ಲಿ ಹೃದಯಾಘಾತದಿಂದ ಸಾ*ವು
ಟಿಪ್ಸ್ ಕೊಡದಿದ್ದಕ್ಕೆ ಗರ್ಭಿಣಿ ಮಹಿಳೆಯನ್ನೇ 14 ಬಾರಿ ಇರಿದ ಪಿಜ್ಜಾ ಡೆಲಿವರಿ ಮಹಿಳೆ
New York:ಆಸ್ತಿ ಹಂಚಿದ ಶ್ರೀಮಂತ ಹೂಡಿಕೆದಾರ ಬಫೆಟ್; ಕುಟುಂಬದ 4 ಫೌಂಡೇಶನ್ ಆಸ್ತಿ ಹಂಚಿಕೆ
Syria ಸರ್ವಾಧಿಕಾರಿ ಬಶರ್ ಅಸಾದ್ ಪತ್ನಿಗೆ ಲ್ಯುಕೇಮಿಯಾ: ವರದಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.