2 ವಾರ ಕಳೆದ್ರೂ ನಾಪತ್ತೆ ಆದ ಬಾಲಕಿಯ ಸುಳಿವಿಲ್ಲ
Team Udayavani, Oct 21, 2017, 7:20 AM IST
ಹೂಸ್ಟನ್: ಅಮೆರಿಕದ ರಿಚರ್ಡ್ಸನ್ ನಗರದಲ್ಲಿ ಭಾರತೀಯ ಮೂಲದ 3 ವರ್ಷದ ಬಾಲಕಿ ನಾಪತ್ತೆಯಾಗಿ ಎರಡು ವಾರಗಳೇ ಕಳೆದರೂ ಆಕೆಯ ಸುಳಿವೇ ದೊರೆತಿಲ್ಲ. ಇದೀಗ ಪ್ರಕರಣದ ಬಗ್ಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಕಳವಳ ವ್ಯಕ್ತಪಡಿಸಿದ್ದು, ಅಮೆರಿಕದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯು ಸಕ್ರಿಯವಾಗಿ ಬಾಲಕಿಯ ಪತ್ತೆ ಕಾರ್ಯದಲ್ಲಿ ಮುಳುಗಿದ್ದು, ನನಗೆ ನಿರಂತರವಾಗಿ ಮಾಹಿತಿ ನೀಡುತ್ತಿದೆ ಎಂದಿದ್ದಾರೆ.
ಅ.7ರಂದು ಹಾಲು ಕುಡಿಯದ್ದಕ್ಕೆ ಶಿಕ್ಷೆಯಾಗಿ 3ರ ಬಾಲಕಿ ಶೆರಿನ್ ಮ್ಯಾಥ್ಯೂಸ್ಳನ್ನು ಅಪ್ಪ ವೆಸ್ಲೆ ಮ್ಯಾಥ್ಯೂಸ್ ಅವರು ಮನೆಯ ಹೊರಗಡೆ ನಿಲ್ಲಿಸಿದ್ದರು. ನಂತರ ಬಂದು ನೋಡುವಾಗ ಬಾಲಕಿ ಕಾಣೆಯಾಗಿದ್ದಳು. 2 ವಾರಗಳೇ ಕಳೆದರೂ ಇನ್ನೂ ಬಾಲಕಿ ಸಿಕ್ಕಿಲ್ಲ. ಪೊಲೀಸರು ಮ್ಯಾಥ್ಯೂಸ್ ಅವರ ಮೂರು ಕಾರಿನಿಂದ ಡಿಎನ್ಎ ಅಂಶ, ರಸೀದಿಗಳು, ಸೀಟ್ ಬೆಲ್ಟ್, ರೇಡಿಯೋ ಸಾಧನಗಳು, ಮನೆಯಿಂದ ಕಸ ತುಂಬುವ ಚೀಲ, ಕೂದಲು, ಹೊದಿಕೆಗಳನ್ನು ವಶಕ್ಕೆ ಪಡೆದು ಸುಳಿವು ಸಿಗಬಹುದೇ ಎಂದು ಪರಿಶೀಲಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Social Media: ಈ ದೇಶದಲ್ಲಿ 16 ವರ್ಷದೊಳಗಿನವರು ಇನ್ಸ್ಟಾಗ್ರಾಮ್, ಫೇಸ್ಬುಕ್ ಬಳಸುವಂತಿಲ್ಲ!
Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್ ಸೃಷ್ಟಿ!
Canada-India: ಕಾನ್ಸುಲರ್ ಕ್ಯಾಂಪ್ ರದ್ದು; ಕೆನಡಾಗೆ ಭಾರತ ತಿರುಗೇಟು
Australia: ಜಾಲತಾಣ ಬಳಕೆಗೆ ಕನಿಷ್ಠ 16 ವರ್ಷ ಮಿತಿ ನಿಗದಿ?
US: ಮೊದಲ ದಿನವೇ ಜಗತ್ತಿಗೆ ಟ್ರಂಪ್ “ಎನರ್ಜಿ’ ಶಾಕ್!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.