ಬೆರಳೆಣಿಕೆ ಪ್ರದೇಶಗಳಲ್ಲಿ ಅಫ್ಘಾನ್ ಸೇನೆ ಮೇಲುಗೈ; ಸ್ನೇಹ ಅಣೆಕಟ್ಟು ಧ್ವಂಸಕ್ಕೆ ಯತ್ನ
ಉಗ್ರರು ಮತ್ತು ಯೋಧರ ನಡುವಿನ ಕಾಳಗದ ಸಂದರ್ಭದಲ್ಲಿ ಸಿಡಿದ ಗುಂಡಿನಿಂದ ಅಸುನೀಗಿದ್ದರು
Team Udayavani, Jul 31, 2021, 11:23 AM IST
ವಾಷಿಂಗ್ಟನ್/ಕಾಬೂಲ್: ಅಫ್ಘಾನಿಸ್ತಾನದ ಕೆಲವು ಪ್ರದೇಶಗಳಿಂದ ತಾಲಿಬಾನ್ ಉಗ್ರರನ್ನು ಹೊರ ಹಾಕುವ ಪ್ರಯತ್ನದಲ್ಲಿ ಅಲ್ಲಿನ ಸೇನೆ ಕೊಂಚ ಯಶ ಕಂಡಿದೆ. ಅದಕ್ಕೆ ನೆರವಾದದ್ದು ಅಮೆರಿಕದ ಸೇನಾಪಡೆ ಉಗ್ರರತ್ತ ಅಲ್ಲಲ್ಲಿ ವೈಮಾನಿಕ ದಾಳಿ ನಡೆಸಿದ್ದು. ಫಝ್ನಿ, ತಖರ್, ಕಂದಹಾರ್, ಹೆಲ್ಮಂಡ್, ಬಘ್ಲಾನ್ ಸೇರಿದಂತೆ 20 ಪ್ರಾಂತ್ಯಗಳಲ್ಲಿ ಉಗ್ರರರನ್ನು ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ. ಪಾಕಿಸ್ತಾನ ಮೂಲದವರೇ ಆಗಿ ರುವ, ಸದ್ಯ ತಾಲಿಬಾನ್ ಗಳಾಗಿ ಪರಿವರ್ತನೆ ಗೊಂಡಿರುವವರೂ ಅನೇಕ ಮಂದಿ ಗಾಯಗೊಂಡಿರಬಹುದು ಅಥವಾ ಸತ್ತು ಹೋಗಿರಬಹುದು ಎಂದು ಹೇಳಲಾಗುತ್ತಿದೆ.
ಮಯ್ಮನಾ-ಅಖೀನಾ, ಹೈರತಾನ್ -ಕಾಬೂಲ್-ತೋಖಾಂ ಸೇರಿದಂತೆ ಹಲವು ಹೆದ್ದಾರಿಗಳ ಮೇಲೆ ಅಫ್ಘಾನಿಸ್ತಾನ ಸೇನೆ ಬಿಗಿ ಕಾವಲು ನೀಡುತ್ತಿದೆ. ಇದರ ಜತೆಗೆ ಹಲವು ಗ್ರಾಮಗಳಿಂದಲೂ ಕೂಡ ಉಗ್ರರನ್ನು ಹೊಡೆದಟ್ಟಲಾಗಿದೆ. ಜತೆಗೆ ಹಲವು ಸುಧಾರಿತ ಸ್ಫೋಟಕಗಳನ್ನು ನಿಷ್ಕ್ರಿಯಗೊಳಿಸಲಾಗಿದೆ.
ಸ್ನೇಹ ಅಣೆಕಟ್ಟು ಧ್ವಂಸಕ್ಕೆ ಯತ್ನ: ಹೆರಾತ್
ಪ್ರಾಂತ್ಯದಲ್ಲಿ ಭಾರತ ಸರ್ಕಾರದ ನೆರವಿನಿಂದ ನಿರ್ಮಿಸಲಾಗಿರುವ ಸಲ್ಮಾ ಡ್ಯಾಮ್ ಅನ್ನು ಸ್ಫೋಟಿಸಲು ತಾಲಿಬಾನ್ ಉಗ್ರರು ಯತ್ನಿಸಿದ್ದಾರೆ. ಆದರೆ, ಆ ಪ್ರಯತ್ನಕ್ಕೆ ಸೋಲಾಗಿದೆ. ಈ ಸಂದರ್ಭದಲ್ಲಿ ನಡೆದ ಕಾಳಗದಲ್ಲಿ ಐವರು ತಾಲಿಬಾನಿಗಳು ಕೊಲ್ಲಲ್ಪಟ್ಟಿದ್ದಾರೆ. ಮಜಾರ್- ಇ-ಷರೀಫ್, ಜಲಾಲಾಬಾದ್, ಕಂದಹಾರ್ ನಗರ, ಹೆರಾತ್‌ಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ.
200 ಮಂದಿ ಆಗಮನ: ಅಫ್ಘಾನಿಸ್ತಾನದಲ್ಲಿ ಅಮೆರಿಕದದ ಪರವಾಗಿ ಕೆಲಸ ಮಾಡುತ್ತಿದ್ದವರ ಪೈಕಿ 221 ಮಂದಿಯನ್ನು ವಾಷಿಂಗ್ಟನ್‌ಗೆ ಮೊದಲ ಹಂತದಲ್ಲಿ ಕರೆತರಲಾಗಿದೆ. ಈ ಪೈಕಿ 57 ಮಂದಿ ಮಕ್ಕಳು ಮತ್ತು15 ಮಂದಿ ಶಿಶುಗಳು ಸೇರಿವೆ.
ಇದೇ ವೇಳೆ, ಪುಲಿಟ್ಜರ್ ಪ್ರಶಸ್ತಿ ಪುರಸ್ಕೃತ ಛಾಯಾಚಿತ್ರ ಪತ್ರಕರ್ತ ಡ್ಯಾನಿಷ್ ಸಿದ್ಧಿಕಿ ಅವರನ್ನು ತಾಲಿಬಾನ್ ಉಗ್ರರೇ ಹತ್ಯೆ ಮಾಡಿರುವುದು ದೃಢಪಟ್ಟಿದ್ದಾರೆ. ಅವರು ಭಾರತೀಯ ಪ್ರಜೆ ಎಂದು ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಹತ್ಯೆ ಮಾಡಿದ್ದಾರೆ. ಅವರು ಉಗ್ರರು ಮತ್ತು ಯೋಧರ ನಡುವಿನ ಕಾಳಗದ ಸಂದರ್ಭದಲ್ಲಿ ಸಿಡಿದ ಗುಂಡಿನಿಂದ ಅಸುನೀಗಿದ್ದರು ಎಂದು ಇದುವರೆಗೆ ನಂಬಲಾಗಿತ್ತು.
ಟ್ರಂಪ್ ಮಾದರಿ ಗೋಡೆ
ಅಮೆರಿಕದ ಅಧ್ಯಕ್ಷರಾಗಿದ್ದ ಡೊನಾಲ್ಡ್ ಟ್ರಂಪ್ ಮೆಕ್ಸಿಕೋ ನಿರಾಶ್ರಿತರು ದೇಶ ಪ್ರವೇಶಿಸದಂತೆ ಗಡಿಯಲ್ಲಿ ಗೋಡೆ ನಿರ್ಮಿಸಲು ಯೋಜಿಸಿದ್ದರು. ಅದೇ ಮಾದರಿಯನ್ನು ಟರ್ಕಿ ಅಧ್ಯಕ್ಷ ರೀಪ್ ತಯ್ಯಪ್ ಎರ್ಡೊಗನ್ ಅನುಸರಿಸಲು ತೀರ್ಮಾನಿಸಿದ್ದಾರೆ. ಇರಾನ್ ಮತ್ತು ಅಫ್ಘಾನಿಸ್ತಾನ ನಡುವೆ 300ಕಿಮೀ ದೂರ ಗಡಿ ಪ್ರದೇಶವನ್ನು ಟರ್ಕಿ ಹೊಂದಿದೆ. 2017 ರಿಂದಲೇ ನಡೆಯುತ್ತಿರುವ ಕಾಮಗಾರಿಯನ್ನು ಪರಿಸ್ಥಿತಿ ಹಿನ್ನೆಲೆಯಲ್ಲಿ ಚುರುಕುಗೊಳಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಅಘ್ಘಾನ್ ನಿರಾಶ್ರಿತರು ಟರ್ಕಿಗೆ ಪ್ರವೇಶಿಸದಂತೆ ಈ ಗೋಡೆ ನೆರವಾಗಲಿದೆ ಎನ್ನುವುದು ಅಲ್ಲಿನ ಸರ್ಕಾರದ ಅಂಬೋಣ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.