ಸಿರಿಯದ ಹೋಮ್ಸ್ ನಗರದಲ್ಲಿ ಆತ್ಮಾಹತಿ ಬಾಂಬ್ ದಾಳಿ: 42 ಬಲಿ
Team Udayavani, Feb 25, 2017, 3:28 PM IST
ಬೇರೂತ್ : ಸಿರಿಯಾ ಸರಕಾರದ ವಶದಲ್ಲಿರುವ ಮೂರನೇ ನಗರವಾಗಿರುವ ಹೋಮ್ಸ್‌ನಲ್ಲಿನ ಎರಡು ಭದ್ರತಾ ಸೇವಾ ನೆಲೆಗಳ ಮೇಲೆ ಇಂದು ಶನಿವಾರ ನಡೆದಿರುವ ಭೀಕರ ಆತ್ಮಾಹುತಿ ಬಾಂಬ್ ದಾಳಿಗೆ 42 ಜನರು ಬಲಿಯಾಗಿದ್ದಾರೆ.
ಈ ಹೊಸ ಬಾಂಬ್ ದಾಳಿಯು ಇದೀಗ ಜಿನೇವಾದಲ್ಲಿ ನಡೆಯಲಿರುವ ಶಾಂತಿ ಮಾತುಕತೆಯ ಕರಿನೆರಳನ್ನು ಚೆಲ್ಲಿದೆ ಎಂದು ಸರಕಾರಿ ಒಡೆತನದ ಟಿವಿ ವಿಶ್ಲೇಷಕರು ಮತ್ತು ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ.
ಸರಕಾರಿ ಭದ್ರತಾ ಮತ್ತು ಮಿಲಿಟರಿ ಗುಪ್ತಚರ ದಳದ ಪ್ರಧಾನ ಕಾರ್ಯಾಲಯಕ್ಕೆ ಸಮೀಪ ಕನಿಷ್ಠ ಆರು ಬಾಂಬ್ ದಾಳಿಗಳು ನಡೆದಿವೆ. ಇವುಗಳಲ್ಲಿ ಆನೇಕ ಆತ್ಮಾಹುತಿ ಬಾಂಬರ್‌ಗಳು ತಮ್ಮನ್ನು ತಾವೇ ಸ್ಫೋಟಿಸಿಕೊಂಡು ಅಮಾಯಕರನ್ನು ಬಲಿಪಡೆದಿದ್ದಾರೆ ಎಂದು ಸಿರಿಯದ ಮಾನವ ಹಕ್ಕುಗಳ ವಿಚಕ್ಷಣ ಕೇಂದ್ರ ನಿರ್ದೇಶಕ ರಮೀ ಅಬ್ಧೆಲ್ ರೆಹಮಾನ್ ಹೇಳಿದ್ದಾರೆ.
ಈ ದಾಳಿಗಳನ್ನು ಅನುಸರಿಸಿ ಭದ್ರತಾ ಪಡೆಗಳು ನಗರ ಕೇಂದ್ರವನ್ನು ಮುಚ್ಚಿದ್ದಾರೆ. 2014ರ ಮೇ ತಿಂಗಳಲ್ಲಿ ಬಂಡುಕೋರರು ತಾವೇ ಕದನ ವಿರಾಮ ಘೋಷಿಸಿ ನಿರ್ಗಮಿಸಿದ ಬಳಿಕ ಹೋಮ್ಸ್ ಪಟ್ಟಣವು ಸಂಪೂರ್ಣವಾಗಿ ಸಿರಿಯ ಸರಕಾರದ ವಶದಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Kambala ಋತುವಿನ ಪ್ರಥಮ ಕಂಬಳ; ಕೊಡಂಗೆ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಚಾಲನೆ
Wayanad Results 2024:ವಯನಾಡ್ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!
Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.