ಸಿರಿಯದ ಅಲ್ ಬಾಬ್ ಪಟ್ಟಣದಲ್ಲಿ ಆತ್ಮಾಹುತಿ ಬಾಂಬ್ ದಾಳಿ: 42 ಬಲಿ
Team Udayavani, Feb 24, 2017, 4:13 PM IST
ಬೇರೂತ್: ಸಿರಿಯದ ಅಲ್ ಬಾಬ್ ಪಟ್ಟಣದ ಹೊರ ಭಾಗದಲ್ಲಿ ಟರ್ಕಿ ಬೆಂಬಲಿತ ಬಂಡುಕೋರರ ಮೇಲೆ ಆತ್ಮಾಹುತಿ ಬಾಂಬರ್ ಓರ್ವ ನಡೆಸಿದ ಬಾಂಬ್ ದಾಳಿಗೆ 42 ಮಂದಿ ಬಲಿಯಾದರು. ಇದಕ್ಕೆ ಕೆಲವೇ ತಾಸು ಮುನ್ನ ಬಂಡುಕೋರರು ತಾವು ಅಲ್ ಬಾಬ್ ಪಟ್ಟಣವನ್ನು ಇಸ್ಲಾಮಿಕ್ ಉಗ್ರರಿಂದ ವಶಪಡಿಸಿಕೊಂಡಿರುವುದಾಗಿ ಹೇಳಿಕೊಂಡಿದ್ದರು.
ಅಲ್ ಬಾಬ್ ಪಟ್ಟಣದಿಂದ ಕೇವಲ ಎಂಟು ಕಿ.ಮೀ. ಈಶಾನ್ಯದಲ್ಲಿರುವ ಸೂಸಿಯಾನ್ ಗ್ರಾಮದಲ್ಲಿನ ಬಂಡುಕೋರರ ಕಮಾಂಡ್ ಸೆಂಟರ್ ಹೊರಭಾಗದಲ್ಲಿ ಆತ್ಮಾಹುತಿ ಬಾಂಬರ್, ಸ್ಫೋಟಕಗಳಿಂದ ತುಂಬಿದ್ದ ವಾಹನವನ್ನು ಸ್ಫೋಟಿಸಿ 42 ಮಂದಿಯನ್ನು ಬಲಿಪಡೆದ ಎಂದು ಸಿರಿಯದ ಮಾನವ ಹಕ್ಕುಗಳ ವಿಚಕ್ಷಣ ಕೇಂದ್ರ ಹೇಳಿದೆ.
ಆತ್ಮಾಹುತಿ ಬಾಂಬರ್‌ನ ಈ ದಾಳಿಯಲ್ಲಿ ಎರಡು ಕಮಾಂಡ್ ಪೋಸ್ಟ್‌ಗಳು ನಾಶವಾಗಿವೆ ಮತ್ತು ಭಾರೀ ಸಂಖ್ಯೆಯ ಹೋರಾಟಗಾರರನ್ನು ಗಂಭೀರವಾಗಿ ಗಾಯಗೊಳಿಸಿದೆ. ಮೃತರಲ್ಲಿ ಹೆಚ್ಚಿನವರು ಹೋರಾಟಗಾರರಾಗಿದ್ದಾರೆ.
ತತ್‌ಕ್ಷಣಕ್ಕೆ ಈ ದಾಳಿಯ ಹೊಣೆಯನ್ನು ಯಾರೂ ಹೊತ್ತಿಲ್ಲ; ಆದರೆ ದಾಳಿಯ ವೈಖರಿಯನ್ನು ನೋಡಿದಾಗ ಇದು ಐಸಿಸ್ ಉಗ್ರ ಸಂಘಟನೆಯದ್ದೇ ಕೃತ್ಯವೆನ್ನುವುದು ಸ್ಪಷ್ಟವಿದೆ ಎಂದು ಬ್ರಿಟನ್ ಮೂಲದ ವಿಚಕ್ಷಣ ಸಮೂಹ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Elon Musk: ಭಾರತದಲ್ಲಿ 1 ದಿನದಲ್ಲಿ 6.4 ಕೋಟಿ ಮತ ಎಣಿಕೆ: ಉದ್ಯಮಿ ಮಸ್ಕ್ ಮೆಚ್ಚುಗೆ!
Sheikh Hasina, ಅದಾನಿ ನಡುವಿನ ಒಪ್ಪಂದದ ಪರಿಶೀಲನೆಗೆ ಸಮಿತಿ ರಚಿಸಿದ ಬಾಂಗ್ಲಾದೇಶ!
Nijjar ಹ*ತ್ಯೆಗೆ ಮೋದಿ ನಂಟು ವರದಿ: “ಗುಪ್ತಚರರ’ ವಿರುದ್ಧ ಟ್ರಾಡೊ ಗರಂ
Pakistan: ಪಾಕ್‌ನಲ್ಲಿ ಹಿಂಸಾಚಾರ; ಒಟ್ಟು 37 ಮಂದಿ ಸಾವು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Isro: ಡಿ.20ಕ್ಕೆ ಸ್ಪೇಡೆಕ್ಸ್ ಲಾಂಚ್‌ಗೆ ಸಿದ್ಧತೆ: ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್
Congress: ಹಣ, ಮದ್ಯ ಹಂಚಿಕೆಯಲ್ಲಿ ಬಿಜೆಪಿ ಜತೆ ಪೈಪೋಟಿ: ಬಿ.ಕೆ.ಹರಿಪ್ರಸಾದ್
Elon Musk: ಭಾರತದಲ್ಲಿ 1 ದಿನದಲ್ಲಿ 6.4 ಕೋಟಿ ಮತ ಎಣಿಕೆ: ಉದ್ಯಮಿ ಮಸ್ಕ್ ಮೆಚ್ಚುಗೆ!
Horoscope: ಈ ರಾಶಿಯವರು ಜಾಗರೂಕತೆಯಿಂದ ಹೆಜ್ಜೆಯಿಡಿರಿ
Kambala Time Table: ಡಿ.13ರ ವರೆಗೆ ಸಾಂಪ್ರದಾಯಿಕ ಕಂಬಳ ಹಬ್ಬ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.