ಜೆದ್ದಾ ಬಾಂಬ್ ದಾಳಿಕೋರ ಪಾಕಿ ಅಲ್ಲ; ಭಾರತೀಯ: DNA ಪರೀಕ್ಷೆ
Team Udayavani, May 1, 2018, 3:49 PM IST
ಅಬುಧಾಬಿ : 2016ರಲ್ಲಿ ಸೌದಿ ಅರೇಬಿಯದ ಜೆದ್ದಾದಲ್ಲಿನ ಅಮೆರಿಕ ಕಾನ್ಸುಲೇಟ್ ಸಮೀಪ ತನ್ನನ್ನು ತಾನು ಸ್ಫೋಟಿಸಿಕೊಂಡು ಮೃತಪಟ್ಟಿದ್ದ ಆತ್ಮಾಹುತಿ ದಾಳಿಕೋರನು ಈ ವರೆಗೆ ತಿಳಿದಿರುವಂತೆ ಪಾಕಿಸ್ಥಾನದವನಾಗಿರದೆ ಭಾರತೀಯನಾಗಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಡಿಎನ್‌ಎ ಪರೀಕ್ಷೆ ಮೂಲಕ ಆತ್ಮಾಹುತಿ ದಾಳಿಕೋರನ ಗುರುತು ದೃಢಪಟ್ಟಿರುವುದಾಗಿ ಸೌದಿ ಅಧಿಕಾರಿಗಳು ಹೇಳಿದ್ದಾರೆ.
ಸೌದಿ ಅರೇಬಿಯದ ಅಧಿಕಾರಿಗಳು ಆರಂಭದಲ್ಲಿ ಆತ್ಮಾಹುತಿ ಬಾಂಬ್ ದಾಳಿಕೋರನನ್ನು ಪಾಕ್ ಪ್ರಜೆ, ಅಬ್ದುಲ್ಲ ಕಲ್‌ಜಾರ್ ಖಾನ್ ಎಂದು ಗುರುತಿಸಿದ್ದರು. ಆದರೆ ಸೌದಿ ಅಧಿಕಾರಿಗಳು ಬಿಡುಗಡೆ ಮಾಡಿದ್ದ ಆತ್ಮಾಹುತಿ ದಾಳಿಕೋರನ ಚಿತ್ರವನ್ನು ಮಹಾರಾಷ್ಟ್ರದ ಉಗ್ರ ನಿಗ್ರಹ ದಳದ ಅಧಿಕಾರಿಗಳು ಗುರುತಿಸಿದರು.
ದಾಳಿಕೋರನ ಚಿತ್ರವು ಭಾರತದಲ್ಲಿ ಹಲವು ಉಗ್ರ ದಾಳಿಗಳಲ್ಲಿ ಭಾಗಿಯಾಗಿದ್ದ ಫಯಾಜ್ ಕಾಗ್‌ಜಿ ಎಂಬ ಉಗ್ರನನ್ನು ಹೋಲುತ್ತಿರುವುದನ್ನು ಗಮನಿಸಿದರು. ಅಂತೆಯೇ ಅವರು ಸೌದಿ ಅರೇಬಿಯ ಅಧಿಕಾರಿಗಳನ್ನು ಸಂಪರ್ಕಿಸಿದರು. ಉಗ್ರ ನಿಗ್ರಹ ವಿಚಾರದಲ್ಲಿ ಭಾರತ ಮತ್ತು ಸೌದಿ ಅರೇಬಿಯ ನಡುವಿನ ಸಹಕಾರ ಹೆಚ್ಚುತ್ತಿರುವುದರ ಭಾಗವಾಗಿ ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್‌ಐಎ) ಡಿಎನ್‌ಎ ಮಾದರಿಯನ್ನು ಕಳುಹಿಸಿತು.
ಅಂತೆಯೇ 2016ರ ಡಿಸೆಂಬರ್‌ನಲ್ಲಿ ಸೌದಿ ಅಧಿಕಾರಿಗಳು, “ದಾಳಿಕೋರನು ಕಾಗ್‌ಜಿ ಇದ್ದಿರಬಹುದು’ ಎಂದು ಹೇಳಿದರು. ಕಾಗ್‌ಜಿ ಮೂಲತಃ ಮಹಾರಾಷ್ಟ್ರದ ಬೀಡ್ ನವನಾಗಿದ್ದು 2010 ಮತ್ತು 2012ರ ನಡುವೆ ನಡೆದಿದ್ದ, ಪೂನಾ ಬ್ಲಾಸ್ಟ್ ಸಹಿತವಾಗಿ ಹಲವಾರು ಬಾಂಬ್ ದಾಳಿಗಳಲ್ಲಿ ಶಾಮೀಲಾಗಿದ್ದ.
ಈತ 2006ರಲ್ಲಿ ಭಾರತದಿಂದ ಪಲಾಯನಗೈದು ಬಾಂಗ್ಲಾದೇಶದ ಮೂಲಕ ಪಾಕಿಸ್ಥಾನಕ್ಕೆ ಹೋಗಿದ್ದ. ಕರಾಚಿಯಲ್ಲಿ ನೆಲೆ ಸ್ಥಾಪಿಸಿಕೊಂಡಿದ್ದ. ಉಗ್ರ ಅಬು ಜಿಂದಾಲ್ ಹ್ಯಾಂಡ್ಲರ್ ಆಗಿದ್ದ 26/11ರ ಮುಂಬಯಿ ದಾಳಿಯಲ್ಲೂ ಈತ ಶಾಮೀಲಾಗಿದ್ದ. ಅನಂತರದಲ್ಲಿ ಆತ ಸೌದಿ ಅರೇಬಿಯಕ್ಕೆ ಹೋದ; ಅಲ್ಲಿ ಲಷ್ಕರ್ ಉಗ್ರಸಂಘಟನೆಗೆ ಭಾರತೀಯರನ್ನು ನೇಮಿಸಿಕೊಳ್ಳುವ ಕೆಲಸದಲ್ಲಿ ತೊಡಗಿಕೊಂಡ.
ಎನ್‌ಐಎ ಕಳುಹಿಸಿಕೊಟ್ಟಿದ್ದ ಡಿಎನ್‌ಎ ಮಾದರಿ ಜೆದ್ದಾ ದಾಳಿಕೋರನ ಡಿಎನ್‌ಎ ಪ್ರೊಫೈಲ್ ನೊಂದಿಗೆ ಹೋಲುತ್ತದೆ ಎಂದು ಸೌದಿ ಅರೇಬಿಯ ಅಧಿಕಾರಿಗಳು ಭಾರತೀಯ ಅಧಿಕಾರಿಗಳಿಗೆ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sheikh ಹಸೀನಾರನ್ನು ಬಾಂಗ್ಲಾದೇಶಕ್ಕೆ ವಾಪಸ್ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ
You Tuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
Pope Francis; ಗಾಜಾಪಟ್ಟಿ ಮೇಲೆ ನಡೆದದ್ದು ಯುದ್ಧವಲ್ಲ, ಕ್ರೌರ್ಯ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.