ಸಾರ್ಕ್ ಸಭೆ ಮಧ್ಯೆ ಎದ್ದು ಬಂದ ಸುಷ್ಮಾ
Team Udayavani, Sep 29, 2018, 6:00 AM IST
ನ್ಯೂಯಾರ್ಕ್: ಸಾರ್ಕ್ ದೇಶಗಳ ವಿದೇಶಾಂಗ ಸಚಿವರ ಅನೌಪಚಾರಿಕ ಸಭೆಯ ಮಧ್ಯೆಯೇ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಎದ್ದು ಬರುವ ಮೂಲಕ ಪಾಕಿಸ್ತಾನಕ್ಕೆ ತಿರುಗೇಟು ನೀಡಿದ್ದಾರೆ. ಈ ಸಭೆಯಲ್ಲಿ ಪಾಕ್ ವಿದೇಶಾಂಗ ಸಚಿವ ಷಾ ಮೆಹಮೂದ್ ಖುರೇಶಿ ಕೂಡ ಭಾಗವಹಿಸಿದ್ದರು.
ವಿಶ್ವಸಂಸ್ಥೆ ಮಹಾಅಧಿವೇಶನದ ವೇಳೆ ನಡೆದ ಈ ಸಭೆಯಲ್ಲಿ ಸುಷ್ಮಾ, ತಮ್ಮ ಭಾಷಣ ಮುಗಿದ ನಂತರ ಇತರ ಕಾರ್ಯಕ್ರಮಗಳಿಗಾಗಿ ತೆರಳಿದ್ದಾರೆ. ಆದರೆ ಭಾರತದ ರಾಜತಾಂತ್ರಿಕ ಮೂಲಗಳ ಪ್ರಕಾರ ಇಂತಹ ಸಭೆಯಲ್ಲಿ ತಮ್ಮ ಭಾಷಣವನ್ನು ಮುಗಿಸಿದ ಬಳಿಕ ಹೊರನಡೆಯುವುದು ಸಹಜವಾಗಿದೆ. ಅಲ್ಲದೆ, ಸುಷ್ಮಾರಿಗಿಂತ ಮೊದಲು ಅಫ್ಘಾನಿ ಸ್ತಾನ ಮತ್ತು ಬಾಂಗ್ಲಾದೇಶದ ಪ್ರತಿನಿಧಿಗಳು ಹೊರನಡೆದಿದ್ದರು. ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಸಭೆ ಮುಗಿಯುವ ತನಕವೂ ಹಾಜರಿದ್ದರು. ಇನ್ನೊಂದೆಡೆ ಭಾರತದ ಈ ವರ್ತನೆಯೇ ಸಂಬಂಧ ಸುಧಾರಣೆಗೆ ಅಡ್ಡಿಯಾಗಿದೆ ಎಂದು ಖುರೇಶಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಲೈಂಗಿಕ ದೌರ್ಜನ್ಯದ ವಿರುದ್ಧ ಒಗ್ಗಟ್ಟು: ವಿಶ್ವಸಂಸ್ಥೆಯಲ್ಲಿ ಲೈಂಗಿಕ ದೌರ್ಜನ್ಯದ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ಸಂಬಂಧಿಸಿ ದಂತೆ ಬದ್ಧತೆ ವ್ಯಕ್ತಪಡಿಸಿ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರಸ್ ಹೇಳಿಕೆಯನ್ನು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ 48 ವಿಶ್ವ ನಾಯಕರು ಬೆಂಬಲಿಸಿ ದ್ದಾರೆ. ಕಳೆದ ಕೆಲವು ವರ್ಷಗಳಿಂದ ವಿಶ್ವಸಂಸ್ಥೆಯ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪಗಳು ಕೇಳಿಬರುತ್ತಿವೆ. ಲೈಂಗಿಕ ದೌರ್ಜನ್ಯ ತಡೆಗಾಗಿ 2017ರಲ್ಲಿ ಆಂಟೋನಿಯೋ ಅಭಿಯಾನವೊಂದನ್ನು ಆರಂಭಿಸಿದ್ದರು.
ಕೊರಿಯಾ ನಿರ್ಣಯ ಪಾಕ್‌ಗೂ ಅನ್ವಯಿಸಲಿ!
ಕೊರಿಯಾ ದೇಶಗಳ ಅಣ್ವಸ್ತ್ರ ನಿಶ್ಶಸ್ತ್ರೀಕರಣ ಪ್ರಕ್ರಿಯೆಯಲ್ಲಿ ಕೈಗೊಳ್ಳುವ ನಿರ್ಧಾರಗಳು ಭಾರತದ ನೆರೆ ದೇಶಗಳಿಗೂ ಅನ್ವಯಿಸಬೇಕಿದೆ ಮತ್ತು ಇದು ಭಾರತ ತನ್ನ ನೆರೆಯ ಬಗ್ಗೆ ಹೊಂದಿರುವ ಆಕ್ಷೇಪಗಳನ್ನೂ ಪರಿಹರಿಸಬೇಕಿದೆ ಎಂದು ನ್ಯೂಯಾರ್ಕ್‌ನಲ್ಲಿ ನಡೆದ ಬ್ರಿಕ್ಸ್ ರಾಷ್ಟ್ರಗಳ ಸಭೆಯಲ್ಲಿ ಸಚಿವೆ ಸುಷ್ಮಾ ಹೇಳಿದ್ದಾರೆ. ಹಿಂದಿನಿಂದಲೂ ಉತ್ತರ ಕೊರಿಯಾ ಮತ್ತು ಪಾಕಿಸ್ತಾನ ಅಣ್ವಸ್ತ್ರ ವಿಷಯದಲ್ಲಿ ಸಹಭಾಗಿತ್ವ ಸಾಧಿಸಿರುವುದರಿಂದಾಗಿ, ಪಾಕಿಸ್ತಾನದ ವಿಷಯವನ್ನು ಪರೋಕ್ಷವಾಗಿ ಸುಷ್ಮಾ ಪ್ರಸ್ತಾಪಿಸಿದ್ದಾರೆ. ಅಲ್ಲದೆ ವಿಶ್ವಸಂಸ್ಥೆಯಲ್ಲಿ ಕೈಗೊಂಡ ನಿರ್ಣಯಗಳು ಬ್ರಿಕ್ಸ್ ದೇಶಗಳನ್ನು ವಿಮುಖವಾಗಿಸಬಾರದು ಎಂದೂ ಹೇಳಿದ್ದಾರೆ. ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ಭಾರತದ ಸೇರ್ಪಡೆಗೆ ಕುರಿತ ವಿಚಾರದಲ್ಲಿ ಚೀನಾ ಅಡ್ಡಗಾಲು ಹಾಕುತ್ತಿದ್ದು, ಇದರ ವ್ಯತಿರಿಕ್ತ ಪರಿಣಾಮ ಬ್ರಿಕ್ಸ್ ಸಭೆಗೂ ವ್ಯಾಪಿಸಬಾರದು ಎಂದು ಅವರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.