Switzerland;ಆತ್ಮಹತ್ಯೆ ಪಾಡ್ ಬಳಕೆಗೆ ನಿರ್ಬಂಧ! ;ಬಳಕೆಗೆ ನಿಷೇಧ ಏಕೆ?
Team Udayavani, Jul 22, 2024, 6:49 AM IST
ಬರ್ನ್: ಒಂದು ಬಟನ್ ಕ್ಲಿಕ್ ಮಾಡುವ ಮೂಲಕ ಸಾವನ್ನು ಬರಮಾಡಿಕೊಳ್ಳಲು ಅವಕಾಶ ಕಲ್ಪಿಸುವ ದಯಾಮರಣ ಪಾಡ್ “ಸಾರ್ಕೋ’, ಮೊದಲ ವ್ಯಕ್ತಿಯನ್ನು ಬಲಿಪಡೆಯುವ ಮುನ್ನ ತಾನೇ “ಬಲಿ’ಯಾಗಿದೆ!
ಹೌದು, ಮೊದಲ ಬಳಕೆಗೆ ಕೆಲವೇ ವಾರಗಳು ಬಾಕಿಯಿರುವಂತೆಯೇ ಸ್ವಿಟ್ಸರ್ಲೆಂಡ್ ಸರಕಾರ ಈ “ಸುಸೈಡ್ ಪಾಡ್’ನ ಬಳಕೆಗೆ ನಿರ್ಬಂಧ ಹೇರಿದೆ.
ಕ್ಷಣಮಾತ್ರದಲ್ಲಿ ಸಾವು ಕಲ್ಪಿಸುವ ಈ ಪಾಡ್ ಬಗ್ಗೆ ಕಾನೂನಾತ್ಮಕ ಮತ್ತು ನೈತಿಕ ಪ್ರಶ್ನೆಗಳು ಎದ್ದು, ಜಾಗತಿಕವಾಗಿ ವಿವಾದ ಸೃಷ್ಟಿಯಾದ ಹಿನ್ನೆಲೆಯಲ್ಲಿ ಸರಕಾರ ಈ ಕ್ರಮ ಕೈಗೊಂಡಿದೆ. ದಯಾಮರಣ ಬಯಸುವ ರೋಗಿಗಳಿಗೆ ಕೆಲವೇ ಸೆಕೆಂಡುಗಳಲ್ಲಿ ಸಾಯಲು ಅವಕಾಶ ಕಲ್ಪಿಸುವ ಈ ಸಾಧನಕ್ಕೆ “ಸಾರ್ಕೋ’ ಎಂದು ಹೆಸರು. ಇದನ್ನು 2019ರ ವೆನೀಸ್ ಡಿಸೈನ್ ಫೆಸ್ಟಿವಲ್‌ನಲ್ಲಿ ಮೊದಲ ಬಾರಿಗೆ ಅನಾವರಣಗೊಳಿಸಲಾಗಿತ್ತು. ಡಾ| ಫಿಲಿಪ್ ನಿಶೆR (ಇವರನ್ನು ಡಾ| ಡೆತ್ ಎಂದೂ ಕರೆಯುತ್ತಾರೆ) ಎಂಬವರು ಇದನ್ನು ಅಭಿವೃದ್ಧಿಪಡಿಸಿದ್ದಾರೆ. ಇದರ ಬಳಕೆಗೆ 1,674 ರೂ. ಶುಲ್ಕ ವಿಧಿಸುವುದಾಗಿ ಅವರು ಹೇಳಿದ್ದರು. ಸ್ವಿಟ್ಸರ್ಲೆಂಡ್‌ನಲ್ಲಿ ಕೆಲವೇ ವಾರಗಳಲ್ಲಿ ಇದರ ಬಳಕೆ ಆರಂಭ ಆಗುವುದರಲ್ಲಿತ್ತು.
ಬಳಕೆಗೆ ನಿಷೇಧ ಏಕೆ?
ಕೆಲವೇ ಸೆಕೆಂಡುಗಳಲ್ಲಿ ದಯಾಮರಣ ಕಲ್ಪಿಸುವ ಈ ಸಾಧನ ಹೇಗೆ ಕೆಲಸ ಮಾಡುತ್ತದೆ ಎಂಬ ಬಗೆಗಿನ ಅನಿಶ್ಚಿತತೆ ಮತ್ತು ಅದರೊಳಗೆ ಆಗುವ ಸಾವುಗಳ ಹೊಣೆಯನ್ನು ಯಾರು ಹೊತ್ತುಕೊಳ್ಳುತ್ತಾರೆ ಎಂಬ ಪ್ರಶ್ನೆಗಳು ಎದ್ದಿದ್ದವು. ಅಲ್ಲದೆ ಇದರ ದುರ್ಬಳಕೆ ಆಗುವ ಸಾಧ್ಯತೆಯೂ ಇರುವುದರಿಂದ ಇಂಥದ್ದರ ಬಳಕೆ ಕಳವಳಕಾರಿ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಸರಕಾರ ಡೆತ್ ಪಾಡ್‌ಗೆ ನಿಷೇಧ ಹೇರಿದೆ.
ಏನಿದು ಡೆತ್‌ಪಾಡ್?
“ಸಾರ್ಕೋ’ ಎಂಬ ಹೆಸರಿನ ಈ ಡೆತ್ ಪಾಡ್ ಅನ್ನು ಶವಪೆಟ್ಟಿಗೆಯ ಮಾದರಿಯಲ್ಲೇ ವಿನ್ಯಾಸಗೊಳಿಸಲಾಗಿದೆ. ಕ್ಷಣಮಾತ್ರದಲ್ಲಿ ನೋವಿಲ್ಲದೇ ಸಾಯಲು ಇದು ಅವಕಾಶ ಮಾಡಿಕೊಡುತ್ತದೆ. ಮೊದಲು ದಯಾಮರಣ ಬಯಸುವ ರೋಗಿಯು ಈ ಪಾಡ್‌ನೊಳಕ್ಕೆ ಪ್ರವೇಶಿಸಬೇಕು. ಅನಂತರ ಒಳಗಿರುವ ಬಟನ್ ಒತ್ತಿದರೆ ಸಾಕು, ಕೆಲವೇ ಸೆಕೆಂಡುಗಳಲ್ಲಿ ಆತನ ಪ್ರಾಣ ಪಕ್ಷಿ ಹಾರಿಹೋಗುತ್ತದೆ. ಬಟನ್ ಒತ್ತಿದಾಗ ಇಡೀ ಪಾಡ್‌ನೊಳಗೆ ನೈಟ್ರೋಜನ್ ಗ್ಯಾಸ್ ಆವರಿಸುತ್ತದೆ. ಆಮ್ಲಜನಕವಿಲ್ಲದೇ ವ್ಯಕ್ತಿ ಕ್ಷಣಮಾತ್ರದಲ್ಲಿ ಸಾವನ್ನಪ್ಪುತ್ತಾನೆ.
ಬಳಸಿದರೆ 5 ವರ್ಷ ಜೈಲು
ಯಾರಾದರೂ ಈ ಪಾಡ್ ಬಳಸಿ ಯಾರದ್ದಾದರೂ ಸಾವಿಗೆ ಕಾರಣವಾದರೆ ಅಥವಾ ನೆರವು ನೀಡಿದರೆ ಅಂಥವರಿಗೆ 5 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುವುದು ಎಂದೂ ಸರಕಾರ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
America; ಭಾರತಕ್ಕೆ 84.40 ಕೋ.ರೂ. ಮೌಲ್ಯದ 1,400 ಕಲಾಕೃತಿ ವಾಪಸ್
Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್ ಪರೀಕ್ಷೆ
Iran: ಹಿಜಾಬ್ ನಿರಾಕರಿಸಿದರೆ ವಿಶೇಷ ಕ್ಲಿನಿಕ್: ಇರಾನ್ ತೀರ್ಮಾನಕ್ಕೆ ಆಕ್ರೋಶ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
MUST WATCH
ಹೊಸ ಸೇರ್ಪಡೆ
World Prematurity Day: ಅಂತಾರಾಷ್ಟ್ರೀಯ ಅವಧಿಪೂರ್ವ ಶಿಶು ಜನನ ದಿನ; ನವೆಂಬರ್ 17
Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್‌ಬಾಸ್ ಮನೆಗೆ
Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.