Syria ಮೇಲೆ ವೈಮಾನಿಕ ದಾಳಿ: 9 ಸಾವು; 30ಕ್ಕೂ ಅಧಿಕ ಮಂದಿಗೆ ಗಾಯ
ದಾಳಿ ಮಾಡಿದ್ದು ರಷ್ಯಾವೇ ಅಥವಾ ಸಿರಿಯಾ ಅಧ್ಯಕ್ಷನೇ?
Team Udayavani, Jun 26, 2023, 6:40 AM IST
ಡಮಾಸ್ಕಸ್: ವಾಯುವ್ಯ ಸಿರಿಯಾದ ತರಕಾರಿ ಮಾರುಕಟ್ಟೆಯೊಂದರ ಮೇಲೆ ಭಾನುವಾರ ವೈಮಾನಿಕ ದಾಳಿ ನಡೆದಿದ್ದು, ಘಟನೆಯಲ್ಲಿ 9 ಮಂದಿ ಮೃತಪಟ್ಟಿದ್ದಾರೆ, 30ಕ್ಕೂ ಅಧಿಕಮಂದಿ ಗಾಯಗೊಂಡಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಯಾತ್ ತಹ್ರೀರ್ ಅಲ್ ಶಾಮ್ ಉಗ್ರಪಡೆಗಳು ಹಾಗೂ ಟರ್ಕಿ ಬೆಂಬಲಿತ ಪಡೆಗಳ ವಶದಲ್ಲಿ ವಾಯುವ್ಯ ಸಿರಿಯಾ ಇದೆ. ಈ ಹಿನ್ನೆಲೆ ವಿರೋಧಿಗಳನ್ನು ಹತ್ತಿಕ್ಕುವ ಸಲುವಾಗಿ ಸಿರಿಯಾ ಅಧ್ಯಕ್ಷ ಬಶರ್ ಅಸದ್ ಈ ದಾಳಿ ಮಾಡಿಸಿದ್ದಾರೆಂಬ ಗುಮಾನಿ ಇದೆ. ಅಸದ್‌ನ ಆಪ್ತರಾಷ್ಟ್ರವಾದ ರಷ್ಯಾದ ಪಡೆಗಳೇ ಈ ದಾಳಿ ನಡೆಸಿವೆ ಎನ್ನುವ ಮಾತೂ ಕೇಳಿಬಂದಿದೆ. ಆದರೆ ರಷ್ಯಾ ಅಥವಾ ಸಿರಿಯಾ ಸರ್ಕಾರ ಯಾವುದೂ ದಾಳಿ ಕುರಿತು ಪ್ರತಿಕ್ರಿಯೆ ನೀಡಿಲ್ಲ. ದಾಳಿಯ ತೀವ್ರತೆ ಹೆಚ್ಚಿರುವುರಿಂದ ಮೃತಪಟ್ಟವರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿದೆ ಎಂದು ಸ್ಥಳೀಯಾಡಳಿತ ಸಂಸ್ಥೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.