ಐಸಿಸ್ ಮುಖ್ಯಸ್ಥ ಅಬೂಬಕ್ಕರ್ ಅಲ್ ಬಗ್ಧಾದಿ ಸಾವು?
Team Udayavani, Jul 12, 2017, 4:40 AM IST
ಬೈರತ್: ಇಸ್ಲಾಮಿಕ್ ಸ್ಟೇಟ್(ಐಸಿಸ್) ಎಂಬ ಅತಿ ಕ್ರೂರ ಉಗ್ರ ಸಂಘಟನೆಯನ್ನು ಹುಟ್ಟುಹಾಕಿ, ಮಧ್ಯ ಪ್ರಾಚ್ಯ ರಾಷ್ಟ್ರಗಳನ್ನು ರಣಾಂಗಣವಾಗಿ ಮಾರ್ಪಡಿಸಿದ ಅಬೂಬಕ್ಕರ್ ಅಲ್ – ಬಗ್ಧಾದಿ ಮೃತಪಟ್ಟಿದ್ದಾನೆ ಎಂದು ಸಿರಿಯಾದಲ್ಲಿನ ಯುದ್ಧ ಕುರಿತ ಮಾನವ ಹಕ್ಕುಗಳ ವೀಕ್ಷಣಾಲಯ ಹೇಳಿದೆ. ಐಸಿಸ್‌ನ ಪ್ರಮುಖ ಉಗ್ರರು ಬಗ್ಧಾದಿ ಸಾವನ್ನು ಖಚಿತಪಡಿಸಿದ್ದಾರೆ ಎಂದು ಅದು ಹೇಳಿದೆ.
ಐಸಿಸ್ ಉಗ್ರರ ಹಿಡಿತದಲ್ಲಿದ್ದ ಮೊಸೂಲ್ ನಗರವು ಇರಾಕ್ ಸೇನೆಯ ವಶಕ್ಕೆ ಸಿಕ್ಕಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಈ ಹಿಂದೆಯೂ ಹಲವು ಬಾರಿ ಬಗ್ಧಾದಿ ಮೃತಪಟ್ಟಿದ್ದಾನೆ ಎಂಬ ಸುದ್ದಿ ಬಂದಿದ್ದವು. ಆದರೆ, ಯಾವುದೂ ಖಚಿತವಾಗಿರಲಿಲ್ಲ. ಈ ಬಾರಿ ಐಸಿಸ್ ಆಕ್ರಮಿತ ಪೂರ್ವ ಸಿರಿಯಾದ ಡೆಯರ್ ಎಝೊlರ್ ಪ್ರಾಂತ್ಯದಲ್ಲಿದ್ದ ಐಸಿಸ್‌ನ ಉನ್ನತ ಕಮಾಂಡರ್‌ಗಳು ಈ ಕುರಿತು ಮಾಹಿತಿ ನೀಡಿದ್ದಾರೆ ಎಂದು ವೀಕ್ಷಣಾಲಯದ ನಿರ್ದೇಶಕ ರಮಿ ಅಬ್ಧೆಲ್ ರೆಹಮಾನ್ ತಿಳಿಸಿದ್ದಾರೆ.
ಆದರೆ ಬಗ್ಧಾದಿ ಯಾವಾಗ ಮತ್ತು ಹೇಗೆ ಮೃತನಾದ ಎಂಬ ಮಾಹಿತಿ ಇನ್ನೂ ಸಿಕ್ಕಿಲ್ಲ ಎಂದು ಅವರು ಹೇಳಿದ್ದಾರೆ. ಆತ ಕೆಲವು ತಿಂಗಳ ಹಿಂದೆ ಡೆಯರ್ ಎಝೊlàರ್‌ನಲ್ಲಿದ್ದ. ಆದರೆ ಆತ ಮೃತಪಟ್ಟಿದ್ದು ಇದೇ ಪ್ರದೇಶದಲ್ಲೋ ಅಥವಾ ಬೇರೆಡೆಯೋ ಎಂಬುದು ಗೊತ್ತಾಗಿಲ್ಲ. ಮೇ ತಿಂಗಳಲ್ಲಿ ಸಿರಿಯಾದಲ್ಲಿ ನಡೆದ ವೈಮಾನಿಕ ದಾಳಿಯಲ್ಲಿ ಬಗ್ಧಾದಿ ಸಾವಿಗೀಡಾಗಿದ್ದಾನೆ ಎಂದು ರಷ್ಯಾ ಘೋಷಿಸಿತ್ತು. ಆದರೆ, ರಷ್ಯಾದ ಹೇಳಿಕೆಯನ್ನು ಅಮೆರಿಕ ದೃಢಪಡಿಸಿರಲಿಲ್ಲ. ಈಗ ಬಗ್ಧಾದಿ ಮೃತಪಟ್ಟಿರುವುದು ನಿಜವೇ ಆಗಿದ್ದಲ್ಲಿ, ಇದು ಇಸ್ಲಾಮಿಕ್ ಸ್ಟೇಟ್‌ಗೆ ಆಗಿರುವ ಅತಿದೊಡ್ಡ ಹಿನ್ನಡೆ ಎಂದು ರೆಹಮಾನ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Daily Horoscope: ಅವಿವಾಹಿತರಿಗೆ ಸಂಬಂಧ ಕೂಡಿಬರುವ ಸೂಚನೆ, ಆರೋಗ್ಯದ ಕಡೆಗೆ ಗಮನ ಇರಲಿ
Election Results: ಝಾರ್ಖಂಡ್, ಮಹಾರಾಷ್ಟ್ರದಲ್ಲಿ ಪಟ್ಟ ಯಾರಿಗೆ?
Udupi: ಜಾಗ ಖರೀದಿಗೆ ಕರಾರು ಮಾಡಿಸಿ ವಂಚನೆ: ಪ್ರಕರಣ ದಾಖಲು
Adani ಗ್ರೂಪ್‌ಗೆ ಸಾಲ: ಜಾಗತಿಕ ಬ್ಯಾಂಕ್‌ಗಳಿಂದ ತಾತ್ಕಾಲಿಕ ಬ್ರೇಕ್?
Bangaluru; ವ್ಯಕ್ತಿ ಹೊಟ್ಟೆಯಿಂದ 50 ಟೂತ್‌ಬ್ರೆಷ್ ಹೊರತೆಗೆದ ವೈದ್ಯರು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.