Syrian Rebels Seize: 1 ಲಕ್ಷ “ಬಲಿ ಪಡೆದ’ ಸಿರಿಯಾ ಸರ್ವಾಧಿಕಾರಿಯ ಕುಟುಂಬ!

ಸರ್ಕಾರದ ವಿರುದ್ಧ ಧ್ವನಿಯೆತ್ತಿದವರಿಗೆ ಚಿತ್ರಹಿಂಸೆ, ಮರಣದಂಡನೆ

Team Udayavani, Dec 9, 2024, 7:45 AM IST

syria-asad

ಡಮಾಸ್ಕಸ್‌: ಸಿರಿಯಾ ಸರ್ವಾಧಿಕಾರಿ ಅಸಾದ್‌ ಕುಟುಂಬವು ಬರೋಬ್ಬರಿ 1 ಲಕ್ಷ ಮಂದಿಯನ್ನು ಬಲಿಪಡೆದಿದೆ ಎಂದು ವರದಿಗಳು ತಿಳಿಸಿವೆ. 1970ರಲ್ಲಿ ಅಧಿಕಾರ ಹಿಡಿದ ಅಸಾದ್‌ ತಂದೆ ಹಫೇಜ್‌ ಆರಂಭದಿಂದಲೂ “ಒಡೆದು ಆಳುವ ನೀತಿ’ಯನ್ನೇ ಅನುಸರಿಸಿದ್ದರು.

ಹಫೇಜ್‌ ಸಾವಿನ ಬಳಿಕ ಅಧಿಕಾರಕ್ಕೆ ಬಂದ ನೇತ್ರತಜ್ಞ ಡಾ.ಅಸಾದ್‌, ಆರಂಭದಲ್ಲಿ ಸುಧಾರಣಾವಾದಿಯಂತೆ ಕಂಡಿದ್ದರು. ಆದರೆ, ನಂತರದ ದಿನಗಳಲ್ಲಿ ಅವರು ದಮನಕಾರಿ ನೀತಿ ಅನುಸರಿಸಲಾರಂಭಿಸಿದರು. ತಮ್ಮ ಸರ್ಕಾರದ ವಿರುದ್ಧ ಧ್ವನಿಯೆತ್ತಿದ 1 ಲಕ್ಷದಷ್ಟು ಮಂದಿಯನ್ನು ಬಲಿಪಡೆದರು. ಈ ಪೈಕಿ 30 ಸಾವಿರಕ್ಕೂ ಹೆಚ್ಚು ಮಂದಿಯನ್ನು ಸೈದ್ನಾಯಾ ಜೈಲಲ್ಲಿ ಗಲ್ಲಿಗೇರಿಸಲಾಗಿದೆ.

ಅಸಾದ್‌ ಆಡಳಿತ, ಜೈಲಲ್ಲಿ ಕೈದಿಗಳಿಗೆ ಚಿತ್ರಹಿಂಸೆ ನೀಡುತ್ತಿತ್ತು. ಗಲ್ಲಿಗೇರಿಸುವ ದಿನ ಕೈದಿಗಳ ಬಳಿ ಬಂದು, ನಿಮ್ಮನ್ನು ಸಾಮಾನ್ಯ ಸೆಲ್‌ಗೆ ರವಾನಿಸಲಾಗುತ್ತದೆ ಎಂದು ಹೇಳಿ, ನೆಲಮಹಡಿಗೆ ಕರೆದೊಯ್ದು ಸತತ 2-3 ಗಂಟೆ ಕಾಲ ಥಳಿಸಲಾಗುತ್ತಿತ್ತು. ಮಧ್ಯರಾತ್ರಿ ಕಣ್ಣಿಗೆ ಬಟ್ಟೆ ಕಟ್ಟಿ, ಟ್ರಕ್‌ಗಳಿಗೆ ತುಂಬಿ ಮತ್ತೂಂದೆಡೆಗೆ ಕರೆದೊಯ್ದು, ನೇಣು ಹಾಕಲಾಗುತ್ತಿತ್ತು. ವಾರಕ್ಕೆ 2 ಬಾರಿ ತಲಾ 50 ಮಂದಿಯನ್ನು ಗಲ್ಲಿಗೇರಿಸಲಾಗುತ್ತಿತ್ತು ಎಂದು ವರದಿ ಹೇಳಿದೆ.

ಅಸಾದ್‌ ಆಡಳಿತ ಕೊನೆಯಾಗುತ್ತಿದ್ದಂತೆ ಬಂಡುಕೋರರು ಮೊದಲು ಹೋಗಿದ್ದೇ ಡಮಾಸ್ಕಸ್‌ನ “ಮಾನವ ವಧಾಗೃಹ’ ಎಂದೇ ಕರೆಯಲ್ಪಡುವ ಈ ಸೈದ್ನಾಯಾ ಜೈಲಿಗೆ! ಅಲ್ಲಿಗೆ ಹೋಗಿ ಅಲ್ಲಿದ್ದ ಸಾವಿರಾರು ಕೈದಿಗಳನ್ನು ಬಂಡುಕೋರರು ಬಿಡುಗಡೆ ಮಾಡಿದ್ದಾರೆ.

ಮಧ್ಯಪ್ರಾಚ್ಯದ ಮತ್ತೊಬ್ಬ ಸರ್ವಾಧಿಕಾರಿ ಯುಗಾಂತ್ಯ
ಯೆಮೆನ್‌, ಈಜಿಪ್ಟ್, ಲಿಬಿಯಾ, ಟುನಿಶಿಯಾ ಮತ್ತು ಇದೀಗ ಸಿರಿಯಾ ! ಮಧ್ಯಪ್ರಚಾದ್ಯಲ್ಲಿ ದುರಂತ ಪತನಕಂಡ ಸರ್ವಾಧಿಕಾರಿಗಳ ಸಾಲಿಗೆ ಅಸಾದ್‌ ಸೇರ್ಪಡೆಯಾಗಿದ್ದಾರೆ. 1979 ರಿಂದ 2003ರ ವರೆಗೆ ಇರಾಕ್‌ನಲ್ಲಿ ಸರ್ವಾಧಿಕಾರಿಯಾಗಿ ಮೆರೆದ ಸದ್ಧಾಂ ಹುಸೇನ್‌ 2003ರಲ್ಲಿ ತನ್ನ ಸೇನೆಯನ್ನು ಗಲ್ಫ್ ಯುದ್ಧಕ್ಕೆ ಅಣಿಯಾಗಿಸಿ ಪಾಶ್ಚಿಮಾತ್ಯ ರಾಷ್ಟ್ರಗಳನ್ನ ತಾನೇ ಮೈಮೇಲೆ ಎಳೆದುಕೊಂಡು ನಾಶವಾದರು.

1969 ರಿಂದ 2011ರ ವರೆಗೂ ಲಿಬಿಯಾದಲ್ಲಿ ನಿರಂಕುಶಾಧಿಕಾರಿಯಾಗಿದ್ದ ಮೊಹಮ್ಮದ್‌ ಗಡಾಫಿ ವಿರುದ್ಧ 2011ರಲ್ಲಿ ಬಂಡುಕೋರರು ಹೋರಾಟ ನಡೆಸಿ, ಅವರನ್ನು ಹತ್ಯೆ ಮಾಡಿದ್ದರು. 1987 ರಿಂದ 2011ರ ವರೆಗೆ ಟುನಿಶೀಯಾ ಅಧ್ಯಕ್ಷನಾಗಿದ್ದ ಜೈನ್‌ ಎಲ್‌ ಅಬಿದಿನ್‌ ಬೆನ್‌ ಅಲಿಯನ್ನೂ ನಾಗರಿಕ ದಂಗೆಗಳು ಬುಡಮೇಲು ಮಾಡಿದ ಪರಿಣಾಮ ಆತ ಸೌದಿ ಅರೇಬಿಯಾಗೆ ಪಲಾಯನ ಮಾಡಬೇಕಾಯ್ತು. ಈಜಿಪ್ಟ್ನ ಸರ್ವಾಧಿಕಾರಿ ಮೊಹಮ್ಮದ್‌ ಮರ್ಸಿ ಅವರ ಆಡಳಿತವನ್ನೂ ನಾಗರಿಕ ದಂಗೆಗಳು ಬುಡಮೇಲು ಮಾಡಿದ್ದವು.

ಸಿರಿಯಾದಲ್ಲಿರುವ ಭಾರತೀಯರು ಸುರಕ್ಷಿತ: ಕೇಂದ್ರ ಸರ್ಕಾರ
ನವದೆಹಲಿ: ಸಿರಿಯಾದಲ್ಲಿರುವ ಭಾರತೀಯರು ಸುರಕ್ಷಿತರಾಗಿದ್ದಾರೆ. ಡಮಾಸ್ಕಸ್‌ನಲ್ಲಿರುವ ರಾಯಭಾರ ಕಚೇರಿ ಕಾರ್ಯವೆಸಗುತ್ತಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ವಿಶ್ವಸಂಸ್ಥೆಯಲ್ಲಿ ಕೆಲಸ ಮಾಡುವ 14 ಮಂದಿ ಸೇರಿದಂತೆ ಒಟ್ಟು 90 ಮಂದಿ ಭಾರತೀಯರು ಸಂಘರ್ಷ ಪೀಡಿತ ದೇಶದಲ್ಲಿದ್ದಾರೆ.

ಟಾಪ್ ನ್ಯೂಸ್

ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್‌: ವಿ.ನಾರಾಯಣನ್‌

ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್‌: ವಿ.ನಾರಾಯಣನ್‌

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

naxal-file

Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್‌ ನಿಶ್ಶಬ್ದ

purushotham-bilimale

Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!

Naxals-CM-Office

Naxals Surrender: ಶರಣಾದ ನಕ್ಸಲರ ಪ್ರಕರಣಗಳಿಗೆ ತ್ವರಿತ ನ್ಯಾಯಾಲಯ: ಸಿಎಂ ಸಿದ್ದರಾಮಯ್ಯ

Sathish-jarakhoili

Dinner Politics: ಊಟ, ಅಜೆಂಡಾ ನಮ್ಮದು, ಬೇರೆಯವರಿಗೆ ಆತಂಕ ಏಕೆ?: ಸತೀಶ್‌ ಜಾರಕಿಹೊಳಿ

Congress-Symbol

CLP Meeting: ಜ.13ರಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

US-Canada Map: ಅಮೆರಿಕ ಭೂಪಟಕ್ಕೆ ಕೆನಡಾ ಸೇರಿಸಿದ ಟ್ರಂಪ್‌: ವಿವಾದ

US-Canada Map: ಅಮೆರಿಕ ಭೂಪಟಕ್ಕೆ ಕೆನಡಾ ಸೇರಿಸಿದ ಟ್ರಂಪ್‌: ವಿವಾದ

1-donald

Trump warns; ಹಮಾಸ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ ನರಕ…

Indian-origin Anita in Canada’s Prime Ministerial race

Canada ಪ್ರಧಾನಿ ರೇಸ್‌ನಲ್ಲಿ ಭಾರತ ಮೂಲದ ಅನಿತಾ?

Pakistan; 6 brothers marry 6 sisters to save expenses!

Pakistan; ಖರ್ಚು ಉಳಿಸಲು 6 ಸೋದರರಿಂದ 6 ಮಂದಿ ಸೋದರಿಯರ ವಿವಾಹ!

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್‌: ವಿ.ನಾರಾಯಣನ್‌

ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್‌: ವಿ.ನಾರಾಯಣನ್‌

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

naxal-file

Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್‌ ನಿಶ್ಶಬ್ದ

purushotham-bilimale

Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!

courts

Sullia: ಮಗುವಿಗೆ ಸುಟ್ಟು ಗಾಯ ಮಾಡಿದ್ದ ತಾಯಿ; ಆರೋಪ ಸಾಬೀತು; ಶಿಕ್ಷೆ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.