ಚೀನಾಕ್ಕೆ ಕ್ಯಾರೇ ಅನ್ನದ ತೈವಾನ್!
-ತೈವಾನ್ ಸನಿಹ 30 ಯುದ್ಧವಿಮಾನ ನಿಯೋಜಿಸಿದ ಚೀನಾ, ಯುದ್ಧಸದೃಶ
Team Udayavani, Jul 23, 2023, 7:12 AM IST
ತೈಪೈ: ಚೀನಾದ ಸಂಭಾವ್ಯ ಆಕ್ರಮಣ ಎದುರಿಸಲು ದ್ವೀಪ ರಾಷ್ಟ್ರ ತೈವಾನ್ ಸಮರಾಭ್ಯಾಸಕ್ಕೆ ಸಜ್ಜುಗೊಳ್ಳುತ್ತಿರುವ ನಡುವೆಯೇ, ಇತ್ತ ಡ್ರ್ಯಾಗನ್ ರಾಷ್ಟ್ರ ತನ್ನ ಹಿಡಿತ ಬಿಗಿಮಾಡಲು ಮುಂದಾಗಿದೆ. ಬಾಂಬರ್‌ಗಳು ಸೇರಿದಂತೆ 30ಕ್ಕೂ ಹೆಚ್ಚು ಪ್ರಬಲ ಯುದ್ಧವಿಮಾನಗಳನ್ನು ತೈವಾನ್ ಬಳಿ ನಿಯೋಜಿಸಿದೆ ಎಂದು ತೈವಾನ್ ರಕ್ಷಣಾ ಸಚಿವಾಲಯ ಶನಿವಾರ ತಿಳಿಸಿದೆ.
ವರದಿಗಳ ಪ್ರಕಾರ, ತೈವಾನ್ ನಾಗರಿಕರಿಗೆ ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿ ಸ್ಥಳಾಂತರಗೊಳ್ಳುವುದರ ಬಗ್ಗೆ ಹಾಗೂ ಅಪಾಯಗಳನ್ನು ಎದುರಿಸುವ ಕುರಿತು ವಾರ್ಷಿಕವಾಗಿ ತರಬೇತಿ ನೀಡಲಾಗುತ್ತದೆ. ಇದೇ ವೇಳೆ ರಕ್ಷಣಾ ಪಡೆಗಳು ಕೂಡ ರಾಷ್ಟ್ರದ ಮೇಲಿನ ಆಕ್ರಮಣ ಹಿಮ್ಮೆಟ್ಟಸುವುದಕ್ಕೆ ಸಂಬಂಧಿಸಿದ ಸಮರಾಭ್ಯಾಸವನ್ನು ನಡೆಸುತ್ತವೆ. ಈ ವರ್ಷದ ಈ ತರಬೇತಿಗೆ ಇನ್ನೊಂದು ವಾರ ಬಾಕಿ ಇದ್ದು, ಈ ಸಂಬಂಧಿಸಿದ ಸಿದ್ಧತೆಗಳಲ್ಲಿ ಆಡಳಿತ ಸಜ್ಜುಗೊಂಡಿತ್ತು.
ಇದೇ ಸಂದರ್ಭದಲ್ಲಿ ಚೀನಾದ ಪೀಪಲ್ ಲಿಬರೇಷನ್ ಆರ್ಮಿಯು ಶುಕ್ರವಾರ ಬೆಳಗ್ಗೆ 6 ಗಂಟೆಯಿಂದ ಶನಿವಾರ ಬೆಳಗ್ಗೆ 6 ಗಂಟೆವರೆಗೆ 37 ಯುದ್ಧವಿಮಾನಗಳನ್ನು ಚೀನಾದ ವಾಯುಗಡಿಯಲ್ಲಿ ನಿಯೋಜಿಸಿದೆ. ಇವುಗಳ ಪೈಕಿ ಜೆ-10,ಜೆ-16 ಫೈಟರ್‌ಜೆಟ್‌ಗಳು ಹಾಗೂ ಎಚ್-6 ಬಾಂಬರ್‌ಗಳು ಮತ್ತು 22 ಯುದ್ಧವಿಮಾನಗಳೂ ಸೇರಿವೆ. ಇಷ್ಟೇ ಅಲ್ಲದೇ, ಸಾಗರದ ಮೂಲಕವೂ ತೈವಾನ್ ಸುತ್ತುವರಿಯಲು ಯೋಜಿಸಿರುವ ಚೀನಾ ತನ್ನ ನೌಕಾಪಡೆಯ 7 ಯುದ್ಧ ನೌಕೆಗಳನ್ನು ತೈವಾನ್ ಬಳಿ ನಿಯೋಜಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇತ್ತೀಚೆಗಷ್ಟೇ ಅಮೆರಿಕದ ಜತೆಗಿನ ತೈವಾನ್ ನಂಟಿನ ಬಗ್ಗೆ ಕಿಡಿಕಾರಿದ್ದ ಚೀನಾ, ಆಗಲೂ ತನ್ನ ದರ್ಪ ತೋರಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
ವಾಯುವ್ಯ ಅಮೆರಿಕಕ್ಕೆ ಅಪ್ಪಳಿಸಿದ ಬಾಂಬ್ ಸೈಕ್ಲೋನ್, 6 ಲಕ್ಷ ಮನೆಗಳಿಗೆ ವಿದ್ಯುತ್ ಕಡಿತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.