ಮತ್ತೆ ಭುಗಿಲೆದ್ದ ಚೀನ-ತೈವಾನ್ ಸಂಘರ್ಷ: ತೈವಾನ್‌ನತ್ತ 103 ಸೇನಾ ವಿಮಾನಗಳ ರವಾನೆ
Team Udayavani, Sep 19, 2023, 9:55 AM IST
ತೈಪೇ: ಚೀನ ಮತ್ತು ತೈವಾನ್ ನಡುವಣ ಸಂಘರ್ಷ ಮತ್ತೆ ಭುಗಿಲೆದ್ದಿದ್ದು, 24 ತಾಸುಗಳ ಅವಧಿಯಲ್ಲಿ ಚೀನ ಸೇನೆಯು ತೈವಾನ್‌ನತ್ತ 103 ಸೇನಾ ವಿಮಾನಗಳನ್ನು ರವಾನಿಸಿದೆ.
ರವಿವಾರ ಬೆಳಗ್ಗೆ ಗಂಟೆ 6ರಿಂದ ಸೋಮವಾರ ಬೆಳಗ್ಗೆ ಗಂಟೆ 6ರ ವರೆಗಿನ ಅವಧಿಯಲ್ಲಿ ಈ ವಿಮಾನಗಳು ತೈವಾನ್‌ನತ್ತ ಧಾವಿಸುತ್ತಿರುವುದನ್ನು ತೈವಾನ್‌ನ ರಕ್ಷಣ ಸಚಿವಾಲಯ ದೃಢೀಕರಿಸಿದ್ದು ವಾಡಿಕೆಯಂತೆ ಈ ವಿಮಾನಗಳು ತೈವಾನ್ ತಲುಪುವುದಕ್ಕೂ ಮುನ್ನ ವಾಪಸಾಗಿವೆ ಎಂದು ತಿಳಿಸಿದೆ.
ಸ್ವಯಂ ಆಡಳಿತವನ್ನು ಹೊಂದಿರುವ ದ್ವೀಪರಾಷ್ಟ್ರ ತೈವಾನ್‌ನತ್ತ ಪ್ರತಿನಿತ್ಯ ಚೀನದ ತೀರಾ ಕಡಿಮೆ ಸಂಖ್ಯೆಯಲ್ಲಿ ಯುದ್ಧ ವಿಮಾನಗಳು ಹಾರಾಟ ನಡೆಸುತ್ತಿರುತ್ತವೆ. ಆದರೆ ಕಳೆದೊಂದು ದಿನದ ಅವಧಿಯಲ್ಲಿ 100ಕ್ಕೂ ಯುದ್ಧ ವಿಮಾನಗಳ ಸಹಿತ ಸೇನಾ ವಿಮಾನಗಳು ಏಕಾಏಕಿ ಹಾರಾಟ ನಡೆಸಿವೆ ಎಂದು ರಕ್ಷಣ ಅಧಿಕಾರಿಗಳು ತಿಳಿಸಿರುವರಾದರೂ ಎಷ್ಟು ಸಮಯದವರೆಗೆ ಈ ವಿಮಾನಗಳು ಹಾರಾಟ ನಡೆಸಿದವು ಎಂಬ ಬಗೆಗೆ ಖಚಿತ ಮಾಹಿತಿ ನೀಡಲಿಲ್ಲ.
40 ವಿಮಾನಗಳು ಚೀನ ಮತ್ತು ತೈವಾನ್ ನಡುವಣ ಸಾಂಕೇತಿಕ ಮಧ್ಯ ರೇಖೆಯನ್ನು ದಾಟಿ ಹಾರಾಟ ನಡೆಸಿವೆ. ಈ ಪೈಕಿ ವಾಯುಮಾರ್ಗದ ಮಧ್ಯೆ ವಿಮಾನಗಳಿಗೆ ಇಂಧನ ತುಂಬಿಸುವ ಟ್ಯಾಂಕರ್ ವಿಮಾನಗಳ ಸಹಿತ 30 ಯುದ್ಧ ವಿಮಾನಗಳು ಸೇರಿದ್ದವು. ಇದೇ ವೇಳೆ ಚೀನದ 9 ನೌಕಾ ಹಡಗುಗಳು ಕೂಡ ದ್ವೀಪರಾಷ್ಟ್ರದ ಸಮುದ್ರ ಸರಹದ್ದಿನಲ್ಲಿ ಗಸ್ತು ತಿರುಗುತ್ತಿದ್ದವು. ತೈವಾನ್‌ಗೆ ಕಿರುಕುಳ ನೀಡಲೆಂದೇ ಚೀನ ಈ ಕಾರ್ಯಾಚರಣೆ ನಡೆಸಿದೆ ಎಂದು ಅಧಿಕಾರಿಗಳು ದೂರಿದರು.
ಯಾವುದೇ ಮಧ್ಯ ರೇಖೆ ಇಲ್ಲ: ಚೀನ ಮತ್ತು ತೈವಾನ್ ನಡುವೆ ಯಾವುದೇ ಸಾಂಕೇತಿಕ ಮಧ್ಯ ರೇಖೆ ಎಂಬುದಿಲ್ಲ ಎಂದು ಸ್ಪಷ್ಟ ಸ್ಪಡಿಸಿರುವ ಚೀನ ವಿದೇಶಾಂಗ ಇಲಾಖೆಯ ವಕ್ತಾರ ಮಾವೊ ನಿಂಗ್, ತೈವಾನ್ ಚೀನದ ಭಾಗವೇ ಆಗಿರುವುದರಿಂದ ಚೀನ ಸೇನಾ ವಿಮಾನಗಳು ತನ್ನ ವಾಯು ಪ್ರದೇಶದಲ್ಲಿ ಹಾರಾಡಿವೆ ಎಂದಿದ್ದಾರೆ.
ತೈವಾನ್ ಅನ್ನು ತನ್ನ ಭಾಗವೆಂದೇ ಪ್ರತಿಪಾದಿಸುತ್ತ ಬಂದಿರುವ ಚೀನ ನಿರಂತರವಾಗಿ ತೈವಾನ್ ಗಡಿ ಭಾಗದಲ್ಲಿ ಸೇನಾ ಅಣಕು ಕಾರ್ಯಾಚರಣೆ, ಗಸ್ತು ನಡೆಸುತ್ತ ಬಂದಿದೆ. ಚೀನದ ನೌಕಾ ಪಡೆ ಮತ್ತು ವಾಯು ಪಡೆ ತೈವಾನ್ ಪ್ರದೇಶ ದಲ್ಲಿ ತಮ್ಮ ಕಾರ್ಯಾಚರಣೆಯನ್ನು ಪದೇಪದೆ ತೀವ್ರಗೊಳಿಸುವ ಮೂಲಕ ತೈವಾನ್ ಮೇಲೆ ಅಧಿಪತ್ಯ ಸ್ಥಾಪಿಸಲು ಪ್ರಯತ್ನ ನಡೆಸುತ್ತ ಬಂದಿದೆ. ಇದೇ ವಿಚಾರ ವಾಗಿ ಅಮೆರಿಕ, ಚೀನದ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸುತ್ತಲೇ ಬಂದಿದೆ.
ಅಧ್ಯಕ್ಷೀಯ ಚುನಾವಣೆ ಮೇಲೆ ಪ್ರಭಾವ ಬೀರುವ ಯತ್ನ: ತೈವಾನ್‌ನಲ್ಲಿ ಮುಂದಿನ ಜನವರಿಯಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು ಈ ಹಿನ್ನೆಲೆಯಲ್ಲಿ ಚೀನ ಸರಕಾರ ತೈವಾನ್ ವಿರುದ್ಧದ ತನ್ನ ಆಕ್ರಮಣಕಾರಿ ನಿಲುವನ್ನು ಮತ್ತಷ್ಟು ಹೆಚ್ಚಿಸಿದೆ. ತೈವಾನ್‌ನ ಆಡಳಿತಾರೂಢ ಡೆಮಾಕ್ರಟಿಕ್ ಪ್ರೊಗ್ರೆಸಿವ್ ಪಾರ್ಟಿ ತೈವಾನ್‌ನ ಸ್ವಾಯತ್ತೆಯನ್ನು ಪ್ರಬಲವಾಗಿ ಪ್ರತಿಪಾದಿಸುತ್ತ ಬಂದಿದ್ದು ಚೀನ ನಾಯಕತ್ವದ ವಿರೋಧ ಕಟ್ಟಿಕೊಂಡಿದೆ. ಇದೇ ವೇಳೆ ಚೀನ ತನ್ನ ಪರ ಮೃದು ಧೋರಣೆಯನ್ನು ಹೊಂದಿರುವ ತೈವಾನ್‌ನ ವಿಪಕ್ಷ ಅಭ್ಯರ್ಥಿಯ ಪರವಾಗಿದೆ.
ಇದನ್ನೂ ಓದಿ: Chaitra Kundapura: ಚೈತ್ರಾ ಕುಂದಾಪುರ ವಿರುದ್ಧ ಮತ್ತೂಂದು ಪ್ರಕರಣ ದಾಖಲು…
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan: ಪಾಕ್‌ನಲ್ಲಿ ಹಿಂಸಾಚಾರ; ಒಟ್ಟು 37 ಮಂದಿ ಸಾವು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.