ತೈವಾನ್ ದ್ವೀಪದ ಅಂತರ್ಜಾಲ ಕೇಬಲ್ ಕತ್ತರಿಸಿದ ಚೀನ !
Team Udayavani, Mar 9, 2023, 6:43 AM IST
ತೈಪೆ : ನೆರೆ ರಾಷ್ಟ್ರಗಳ ಜತೆಗೆ ಸದಾ ಕ್ಯಾತೆ ತೆಗೆಯುವ, ಭೂ ಅತಿಕ್ರಮಣಕ್ಕೆ ಹಪಾಹಪಿಸುವ ಚೀನಾ, ತೈವಾನ್ ಮೇಲಿನ ತನ್ನ ಉದ್ದೇಶಿತ ಕುತಂತ್ರ ಮುಂದುವರಿಸಿದ್ದು, ತೈವಾನ್‌ನ ದ್ವೀಪ ಪ್ರದೇಶದ ಜಲಾಂತರ್ಗಾಮಿ ಅಂತರ್ಜಾಲ ಸೇವೆಯ ಕೇಬಲ್‌ಗಳನ್ನು ಕತ್ತರಿಸಿಹಾಕಿದೆ.
14 ಸಾವಿರ ಮಂದಿ ವಾಸವಿರುವ ಮತ್ಸು ದ್ವೀಪವು 2 ಜಲಾಂತರ್ಗಾಮಿ ಅಂತರ್ಜಾಲ ಕೇಬಲ್‌ಗಳನ್ನು ಅವಲಂಬಿಸಿದ್ದು, ಚೀನಾದ ಕುತಂತ್ರದಿಂದ ಈಗ ಜನರು ಪರದಾಡುವಂತಾಗಿದೆ.
ಫೆ.2 ರಂದು ಚೀನ ಮೀನುಗಾರಿಕೆ ಹಡಗೊಂದು ದ್ವೀಪ ಪ್ರದೇಶದ 50 ಕಿ.ಮೀ. ಅಂತರದಲ್ಲಿ ಮೊದಲ ಕೇಬಲ್ ಕತ್ತರಿಸಿಹಾಕಿತ್ತು. ಈಗ ಮತ್ತೊಮ್ಮೆ ಚೀನ ತನ್ನ ಕುತಂತ್ರದಿಂದ ಫೆ.8ರಂದು 2ನೇ ಕೇಬಲ್ ಅನ್ನೂ ಚೀನಾದ ಸರಕು ಸಾಗಣೆ ಹಡಗೊಂದು ಕತ್ತರಿಸಿಹಾಕಿದೆ ಎಂದು ತೈವಾನ್‌ನ ಅತಿದೊಡ್ಡ ಸೇವಾ ಪೂರೈಕೆದಾರ ಚುಂಗ್ವಾ ಟೆಲಿಕಾಂ ಆರೋಪಿಸಿದೆ. ಕೇಬಲ್‌ಗಳ ಕಡಿತದಿಂದ ಜನರಿಗೆ ತೊಂದರೆಯಾಗಿರುವುದು ಮಾತ್ರವಲ್ಲದೆ, ಭದ್ರತಾ ವ್ಯವಸ್ಥೆ, ತಂತ್ರಜ್ಞಾನ, ಗುಪ್ತಚರ ಮಾಹಿತಿ ರವಾನೆಗೂ ಅಡಚಣೆಯಾಗಿದೆ.ಇನ್ನು ಚೀನ ಈ ರೀತಿ ಅಂತರ್ಜಾಲ ಕೇಬಲ್ ಕಡಿತಗೊಳಿಸಿ,ಉದ್ಧಟತನ ಮರೆಯುತ್ತಿರುವುದು ಇದು ಮೊದಲೇನಲ್ಲ.ಕಳೆದ 5 ವರ್ಷದಲ್ಲಿ 27 ಬಾರಿ ಇಂಥ ಕೃತ್ಯ ಎಸಗಿದೆ ಎಂದು ಟೆಲಿಕಾಂ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
ವಾಯುವ್ಯ ಅಮೆರಿಕಕ್ಕೆ ಅಪ್ಪಳಿಸಿದ ಬಾಂಬ್ ಸೈಕ್ಲೋನ್, 6 ಲಕ್ಷ ಮನೆಗಳಿಗೆ ವಿದ್ಯುತ್ ಕಡಿತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.