ತೈವಾನ್‌ನಲ್ಲಿ ಚೀನಾ ಸೇನೆ?
Team Udayavani, May 19, 2018, 6:00 AM IST
ವಾಷಿಂಗ್ಟನ್: ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ಮತ್ತು ಜಪಾನ್‌ಗೆ ಸವಾಲೊಡ್ಡಲು ಚೀನಾ ಹೊಸ ತಂತ್ರ ಹೂಡಿದೆ. ಅದರಂತೆ, ತೈವಾನ್ ದೇಶವನ್ನು ಪ್ರಮುಖ ಅಣ್ವಸ್ತ್ರಗಳ ಹಾಗೂ ಸೇನಾ ನೆಲೆಯನ್ನಾಗಿ ಬದಲಾಯಿಸಲು ನೆರೆರಾಷ್ಟ್ರ ಚಿಂತನೆ ನಡೆಸಿದೆ. ಹೀಗೆಂದು ಅಮೆರಿಕದ ಸಂಸದ ರಿಚರ್ಡ್ ಡಿ ಫಿಶರ್ ಎಚ್ಚರಿಕೆ ನೀಡಿದ್ದಾರೆ.
ಹಲವು ಸಂಸದರನ್ನು ಉದ್ದೇಶಿಸಿ ಮಾತನಾಡಿದ ಅವರು, ದಕ್ಷಿಣ ಏಷ್ಯಾ ವಲಯದಲ್ಲಿ ಚೀನಾ ಎಲ್ಲಾ ರೀತಿಯಲ್ಲಿ ತನ್ನ ಪ್ರಭಾವ ವಿಸ್ತರಿಸುತ್ತಿದೆ. ವಿವಿಧ ಯೋಜನೆಗಳನ್ನು ಜಾರಿ ಮಾಡುವ ಆಫ್ರಿಕಾ ಖಂಡದ ರಾಷ್ಟ್ರವಾಗಿರುವ ಡಿಜಿ ಬೌಟಿಯ ಅರ್ಥ ವ್ಯವಸ್ಥೆಯನ್ನು ಚೀನಾ ಬುಡ ಮೇಲು ಮಾಡಿದೆ. ಶ್ರೀಲಂಕಾದ ಲ್ಲಿಯೂ ಚೀನಾ ಸರ್ಕಾರ ಬಂದರನ್ನು ಸಂ ಪೂರ್ಣ ಕೈವಶ ಮಾಡಿಕೊಂಡಿದೆ. ಪಾಕಿ ಸ್ತಾನ, ಥಾಯ್ಲೆಂಡ್, ವನುವಾಟು ಸೇರಿದಂತೆ ಸಣ್ಣ ರಾಷ್ಟ್ರಗಳ ಮೇಲೆ ಅದು ಕಣ್ಣಿರಿಸಿದೆ. ಅಲ್ಲಿ ವಿವಿಧ ಯೋಜನೆಗಳನ್ನು ಜಾರಿ ಮಾಡಿ “ಸಾಲದ ಸುಳಿಯ ರಾಜತಾಂತ್ರಿಕತೆ’ (ಡೆಟ್ ಟ್ರ್ಯಾಪ್ ಡಿಪ್ಲೊಮೆಸಿ)ಯನ್ನು ರಹಸ್ಯವಾಗಿ ಜಾರಿ ಮಾಡುತ್ತಿದೆ ಎಂದು ಎಚ್ಚರಿಸಿದ್ದಾರೆ.
2020ರ ವೇಳೆಗೆ ಚೀನಾ ತೈವಾನ್‌ನಲ್ಲಿ ಪರಮಾಣು ಶಸ್ತ್ರಾಸ್ತ್ರ, ಸೇನಾ ನೆಲೆಯ ಸ್ಥಾಪನೆಯನ್ನು ಪೂರ್ಣ ಗೊಳಿಸಲಿದೆ. ಇದರಿಂದಾಗಿ ದಕ್ಷಿಣ ಚೀನಾ ಸಮುದ್ರ ವ್ಯಾಪ್ತಿಯ ಪ್ರದೇಶದ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಲು ಚೀನಾಕ್ಕೆ ಸಾಧ್ಯವಾಗಲಿದೆ. ಜತೆಗೆ 2030ರ ವೇಳೆಗೆ ಚೀನಾದ ವಾಯು ಪಡೆ ಕೂಡ ತಾಂತ್ರಿವಾಗಿ ಮೇಲ್ದರ್ಜೆಗೆ ಏರಿಕೆಯಾಗಲಿದೆ. ಕ್ಸಿಯಾನ್ ವೈ-20 ಎಂಬ ಮಿಲಿಟರಿ ವಿಮಾನವನ್ನು ಅದು ಅಭಿವೃದ್ಧಿಪಡಿಸಲಿದೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.