ಆ’ ಪತ್ರಕರ್ತನಿಗಾಗಿ ಕಾಬೂಲ್ ನಲ್ಲಿರುವ ಪ್ರತಿ ಮನೆಗಳ ಮೇಲೆ ದಾಳಿ ಮಾಡುತ್ತಿದೆ ತಾಲಿಬಾನ್.!
Team Udayavani, Aug 20, 2021, 12:53 PM IST
ಪ್ರಾತಿನಿಧಿಕ ಚಿತ್ರ
ಬೆರ್ಲಿನ್ : ತಾಲಿಬಾನ್ ಉಗ್ರರ ಅಟ್ಟಹಾಸ ಮತ್ತೆ ಮುಂದುವರಿದಿದೆ. ಜರ್ಮನಿ ಸರ್ಕಾರಿ ಸ್ವಾಮ್ಯದ ಸುದ್ದಿ ಸಂಸ್ಥೆ ಡಾಯ್ಟ್ ವೆಲ್ಲೆ( ಡಿ. ಡಬ್ಲ್ಯ) ಪತ್ರಕರ್ತನೋರ್ವನ ಸಂಬಂಧಿಕನೋರ್ವನ ಮೇಲೆ ತಾಲಿಬಾನ್ ಪಡೆ ಗುಂಡಿನ ದಾಳಿ ನಡೆಸಿದೆ.
ಪತ್ರಕರ್ತನ ಇನ್ನೋರ್ವ ಸಂಬಂಧಿ ಗುಂಡೇಟಿನಿಂದ ಗಂಭೀರ ಸ್ಥಿತಿಯಲ್ಲಿದ್ದಾನೆಂದು ವರದಿ ತಿಳಿಸಿದ್ದು, ತಾಲಿಬಾನ್ ಪಡೆ ಡಾಯ್ಟ್ ವೆಲ್ಲೆ ಸುದ್ದಿ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪತ್ರಕರ್ತನಿಗಾಗಿ ಅಫ್ಗಾನಿಸ್ತಾನದ ಮನೆ ಮನೆಗಳಿಗೆ ದಾಳಿ ಮಾಡುತ್ತಿದ್ದಾರೆಂದು ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆ ಡಿ. ಡಬ್ಲು ವರದಿ ಮಾಡಿದೆ.
ಇದನ್ನೂ ಓದಿ : ಶರಿಯಾ ಕಾನೂನು ಎಂದರೇನು? ಈ ಕಾನೂನಿನಲ್ಲಿ ಯಾವ ಅಪರಾಧಕ್ಕೆ ಯಾವ ಶಿಕ್ಷೆ?
ಈ ಬಗ್ಗೆ ಪ್ರತಿಕ್ರಿಯಿಸಿದ ಡಿಡಬ್ಲ್ಯು ಸಂಸ್ಥೆಯ ಡೈರೆಕ್ಟರ್ ಜನರಲ್ ಪೀಟರ್ ಲಿಂಬರ್ಗ್, ಈ ಹತ್ಯೆಯನ್ನು ಖಂಡಿಸಿದ್ದಾರೆ. ತಾಲಿಬಾನ್ ಉಗ್ರರು ಪತ್ರಕರ್ತರು ಮತ್ತು ಅಫ್ಘಾನಿಸ್ತಾನದಲ್ಲಿರುವ ಅವರ ಕುಟುಂಬಗಳ ಮೇಲೆ ದಾಳಿ ಮಾಡಿರುವುದು ಖಂಡನೀಯ ಎಂದಿದ್ದಾರೆ.
“ತಾಲಿಬಾನ್ ಈಗಾಗಲೇ ಪತ್ರಕರ್ತರಿಗಾಗಿ ಕಾಬೂಲ್ ಮತ್ತು ಇತರೆ ಪ್ರಾಂತ್ಯಗಳಲ್ಲಿ ಸಂಘಟಿತ ಹುಡುಕಾಟಗಳನ್ನು ನಡೆಸುತ್ತಿದೆ ಎಂಬುದು ಸ್ಪಷ್ಟವಾಗಿದೆ. ನಾವು ನಮ್ಮ ಪತ್ರಕರ್ತರ ರಕ್ಷಣೆಗೆ ಪ್ರಯತ್ನ ಪಡುತ್ತೇವೆ ಎಂದಿದ್ದಲ್ಲದೇ, ತಾಲಿಬಾನ್ ನಮ್ಮ ಪತ್ರಕರ್ತರೊಬ್ಬರ ಹತ್ತಿರದ ಸಂಬಂಧಿಯನ್ನು ಹತ್ಯೆ ಮಾಡಿರುವುದು ದುರಂತ ಎಂದು ಅವರು ಹೇಳಿದ್ದಾರೆ.
ತಾಲಿಬಾನ್ ಕನಿಷ್ಠ ಮೂರು ಇತರ ಡಿಡಬ್ಲು ಪತ್ರಕರ್ತರ ಮನೆಗಳ ಮೇಲೆ ದಾಳಿ ಮಾಡಿದೆ ಎಂದು ಕೂಡ ಹೇಳಿದ್ದಾರೆ.
ಇನ್ನು, ಡಿಡಬ್ಲು ಮತ್ತು ಇತರ ಜರ್ಮನ್ ಮಾಧ್ಯಮ ಸಂಸ್ಥೆಗಳು ತಮ್ಮ ಅಫ್ಘಾನ್ ಸಿಬ್ಬಂದಿಗಳ ರಕ್ಷಣೆಗೆ ನಿಲ್ಲುವಂತೆ ತ್ವರಿತ ಕ್ರಮ ಕೈಗೊಳ್ಳುವಂತೆ ಜರ್ಮನ್ ಸರ್ಕಾರಕ್ಕೆ ಮನವಿ ಮಾಡಿಕೊಂಡಿವೆ
ಆದಾಗ್ಯೂ, ಡಿಎಬ್ಲು ಸಂಸ್ಥೆ ಹತ್ಯೆಗೊಳಗಾದ ತನ್ನ ಸಂಸ್ಥೆಯ ಪತ್ರಕರ್ತನ ಸಂಬಂಧಿಯ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ, ಮಾತ್ರವಲ್ಲದೇ ಎಲ್ಲಿ ಯಾವಾಗೀ ಘಟನೆ ಸಂಭವಿಸಿದೆ ಎನ್ನುವುದರ ಬಗ್ಗೆಯೂ ಯಾವ ಮಾಹಿತಿಯನ್ನು ಕೂಡ ನೀಡಿಲ್ಲ.
ಇದನ್ನೂ ಓದಿ : ಮುಂದಿನ ಲೋಕಸಭೆ ಚುನಾವಣೆಗೆ ಮೋದಿ ವಿರುದ್ಧ ಸೋನಿಯಾ ನೇತೃತ್ವದ ಮೈತ್ರಿ ಸೈನ್ಯ..?!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.