ಸಾವಿನ ವದಂತಿಗಳ ನಡುವೆ ತಾಲಿಬಾನ್ ನಾಯಕ ಹೈಬತುಲ್ಲಾ ಪ್ರತ್ಯಕ್ಷ!
Team Udayavani, Oct 31, 2021, 4:04 PM IST
ಕಾಬೂಲ್:- ತಾಲಿಬಾನ್‌ನ ಸರ್ವೋಚ್ಚ ನಾಯಕನಾಗಿದ್ದ , ಹೈಬತುಲ್ಲಾ ಅಖುಂದ್ಜಾದಾ(Haibatullah Akhundzada), ಅಫ್ಘಾನ್‌ನ ದಕ್ಷಿಣ ನಗರವಾದ ಕಂದಹಾರ್‌ನಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾನೆ ಎಂದು ತಾಲಿಬಾನ್ ಮೂಲಗಳು ಭಾನುವಾರ ತಿಳಿಸಿದ್ದು, ಅವನ ಸಾವಿನ ಬಗ್ಗೆ ಹರಿದಾಡಿದ್ದ ವ್ಯಾಪಕ ವದಂತಿಗಳನ್ನು ಸುಳ್ಳು ಮಾಡಿದೆ.
‘ಅಮೀರ್ ಉಲ್ ಮೊಮಿನೀನ್’ (ನಿಷ್ಠಾವಂತ ನಾಯಕ) ಎಂದು ಕರೆಯಲ್ಪಡುವ ಅಖುಂದ್ಜಾದಾ, ತಾಲಿಬಾನ್ ಆಗಸ್ಟ್ ನಲ್ಲಿ ಅಫ್ಘಾನ್ ದೇಶವನ್ನು ಸ್ವಾಧೀನಪಡಿಸಿಕೊಂಡ ನಂತರವೂ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ, ಇದು ಊಹಾಪೋಹಗಳಿಗೆ ಕಾರಣವಾಗಿತ್ತು.
ಶನಿವಾರ ಕಂದಹಾರ್‌ನಲ್ಲಿರುವ ಧಾರ್ಮಿಕ ಶಾಲೆಯಾದ ಜಾಮಿಯಾ ದಾರುಲ್ ಅಲೂಮ್ ಹಕಿಮಿಯಾಗೆ ಈತ ಭೇಟಿ ನೀಡಿದ್ದನು ಎಂದು ಹೈಬತುಲ್ಲಾ ಅಖುಂದ್ಜಾದಾನೊಂದಿಗೆ ಹಾಜರಿದ್ದ ಹಿರಿಯ ತಾಲಿಬಾನ್ ನಾಯಕ ರಾಯಿಟರ್ಸ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾನೆ.
ಇದನ್ನೂ ಓದಿ:- ಮೃತರ ಕುಟುಂಬಕ್ಕೆ ವೈಯುಕ್ತಿಕ ಪರಿಹಾರ ವಿತರಿಸಿದ ನಡಹಳ್ಳಿ
ಯುಎಸ್ ನೇತೃತ್ವದ ಸೇನಾ ಪಡೆಗಳನ್ನು ಅಫ್ಘಾನ್‌ನಿಂದ ಹಿಂತೆಗೆದುಕೊಂಡ ನಂತರ ಸೆಪ್ಟೆಂಬರ್‌ನಲ್ಲಿ ಇಸ್ಲಾಮಿಸ್ಟ್ ಚಳವಳಿಯು ತನ್ನ ಮಧ್ಯಂತರ ಸರ್ಕಾರವನ್ನು ಅನಾವರಣಗೊಳಿಸುತ್ತಿದ್ದಂತೆ ಈತ ಸಾರ್ವಜನಿಕವಾಗಿ ಮರೆಯಾಗಿದ್ದ. ಅಖುಂದ್ಜಾದಾ 2016 ರಿಂದ ತಾಲಿಬಾನ್‌ನ ಸರ್ವೋಚ್ಚ ನಾಯಕನ ಪಾತ್ರವನ್ನು ಉಳಿಸಿಕೊಂಡಿದ್ದನು ಮತ್ತು ಗುಂಪು ರಾಜಕೀಯ, ಧಾರ್ಮಿಕ ಮತ್ತು ಮಿಲಿಟರಿ ವ್ಯವಹಾರಗಳ ಮೇಲಿನ ಅಂತಿಮ ಅಧಿಕಾರ ಅವನದ್ದಾಗಿತ್ತು .ಕೆಲವು ಅಧಿಕಾರಿಗಳು ಹೇಳುವಂತೆ ಅಖುಂದ್ಜಾದಾ ಈ ಹಿಂದೆ ಸಾರ್ವಜನಿಕವಾಗಿ ಪ್ರಕಟವಾಗದ ರೀತಿಯಲ್ಲಿ ಕಾಣಿಸಿಕೊಂಡಿದ್ದಾನೆ.
ಈ ಹಿಂದೆ, ತಾಲಿಬಾನ್ ತಮ್ಮ ಸಂಸ್ಥಾಪಕ ಮತ್ತು ಮೂಲ ಸರ್ವೋಚ್ಚ ನಾಯಕ ಮುಲ್ಲಾ ಒಮರ್ ಅವರ ಸಾವನ್ನು ವರ್ಷಗಳವರೆಗೆ ದೃಢಪಡಿಸಿರಲಿಲ್ಲ. ಈಗ ಈತ ಮತ್ತೆ ಪ್ರತ್ಯಕ್ಷವಾಗಿರುವುದು ಊಹಾಪೋಹಗಳಿಗೆ ತೆರೆಬೀಳಲು ಕಾರಣವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
Israel ನಡೆಸಿದ ಭಾರೀ ದಾಳಿಗೆ ಸಿರಿಯಾದಲ್ಲಿ ಲಘು ಭೂಕಂಪನ!
New York: ಅಮೆರಿಕದಲ್ಲಿ ಶೂಟೌಟ್: ಇಬ್ಬರ ಕೊಂದು ವಿದ್ಯಾರ್ಥಿನಿ ಆತ್ಮಹ*ತ್ಯೆ
Moscow: ಕೆಮಿಕಲ್ ಅಸ್ತ್ರ ಬಳಸಿದ್ದ ರಷ್ಯಾ ಪರಮಾಣು ರಕ್ಷಣಾಪಡೆ ಮುಖ್ಯಸ್ಥನ ಹತ್ಯೆ
Watch Video: ದ್ವೀಪರಾಷ್ಟ್ರ ವನವಾಟುನಲ್ಲಿ ಪ್ರಬಲ ಭೂಕಂಪ, ಹಲವಾರು ಕಟ್ಟಡ ಕುಸಿತ
MUST WATCH
ಹೊಸ ಸೇರ್ಪಡೆ
Chikkamagaluru: ಮೂರು ದಿನದ ಬಾಣಂತಿ ಮೃತ್ಯು; ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಆರೋಪ
Udupi: ಧೂಳು ತಿನ್ನುತ್ತಿದೆ ಉಡುಪಿ ಉಪ ವಿಭಾಗ ಪ್ರಸ್ತಾವ
Coastalwood: ರೂಪೇಶ್ ಶೆಟ್ಟಿ ನಿರ್ದೇಶನದ “ಜೈ” ಸಿನಿಮಾದ ಎರಡನೇ ಹಂತದ ಚಿತ್ರೀಕರಣ ಮುಕ್ತಾಯ
Kundapura: ರಾಷ್ಟ್ರೀಯ ಹೆದ್ದಾರಿ; ಮುಗಿಯದ ಕಿರಿಕಿರಿ
Mangaluru; ಕೆಲರೈ- ವಾಮಂಜೂರು ಸಂಪರ್ಕ ರಸ್ತೆ ಅವ್ಯವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.