ವೈರಲ್ ವೀಡಿಯೋ | ಹಿಜಾಬ್ ಇಲ್ಲದ ಮಹಿಳೆ, ಕತ್ತರಿಸಿದ ಕಲ್ಲಂಗಡಿ ಹಣ್ಣಿನಂತೆ : ತಾಲಿಬಾನ್ ಉಗ್ರ
Team Udayavani, Sep 8, 2021, 2:14 PM IST
ಪ್ರಾತಿನಿಧಿಕ ಚಿತ್ರ
ಕಾಬೂಲ್ : ಅಫ್ಗಾನಿಸ್ತಾನವನ್ನು ವಶಪಡಿಸಿಕೊಂಡು ಕೆಲವೇ ಕೆಲವು ದಿನಗಳಲ್ಲಿ ತನ್ನ ಸರ್ಕಾರ ರಚನೆ ಮಾಡಿರುವ ತಾಲಿಬಾನ್ ಉಗ್ರ ಪಡೆ, ಈಗ ತನ್ನ ಶರಿಯಾ ನಿಯಮಾವಳಿಗಳನ್ನು ದೇಶದಲ್ಲಿ ಹೇರುವುದಕ್ಕೆ ಮುಂದಾಗುತ್ತಿದೆ.
ಇತ್ತೀಚೆಗೆ ಅಲ್ಲಿನ ಒಂದು ಸ್ಥಳಿಯ ಮಾಧ್ಯಮದ ಸಂದರ್ಶನವೋಂದರಲ್ಲಿ ಭಾಗಿಯಾಗಿ ಮಾತನಾಡಿದ ತಾಲಿಬಾನ್ ಉಗ್ರ ಪಡೆಯ ಪ್ರಮುಖ ಮುಖಂಡರು, ಹಿಜಾಬ್ ಇಲ್ಲದ ಮಹಿಳೆಯರನ್ನು ಕತ್ತರಿಸಿದ ಕಲ್ಲಂಗಡಿ ಇದ್ದ ಹಾಗೆ ಎಂದು ಹೇಳಿರುವುದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಾಮಾಜಿಕ ಜಾಲತಾಣಗಳ ದೈತ್ಯ ಟ್ವೀಟರ್ ನಲ್ಲಿ ಈ ವೀಡಿಯೋ ವೈರಲ್ ಆಗಿದ್ದು, ತಾಲಿಬಾನ್ ಉಗ್ರರ ವಿವಾದಾತ್ಮಕ ಹೇಳಿಕೆಗೆ ಟ್ವೀಟರ್ ಬಳಕೆದಾರರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಇದನ್ನೂ ಓದಿ : ಸಾರ್ವಜನಿಕ ಗಣೇಶೋತ್ಸವ ಆಚರಣೆ, ಮೆರವಣಿಗೆಗೆ ಅವಕಾಶ ಇಲ್ಲ: ದೆಹಲಿ ಸರ್ಕಾರ
ಸಂದರ್ಶನದಲ್ಲಿ ತಾಲಿಬಾನ್ ಉಗ್ರ ಪಡೆಯ ಮುಖಂಡನೊಬ್ಬ, ಹಿಜಾಬ್ ಇಲ್ಲದ ಮಹಿಳೆಯರು ಕತ್ತರಿಸಿದ ಕಲ್ಲಂಗಡಿ ಹಣ್ಣಿನಂತೆ. ನೀವು ಇಡಿಯ ಕಲ್ಲಂಗಡಿ ಹಣ್ಣನ್ನು ಖರೀದಿಸುವಿರೋ ಅಥವಾ ಕತ್ತರಿಸಿದ ಕಲ್ಲಂಗಡಿ ಹಣ್ಣನ್ನು ಖರೀದಿಸುವಿರೋ ಎಂದು ಪ್ರಶ್ನಿಸಿದ್ದು, ವೈರಲ್ ಆದ ವೀಡಿಯೋ ದಲ್ಲಿ ದಾಖಲಾಗಿದೆ.
A Taliban official in an interview in Kabul on the importance of Hijab: “Do you buy a sliced melon or an intact melon? . Of course the intact one. A woman without Hijab is like a sliced melon ?”pic.twitter.com/9lHpQnohyd
— Zia Shahreyar l ضیا شهریار (@ziashahreyar) September 6, 2021
ಇನ್ನು, ನಿನ್ನೆ (ಸಪ್ಟೆಂಬರ್ 7) ತಾಲಿಬಾನ್ ಉಗ್ರ ಪಡೆ ತನ್ನ ಸರ್ಕಾರವನ್ನು ರಚಿಸಿದ್ದು, ಶರಿಯಾ ಕಾನೂನನ್ನು ಅಫ್ಗಾನಿಸ್ತಾನದಲ್ಲಿ ಜಾರಿಗೆ ತಂದಿದೆ. ವಿಶ್ವ ಸಂಸ್ಥೆಯ ಭಯೋತ್ಪಾದಕ ಪಟ್ಟಿಯಲ್ಲಿರುವ ತಾಲಿಬಾನ್ ನಾಯಕ ಮೊಹಮ್ಮದ್ ಹಸನ್ ಅಖುಂದ್ ಹೊಸ ಪ್ರಧಾನಿ ಯಾಗಿದ್ದಾನೆ. ಅಬ್ದುಲ್ ಘನಿ ಬರಾದರ್ ಉಪ ಪ್ರಧಾನಿಯಾದರೆ, ಜಾಗತಿಕ ಉಗ್ರ ಸಿರಾಜುದ್ದೀನ್ ಹಖಾನಿಯನ್ನು ಆಂತರಿಕ ಸಚಿವ(ಗೃಹ ಸಚಿವ) ಎಂದು ಘೋಷಿಸಲಾಗಿದೆ.
ದೋಹಾ ಟೀಂ ಮತ್ತು ಹಖಾನಿ ತಂಡದ ಸಮ್ಮಿಶ್ರಣದಲ್ಲಿ ಹೊಸ ಸರ್ಕಾರ ರಚನೆಯಾಗಿದೆ. ಇದು ಮಧ್ಯಂತರ ಸರ್ಕಾರವೆಂದು ತಾಲಿಬಾನ್ ಹೇಳಿಕೊಂಡಿದೆ. ಮುಲ್ಲಾ ಒಮರ್ ನ ಪುತ್ರ ಮುಲ್ಲಾ ಮೊಹಮ್ಮದ್ ಯಾಕೂಬ್ ರಕ್ಷಣೆ, ಹಿದಾಯಿ ತುಲ್ಲಾ ಬದ್ರಿ ಹಣಕಾಸು, ಆಮೀರ್ ಖಾನ್ ಮುತ್ತಾ ಖೀ ವಿದೇಶಾಂಗ, ಶೇರ್ ಅಬ್ಟಾಸ್ ಸ್ಟಾನಿಕ್ ಝೈ ಉಪ ವಿದೇಶಾಂಗ ಸಚಿವ, ಅಬ್ದುಲ್ ಹಕೀಮ್ ಕಾನೂನು ಸಚಿವ, ಕೈರುಲ್ಲಾಹ್ ಖೈರುಕ್ವಾ ಮಾಹಿತಿ ಸಚಿವ, ಜಬೀಯುಲ್ಲಾಹ್ ಮುಜಾಹಿದ್ ಉಪ ಮಾಹಿತಿ ಸಚಿವನಾಗಿದ್ದಾನೆ.
ಸದ್ಯ ಈ ಹೆಸರುಗಳನ್ನು ಪ್ರಕಟಿಸಲಾಗಿದ್ದು, ಉಳಿದ ಸಚಿವರ ಹೆಸರುಗಳನ್ನು ಮುಂದೆ ಪ್ರಕಟಿಸಲಾಗುತ್ತದೆ ಎಂದು ತಾಲಿಬಾನ್ ಉಗ್ರ ಪಡೆಯ ವಕ್ತಾರ ಜಬೀವುಲ್ಲಾಹ್ ಮುಜಾಹಿದ್ ಹೇಳಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ : ಗಾಂಜಾ ನಶೆಯಲ್ಲಿ ಮಚ್ಚು, ಲಾಂಗು ಝಳಪಿಸಿ ಪೊಲೀಸರ ಅತಿಥಿಗಳಾದ ಯುವಕರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್ ಪರೀಕ್ಷೆ
Iran: ಹಿಜಾಬ್ ನಿರಾಕರಿಸಿದರೆ ವಿಶೇಷ ಕ್ಲಿನಿಕ್: ಇರಾನ್ ತೀರ್ಮಾನಕ್ಕೆ ಆಕ್ರೋಶ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
MUST WATCH
ಹೊಸ ಸೇರ್ಪಡೆ
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Maharashtra Election: ಬೂತ್ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.