Taliban; ಅಫ್ಘಾನ್ ಮನೆಗಳಿಗಿನ್ನು ಕಿಟಕಿ ಇರಬಾರದು!
ಕಿಟಕಿ ಇದ್ದರೆ ಅನ್ಯರಿಗೆ ಸ್ತ್ರೀದರ್ಶನ ಎಂಬ ಕಾರಣ
Team Udayavani, Dec 31, 2024, 6:45 AM IST
ಕಾಬೂಲ್: ಅಫ್ಘಾನಿಸ್ಥಾನದಲ್ಲಿ 2021ರಿಂದ ಮತ್ತೆ ಆಡಳಿತವನ್ನು ಕೈವಶ ಮಾಡಿಕೊಂಡಿರುವ ತಾಲಿಬಾನ್ ಉಗ್ರರ ಆಡಳಿತವು ಮಹಿಳೆಯರ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುತ್ತ ಬಂದಿದೆ. ಅದಕ್ಕೆ ಹೊಸ ಸೇರ್ಪಡೆ ಎಂಬಂತೆ ಈಗ ದೇಶದಲ್ಲಿ ಹೊಸ ಮನೆ, ಕಟ್ಟಡಗಳನ್ನು ನಿರ್ಮಿಸುವುದಿದ್ದರೆ ಅವುಗಳಿಗೆ ಕಿಟಕಿಗಳನ್ನು ಅಳವಡಿಸಬಾರದು ಎಂದು ಫರ್ಮಾನು ಹೊರಡಿಸಿದೆ.
ಅಂಗಳ, ಅಡುಗೆಮನೆ, ನೆರೆಹೊರೆಯ ಪ್ರಾಂಗಣ ಮತ್ತು ಸಾಮಾನ್ಯವಾಗಿ ಮಹಿಳೆ ಯರ ಇರುವಿಕೆ ಕಾಣುವಂಥ ಸ್ಥಳಗಳಲ್ಲಿ ಅವರನ್ನು ಹೊರಗಿನವರು ನೋಡದಂತೆ ತಡೆಯಲು ಆದೇಶ ಹೊರಡಿಸಿರುವುದಾಗಿ ತಾಲಿಬಾನ್ ಸರಕಾರ ಹೇಳಿದೆ. ಕಿಟಕಿಗಳಿದ್ದರೆ ಅವುಗಳ ಮೂಲಕ ಬಾವಿಗಳಿಂದ ಮಹಿಳೆ ಯರು ನೀರೆತ್ತುವುದನ್ನೂ ನೋಡಬಹು ದಾಗಿದ್ದು, ಇದು ಅಶ್ಲೀಲ ಕೃತ್ಯಗಳಿಗೆ ಕಾರಣ ವಾಗಬಹುದು. ಹೀಗಾಗಿ ಹೊಸ ಮನೆಗಳಿಗೆ ಕಿಟಕಿ ಬೇಡ ಎಂದು ತಾಲಿಬಾನ್ ಸರಕಾರ ಸೂಚಿಸಿದೆ.
ಮಹಿಳೆಯರ ನೇಮಕಕ್ಕೆ ನಿಷೇಧ
ಅಫ್ಘಾನಿಸ್ಥಾನದಲ್ಲಿ ಕಾರ್ಯ ನಿರ್ವಹಿಸುವ ಎನ್‌ಜಿಒಗಳಲ್ಲಿ ಮಹಿಳೆಯರ ನೇಮಕವನ್ನೂ ನಿಷೇಧಿಸಿ ತಾಲಿಬಾನ್ ಸರಕಾರ ಆದೇಶ ಹೊರಡಿಸಿದೆ. ರಾಷ್ಟ್ರೀಯ ಮತ್ತು ವಿದೇಶಿ ಎನ್‌ಜಿಒಗಳಲ್ಲಿ ಕೆಲಸ ಮಾಡುವ ಮಹಿಳೆಯರು ಇಸ್ಲಾಂ ಸಂಪ್ರದಾಯದ ಪ್ರಕಾರ ಸರಿಯಾಗಿ ಹಿಜಾಬ್ ಧರಿಸುತ್ತಿಲ್ಲ. ಹೀಗಾಗಿ ಮಹಿಳೆಯರನ್ನು ಕೂಡಲೇ ಕೆಲಸದಿಂದ ವಜಾ ಮಾಡಬೇಕು. ಮುಂದೆ ಅವರನ್ನು ನೇಮಿಸಿಕೊಳ್ಳಬಾರದು. ಈ ಆದೇಶ ಪಾಲಿಸುವಲ್ಲಿ ಎನ್‌ಜಿಒಗಳು ವಿಫಲವಾದರೆ ಸಂಸ್ಥೆಗಳ ಪರವಾನಿಗೆಯನ್ನೇ ರದ್ದುಪಡಿಸುವುದಾಗಿ ತಾಲಿಬಾನ್ ಆಡಳಿತ ತಾಕೀತು ಮಾಡಿದೆ.
ಇರುವ ಕಿಟಕಿ ಮುಚ್ಚಿ
ಈಗಾಗಲೇ ನಿರ್ಮಿಸಲಾಗಿರುವ ಮನೆ, ಕಟ್ಟಡಗಳಲ್ಲಿ ಕಿಟಕಿಗಳಿದ್ದರೆ ಕೂಡಲೇ ಮುಚ್ಚಬೇಕು ಎಂದು ತಾಲಿಬಾನ್ ವಕ್ತಾರ ಝಬಿಯುಲ್ಲಾ ಮುಜಾಹಿದ್ ಹೇಳಿದ್ದಾನೆ. ಕಟ್ಟಡಗಳಲ್ಲಿ ಈಗಾಗಲೇ ಇರುವ ಕಿಟಕಿಗಳನ್ನು ಮುಚ್ಚಲಾಗಿದೆಯೇ ಅಥವಾ ಕಿಟಕಿಗಳು ಇಲ್ಲದೆ ಹೊಸ ಕಟ್ಟಡಗಳನ್ನು ನಿರ್ಮಿಸಲಾಗಿದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸುವ ಹೊಣೆಯನ್ನು ಸ್ಥಳೀಯ ಆಡಳಿತ ವ್ಯವಸ್ಥೆಗೆ ವಹಿಸಲು ತೀರ್ಮಾನಿಸಿದೆ.
ಮಹಿಳೆಯರು ಉನ್ನತ ಶಿಕ್ಷಣ ಪಡೆಯಬಾರದು ಎಂಬ ಬಗ್ಗೆಯೂ ತಾಲಿಬಾನ್ ಆಡಳಿತ ಈ ಹಿಂದೆ ಎಚ್ಚರಿಕೆ ನೀಡಿತ್ತು. ಕೇವಲ ಪ್ರಾಥಮಿಕ ತರಗತಿಯವರೆಗೆ ಮಾತ್ರ ಶಿಕ್ಷಣ ಸಾಕು ಎಂಬ ಧೋರಣೆಯನ್ನು ಅವರು ಹೊಂದಿದ್ದಾರೆ. ಇದರ ಜತೆಗೆ ಮಹಿಳೆಯರ ಉದ್ಯೋಗಕ್ಕೂ ಅಫ್ಘಾನ್‌ನಲ್ಲಿ ನಿಷೇಧ ಹೇರಲಾಗಿದೆ. ದೊಡ್ಡ ಧ್ವನಿಯಿಂದ ಪವಿತ್ರ ಕುರಾನ್ ಪಠಿಸುವುದನ್ನೂ ತಾಲಿಬಾನ್ ಆಡಳಿತ ನಿಷೇಧಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Explainer: ಹೊಸ ವರ್ಷದ ಆಘಾತ-27 ಗಂಟೆಯಲ್ಲಿ ಅಮೆರಿಕದ ನೆಲದಲ್ಲಿ 3 ಭಯೋ*ತ್ಪಾದಕ ದಾಳಿ!
Thumbay Group; ಶಾರ್ಜಾದಲ್ಲಿ ಮೊದಲ ಖಾಸಗಿ ಮನೋವೈದ್ಯಕೀಯ ಪುನರ್ ವಸತಿ ಆಸ್ಪತ್ರೆ
Burqa ban; ಸ್ವಿಟ್ಜರ್ಲೆಂಡ್ ನಲ್ಲಿ ಬುರ್ಖಾ ನಿಷೇಧ ಕಾನೂನು ಜಾರಿ: ಗರಿಷ್ಠ ದಂಡ
Court Verdict: ಹಿಂದೂ ಸಂತ ಚಿನ್ಮಯ್ ದಾಸ್ ಜಾಮೀನು ಅರ್ಜಿ ತಿರಸ್ಕರಿಸಿದ ಕೋರ್ಟ್
Chinmay Das: ಇಂದು ಬಾಂಗ್ಲಾದಲ್ಲಿ ಚಿನ್ಮಯ್ ದಾಸ್ ಬೇಲ್ ಅರ್ಜಿ ವಿಚಾರಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Test; ಸಿಡ್ನಿ ಸಂಘರ್ಷಕ್ಕೆ ಭಾರತ ಸಿದ್ಧ :ರೋಹಿತ್-ಗಂಭೀರ್ ಮನಸ್ತಾಪ ತೀವ್ರ?
ಜೈಲಲ್ಲಿ ತಾರತಮ್ಯ ತಪ್ಪಿಸಲು ಕೇಂದ್ರದಿಂದ ಕೈಪಿಡಿ ತಿದ್ದುಪಡಿ
Lalu Prasad Yadav: “ಐಎನ್‌ಡಿಐಎ’ಗೆ ಬರೋದಿದ್ದರೆ ನಿತೀಶ್‌ಗೆ ಸ್ವಾಗತ
Dawood Ibrahim: 23 ವರ್ಷಗಳ ಹಿಂದೆ ಖರೀದಿಸಿದ್ದ ದಾವೂದ್ ಆಸ್ತಿ ಈಗ ವರ್ಗಾವಣೆ
Udupi; ಗೀತಾರ್ಥ ಚಿಂತನೆ 144: ವೇದಗಳಿಗೆ ಇನ್ನೊಂದು ಅಪೌರುಷೇಯವಿಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.